Video; ಈ ವ್ಯಕ್ತಿಯ ಟ್ಯಾಲೆಂಟ್ ಗೆ ಒಂದು ಸಲಾಂ! ಇಂಟರ್ನೆಟ್ ನಲ್ಲಿ ವೈರಲ್ ಆದ, ತನ್ನ ವಿಶೇಷ ಕಲೆಯಿಂದ.
ಜಗತ್ತಿನಲ್ಲಿ ಟ್ಯಾಲೆಂಟ್ ತುಂಬಿದ ವ್ಯಕ್ತಿಗಳಿಗೇನು ಕಡಿಮೆ ಇಲ್ಲ. ದೇಶದ ಪ್ರತಿಯೊಂದು ನಗರ, ಪಟ್ಟಣ, ಓಣಿಯಲ್ಲಿ ಟ್ಯಾಲೆಂಟ್ ನಿಂದ ಕೂಡಿದ ವ್ಯಕ್ತಿಗಳು ತುಂಬಿದ್ದಾರೆ. ಇಂಥವರಲ್ಲಿ ಕೆಲವರು ಇಡೀ ಜಗತ್ತೇ ಬೆರಗಾಗುವಂತಹ ಅದ್ಭುತ ಕೆಲಸವನ್ನು ಮಾಡಿ ತೋರಿಸುತ್ತಾರೆ. ಈಗ ಇಲ್ಲಿ ನೋಡುವ ವಿಡಿಯೋ ಸಹ ತುಂಬಾ ವಿಶೇಷ ವ್ಯಕ್ತಿಯದ್ದಾಗಿದೆ.
ಪ್ರತಿಯೊಂದು ವ್ಯಕ್ತಿಯ ಹತ್ತಿರ ಏನಾದರೂ ಒಂದು ವಿಶೇಷ ಕಲೆ ಅಥವಾ ಟ್ಯಾಲೆಂಟ್ ಅಡಗಿರುತ್ತದೆ. ಮೊದಲು ಈ ರೀತಿಯ ಕಲೆಗಳು ತುಂಬಾ ಸೀಮಿತವಾಗಿರುತ್ತಿದ್ದವು, ಹೆಚ್ಚು ಜನರಿಗೆ ಗೊತ್ತಿರುತ್ತಿರಲಿಲ್ಲ. ಸದ್ಯ ಇಂಟರ್ನೆಟ್ ಜಗತ್ತಿನಿಂದಾಗಿ ಟ್ಯಾಲೆಂಟ್ ಇರುವ ವ್ಯಕ್ತಿಗಳು ಕ್ಷಣದಲ್ಲಿ ಎಲ್ಲ ಕಡೆಗೆ ವೈರಲ್ ಆಗುತ್ತಿದ್ದಾರೆ.
ಈಗ ಇಲ್ಲಿ ನೋಡಲಿರುವ ವ್ಯಕ್ತಿ ಅನೇಕ ಪ್ರಾಣಿ, ಪಕ್ಷಿಗಳು ಕೂಗುವಂತೆ ಸೇಮ್ ಟು ಸೇಮ್ ನಕಲು ಮಾಡಿ ತೋರಿಸುತ್ತಿದ್ದಾನೆ. ಆತ ಮಾಡುವ ಈ ನಕಲಿನ ಟ್ಯಾಲೆಂಟ್ ನಿಜಕ್ಕೂ ಅದ್ಭುತವಾಗಿದೆ. ಆತ ಒಂದರ ನಂತರ ಒಂದು ಜೀವಿಯ ಶಬ್ದವನ್ನು ಅಥವಾ ಕೂಗುವ ಸ್ಟೈಲಿನ ಧ್ವನಿ ತೆಗೆಯುತ್ತಾನೆ. ಇಲ್ಲಿ ಕೋಗಿಲೆ, ಕತ್ತೆ, ಕಾಗೆ, ನವಿಲು, ಹುಲಿ, ಕುದುರೆ ಹೀಗೆ ಹತ್ತು ಹಲವು ಜೀವಿಗಳ ಕೂಗುವಿಕೆಯನ್ನು ತುಂಬಾ ಸುಂದರವಾಗಿ ನಕಲು ಮಾಡುತ್ತಾನೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು bittu.9903 ಹೆಸರಿನ ಐಡಿಯಿಂದ ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದೆ. ಮತ್ತು ಸುಮಾರು ಮೂರು ಲಕ್ಷಗಳವರೆಗೆ ಪ್ರಸ್ತುತ ವಿಡಿಯೋ ಮೆಚ್ಚುಗೆಯನ್ನು ಗಳಿಸಿದೆ, ಹಾಗೂ 2000 ಕ್ಕೂ ಮೇಲ್ಪಟ್ಟು ಜನರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ.