One Day ಡೇಬ್ಯು ಪಂದ್ಯದಲ್ಲಿ ಎಲ್ಲಕ್ಕೂ ಹೆಚ್ಚು ರನ್ ಗಳಿಸಿದ 3 ಭಾರತೀಯ ಬ್ಯಾಟ್ಸ್ಮನ್ ಗಳು; ಮೂರಕ್ಕೆ ಮೂವರು ಕನ್ನಡಿಗರೇ!
ಯಾವುದೇ ಆಟಗಾರ ದೇಶದ ಪರವಾಗಿ ಒಂದಲ್ಲ ಒಂದು ದಿನ ಆಡಲೇಬೇಕು ಎಂಬ ಕನಸನ್ನು ಹೊತ್ತಿಕೊಂಡಿರುತ್ತಾನೆ. ಇದರಲ್ಲಿ ಕ್ರಿಕೆಟ್ ಆಟವು ಹೊರತಾಗಿಲ್ಲ. ಕೆಲವು ಆಟಗಾರರ ಕನಸು ನನಸಾಗುತ್ತದೆ, ಇನ್ನು ಕೆಲವರ ಕನಸು ಹಾಗೆ ಉಳಿಯುತ್ತದೆ. ಭಾರತೀಯ ಟೀಮಿನಲ್ಲಿ ಇಲ್ಲಿಯವರೆಗೆ ಅನೇಕ ಜಬರ್ ದಸ್ತ ಬ್ಯಾಟ್ಸ್ ಮನ್ ಗಳು ಆಗಿ ಹೋಗಿದ್ದಾರೆ, ಮತ್ತು ಪ್ರಸ್ತುತ ಟೀಮಿನಲ್ಲೂ ಇದ್ದಾರೆ.
ಆದರೆ ನಾವಿಲ್ಲಿ ಚರ್ಚಿಸುತ್ತಿರುವದು ತಮ್ಮ ಮೊದಲ ಅಂತಾರಾಷ್ಟ್ರೀಯ ಮ್ಯಾಚ್ ನಲ್ಲಿ ಭಾರತದ ಪರವಾಗಿ ಎಲ್ಲಕ್ಕೂ ಹೆಚ್ಚು ರನ್ ಗಳನ್ನು ಸೇರಿಸಿದವರಾದ ಟಾಪ್ 3 ಬ್ಯಾಟ್ಸ್ ಮನ್ ಗಳ ಬಗ್ಗೆ.
ಈ ಹೆಸರುಗಳಲ್ಲಿ ಅಭಿಮಾನ ಪಡುವಂತಹ ಅಥವಾ ಗರ್ವ ಪಡುವಂತಹ ವಿಷಯವೇನೆಂದರೆ ಈ ಟಾಪ್ ಮೂವರಲ್ಲಿ ಮೂವರು ಕರ್ನಾಟಕದವರೇ ಆಗಿದ್ದಾರೆ.
3 ) ಬ್ರಿಜೇಶ್ ಪಟೇಲ್.

