ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ನೇಮಕಾತಿ…

ಕೆವಿಎಎಷ್ಎಸ್ಯು ಅಂದರೆ ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಇಲ್ಲಿ ಖಾಲಿ ಇರುವ ಅನೇಕ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2023ರ ಮಾರ್ಚ್ 2ರಂದು ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಹೊರಡಿಸಿರುವ ಪ್ರಕಟಣೆಯ ಪ್ರಕಾರ ಖಾಲಿ ಇರುವ ಹುದ್ದೆಗಳ ವಿವರ ಅವುಗಳಿಗೆ ನಿಗದಿ ಆಗಿರುವ ವೇತನ ವಯೋಮಿತಿ, ವಯೋಮಾನ ಸಡಿಲಿಕೆ ಮತ್ತು ಅರ್ಜಿ ಸಲ್ಲಿಕೆ ವಿಧಾನ ಹಾಗೂ ಅರ್ಜಿ ಸಲ್ಲಿಕೆಗೆ ಇರುವ ಅಂತಿಮ ದಿನಾಂಕ ಈ ಎಲ್ಲದರ ಕುರಿತು ಮಾಹಿತಿ ಈ ಲೇಖನದಲ್ಲಿ ಇದೆ. ಇದನ್ನು ಪೂರ್ತಿಯಾಗಿ ಓದಿ, ಸರಿಯಾಗಿ ಅರ್ಜಿ ಸಲ್ಲಿಸಿ ಈ ಹುದ್ದೆಗಳಿಗೆ ಆಯ್ಕೆ ಆಗಿ.

ಕರ್ನಾಟಕ ಪಶು ವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯವು ಈ ನೇಮಕಾತಿ ಮಾಡಿಕೊಳ್ಳುತ್ತಿದೆ. ಆಯ್ಕೆ ಆಗುವ ಎಲ್ಲಾ ಅಭ್ಯರ್ಥಿಗಳು ಕೂಡ ಬೀದರ್ ಜಿಲ್ಲೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಪ್ರಕಟಣೆಯಲ್ಲಿ ವೇತನದ ವಿವರ 57700 ರಿಂದ 2,18,200 ಎಂದು ತಿಳಿಸಲಾಗಿದೆ. ಹುದ್ದೆಗಳಿಗನುಸಾರವಾಗಿ ವಿವರ ಈ ರೀತಿ ಇದೆ ಖಾಲಿ ಇರುವ ಹುದ್ದೆಗಳಾದ ಪ್ರೊಫೆಸರ್ ಹಾಗೂ ಅಸೋಸಿಯೇಟೆಡ್ ಪ್ರೊಫೆಸರ್ ಹುದ್ದೆಗಳಿಗೆ ವಿದ್ಯಾರ್ಹತೆಯು ವೆಟರ್ನರಿ ಸೈನ್ಸ್ ಅಥವಾ ಅನಿಮಲ್ ಹಸ್ಬೆಂಡರಿ ಈ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಪಿಎಚ್ಡಿ ಮಾಡಿದವರು ಅರ್ಜಿ ಸಲ್ಲಿಸಬಹುದು. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೂ ಕೂಡ ವೆಟರ್ನರಿ ಸೈನ್ಸ್ ಅಥವಾ ಆನಿಮಲ್ ಹಸ್ಬೆಂಡರಿ ಈ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು ಪಿ ಎಚ್ ಡಿ ಅಥವಾ ಎಮ್.ಫಿಲ್ ಮಾಡಿದವರು ಅರ್ಜಿ ಸಲ್ಲಿಸಬಹುದು.

ಅಧಿಕೃತ ವೆಬ್ಸೈಟ್ ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ. 

ಹುದ್ದೆಗಳಿಗನುಸಾರ ಆಯ್ಕೆ ಆದವರ ವೇತನದ ವಿವರ ಈ ರೀತಿ ಇದೆ. ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆ ಆದವರಿಗೆ ಮಾಸಿಕವಾಗಿ 1,44,200 ರಿಂದ 2,18,200 ರೂ. ಅಸೋಸಿಯೇಟೆಡ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆ ಆದವರಿಗೆ 1,31,400 ರಿಂದ 2,17,100 ರೂ. ಮತ್ತು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಆಯ್ಕೆ ಆದವರಿಗೆ 57700ರೂ ಇಂದ 1,82,400 ರೂ ಮಾಸಿಕ ವೇತನವಾಗಿ ಸಿಗಲಿದೆ. ಈ ಅಧಿಸೂಚನೆಗಳ ಪ್ರಕಾರ ವಯೋಮಿತಿಯು ಮೇಲ್ಕಂಡ ಮೂರು ಹುದ್ದೆಗಳಿಗೂ ಕೂಡ ಗರಿಷ್ಠ 35 ವರ್ಷ. ಆದರೆ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಮತ್ತು ಎಸ್ಸಿ ಎಸ್ಟಿ ಕ್ಯಾಟಗರಿ-1 ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಾನ ಸಡಲಿಕೆ ಇದೆ. ಅರ್ಜಿ ಶುಲ್ಕವು ಎಸ್ಸಿ, ಎಸ್ಟಿ ಮತ್ತು ಕ್ಯಾಟಗರಿ-ಒನ್ ಅಭ್ಯರ್ಥಿಗಳಿಗೆ 500 ರೂ ಮತ್ತು ಜನರಲ್ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 1000 ರೂ, ಆನ್ಲೈನ್ ಮೂಲಕವೇ ಶುಲ್ಕ ಕಟ್ಟಲು ಕೂಡ ತಿಳಿಸಲಾಗಿದೆ.

ಅಧಿಸೂಚನೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಈ ಮೇಲ್ಕಂಡ ಹುದ್ದೆಗಳನ್ನು ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಮತ್ತೊಂದು ಮುಖ್ಯ ಮಾಹಿತಿ ಏನೆಂದರೆ, ಈಗಾಗಲೇ ಇದರ ಅರ್ಜಿ ಸಲ್ಲಿಕೆ ಪ್ರಕ್ರಿಯೆ 25.02.2023ರಿಂದಲೇ ಆರಂಭ ಆಗಿದೆ. 26.3.20123 ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ಆಗಿದ್ದು ಅಷ್ಟರೊಳಗೆ ಬರುವ ಅರ್ಜಿಗಳು ಮಾತ್ರ ಮಾನ್ಯ ಆಗುತ್ತವೆ. ಅಧಿಕೃತ ವೆಬ್ಸೈಟ್ಗೆ ಬೇಟಿಕೊಟ್ಟು ಅರ್ಜಿ ಸಲ್ಲಿಸಬಹುದಾಗಿದೆ.

ಆನ್ಲೈನ್ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.