ಈ ಪಟ್ಟಿಯಲ್ಲಿ ಮೂರನೆಯ ಕ್ರಮಾಂಕದಲ್ಲಿ ಇರುವವರು ಬ್ರಿಜೇಶ್ ಪಟೇಲ್. ಇವರು ತಮ್ಮ ಕ್ರಿಕೆಟ್ ಕರಿಯರ್ ದಲ್ಲಿ 21 ಟೆಸ್ಟ್ ಗಳನ್ನು ಹಾಗೂ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಪ್ರಾರಂಭ ತುಂಬಾ ಜೋರಾಗಿ ಮಾಡಿದ್ದರು. ಆದರೆ ಆ ಮೊಮೆಂಟಮ್ ಕೊನೆಯವರೆಗೂ ಇಡಲಾಗಲಿಲ್ಲ. ಹೀಗಾಗಿ ಇವರು ಕೆಲವೇ ಮ್ಯಾಚ್ ಗಳನ್ನು ಆಡಿದರು. ಇವರು ಆಡಿದ ಮೊದಲ ಮ್ಯಾಚ್ ನಲ್ಲಿ 82 ರನ್ ಗಳನ್ನು ಬಾರಿಸಿದ್ದರು. 13 ಜೂನ್ 1974 ರಲ್ಲಿ ಇಂಗ್ಲೆಂಡ್ ವಿರುದ್ಧದ ತಮ್ಮ ಪ್ರಥಮ ಪಂದ್ಯದಲ್ಲಿ 82 ರನ್ ಗಳ ಸುದಾರ ಆತ ಪ್ರದರ್ಶಿಸಿದ್ದರೂ ಭಾರತ ಆ ಪಂದ್ಯ ಸೋತಿತು.
2. ರಾಬಿನ್ ಉತ್ತಪ್ಪ.

ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿ ರಾಬಿನ್ ಉತ್ತಪ್ಪ ಇದ್ದಾರೆ. ಇವರು ತಮ್ಮ ಮೊದಲ ಪಂದ್ಯ 15 ಏಪ್ರಿಲ್ 2006 ರಲ್ಲಿ ಇಂದೂರಿನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದರು. ಈ ಪಂದ್ಯದಲ್ಲಿ 86 ರನ್ ಗಳ ಬಿರುಸಿನ ಆಟ ಪ್ರದರ್ಶಿಸಿ ತಂಡವನ್ನು 7 ವಿಕೆಟ್ ಗಳಿಂದ ಗೆಲ್ಲಿಸಿದ್ದರು. ರಾಬಿನ್ ಅವರು ಇಲ್ಲಿಯವರೆಗೆ 46 ಪಂದ್ಯಗಳನ್ನು ಆಡಿದ್ದಾರೆ. 2015 ರಿಂದ ಟೀಮಿನಿಂದ ಹೊರಗುಳಿದಿದ್ದಾರೆ. ಒಟ್ಟು 1031 ರನ್ ಗಳನ್ನು ಪೇರಿಸಿದ್ದಾರೆ.
1. ಕೆ.ಎಲ್.ರಾಹುಲ್.

ಕರ್ನಾಟಕದ ಈ ಉದಯೋನ್ಮುಖ ಆಟಗಾರ ಭಾರತದ ಪರವಾಗಿ ಎಲ್ಲರಿಗಿಂತಲೂ ಹೆಚ್ಚು ರನ್ ಗಳನ್ನು ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮೊದಲ ಡೇಬ್ಯು ಪಂದ್ಯದಲ್ಲಿಯೇ ಶತಕವನ್ನು ಬಾರಿಸಿ ಮಿಂಚಿದ ಏಕೈಕ ಆಟಗಾರರೆಂದರೆ ಕೆ ಎಲ್ ರಾಹುಲ್. ಇವರು ಜಿಂಬಾಬ್ವೆ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲಿ 100 ರನ್ ಗಳ ನಿಪುಣತೆಯ ಆಟವನ್ನು ಪ್ರದರ್ಶಿಸಿದ್ದರು. ಪಂದ್ಯ 9 ವಿಕೆಟ್ ಗಳಿಂದ ಭಾರತ ಗೆದ್ದಿತು. ತಮ್ಮ ಮೊದಲ ಮ್ಯಾಚ್ ನಲ್ಲಿಯೇ ಮ್ಯಾನ್ ಆಫ್ ದಿ ಮ್ಯಾಚ್ ಪುರಸ್ಕಾರ ಸಹಿತ ಪಡೆದರು. ಸದ್ಯಕ್ಕೆ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅಷ್ಟೇ ಏಕೆ ವಿರಾಟ್ ಅವರ ನೆಚ್ಚಿನ ಆಯ್ಕೆಯೂ ಆಗಿದ್ದಾರೆ.