ಕಲ್ಲಿನ ಮೇಲೆ ವಿಚಿತ್ರ ಪ್ರಾಣಿಯೊಂದು ತೇವಳುತ್ತಿತ್ತು, ಜನರು ಹಾವು ಇರಬಹುದೆಂದು ಭಾವಿಸಿದರು; ಆದರೆ ಕೊನೆಗೆ ಗೊತ್ತಾಯಿತು… ನೋಡಿ ಈ ವೈರಲ್ ವಿಡಿಯೋ!
ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅನೇಕ ವಿಚಿತ್ರವಾದ ವಿಡಿಯೋಗಳನ್ನು ನೋಡಿದ್ದೇವೆ. ಸದ್ಯಕ್ಕೆ ಅಂತಹದೇ ಮತ್ತೊಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಂದು ಪ್ರಾಣಿ ಕಲ್ಲಿನ ಮೇಲೆ ತನ್ನ ದೇಹವನ್ನು ತೆವಳುತ್ತಾ ಮುಂದೆ ಸಾಗುತ್ತಿದೆ. ಇದನ್ನು ನೋಡಿದ ಪ್ರತಿಯೊಬ್ಬರಿಗೂ ಇದು ಯಾವ ಪ್ರಾಣಿ ಎಂದು ಗುರುತಿಸಲು ಸಾಧ್ಯವೇ ಆಗುವದಿಲ್ಲ. ಮೊದಲಿಗೆ ನೋಡಿದ ಮೇಲೆ ಈ ವಿಡಿಯೋದಲ್ಲಿ ಬಹುಶಃ ಹಾವು ಇದೆ ಎಂಬ ಕಲ್ಪನೆ ನಮ್ಮ ತಲೆಯಲ್ಲಿ ಬರುವದು. ಮುಂದೆ ವಿಡಿಯೋ ಹಾಗೆ ನೋಡುತ್ತಾ ಹೋದಂತೆ ಅದು ಬೇರೆ ಪ್ರಾಣಿಯ ರೂಪವೇ ತಾಳುವದು. ಆದುದರಿಂದ ನಿಜಕ್ಕೂ ಇದು ಪ್ರಾಣಿ ಯಾವುದು ಎಂಬ ಪ್ರಶ್ನೆ ನಮ್ಮ ಮನದಲ್ಲಿ ಬರುವದು ಖಚಿತ. ಇದೊಂದು ವಿಚಿತ್ರ ಪ್ರಾಣಿ ಇದ್ದಿರಬಹುದು, ನೀವು ಎಂದಿಗೂ ನೋಡದ ಪ್ರಾಣಿ ಇದಾಗಿದೆ.
ಈ ಪ್ರಾಣಿಗೆ ಐದು ಭುಜಗಳು ಕಾಣಿಸಿಕೊಳ್ಳುತ್ತವೆ, ಪ್ರತಿಯೊಂದು ಭುಜ ಹಾವಿನ ಹಾಗೆ ಕಾಣಿಸುತ್ತಿವೆ. ಅವು ಕಲ್ಲಿನ ಮೇಲೆ ಹಾವಿನ ತರ ಸರಿದಾಡುತ್ತ ಸಾವಕಾಶವಾಗಿ ನೀರಿನ ಕಡೆಗೆ ಹೋಗುತ್ತಿವೆ. ಈ ವಿಡಿಯೋವನ್ನು ಓರ್ವ ಟ್ವಿಟ್ಟರ್ ಯೂಜರ್ ಲಾಇಡಿಯಾ ರಾಲೇ ಇವರು ಶೇರ್ ಮಾಡಿದ್ದಾರೆ, ಮತ್ತು ಕ್ಯಾಪ್ಶನ್ ನಲ್ಲಿ ಹೀಗೆ ಬರೆದಿದ್ದಾರೆ ‘ ‘ಇದು ಏನಿದೆ?’ ಈ ವಿಡಿಯೋ ಮೊದಲು ಕೂಡಾ ಶೇರ್ ಮಾಡಲಾಗಿತ್ತು ಮತ್ತೆ ಅದೇ ಹಳೆಯ ವಿಡಿಯೋ ವನ್ನು ಶೇರ್ ಮಾಡಿದ್ದಾರೆ.
ನೋಡಿ Video:
what is that?? pic.twitter.com/weeDnmHVwL
— Lydia Raley (@Lydia_fishing) June 4, 2020
ಈ ವಿಡಿಯೋವನ್ನು ಜೂನ್ 4 ರಂದು ಶೇರ್ ಮಾಡಲಾಗಿದೆ. ಈ ವಿಡಿಯೋ ಗೆ ಇದುವರೆಗೆ ಸುಮಾರು 3 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆ ಬಂದಿವೆ ಅಷ್ಟೇ ಅಲ್ಲ ಸಾವಿರಕ್ಕಿಂತ ಹೆಚ್ಚು ಕಾಮೆಂಟ್ಸ್ ಸಹ ಬಂದಿವೆ. ಬಹಳಷ್ಟು ಜನರು ಇದಕ್ಕೆ ಹಾವಿನ ಹಾಗೆ ಇದೆ ಎಂದು ಹೇಳಿದ್ದಾರೆ, ಆದರೆ ವಿಡಿಯೋದ ಕೊನೆಯಲ್ಲಿ ವೀಕ್ಷಿಸುವವರು ತುಂಬಾ ಗೊಂದಲಕ್ಕೊಳಗಾದರು.
ಒಬ್ಬ ಯೂಜರ್ ಬರೆದಿದ್ದಾನೆ, ‘ ಇದು ಆಸ್ಟ್ರೇಲಿಯಾದ ಹಾಗೆ ಏನೋ ಇದೆ’.
Something Australian, probably.
— Attila the Honeybun. (@TimMansplainsIt) June 4, 2020
ಎರಡನೆಯ ಯುಜರ್ ಬರೆದಿದ್ದಾನೆ ‘ ಇದು ವರ್ಷ 2020 ಕ್ಕಿಂತ ಹೆಚ್ಚು ಅ’ಪಾಯ’ಕಾರಿ ಅನಿಸುತ್ತಿದೆ.’
It's 2020, that's what.
— Sparkling Jules (@Coolish_Breeze) June 4, 2020
ಮೂರನೆಯ ವ್ಯಕ್ತಿ ಇದಕ್ಕೆ ಸ್ಪೈಡರ್ ಎಂದಿದ್ದಾನೆ.
Snake spider
— Alex Fitzgerald (@AlexBFitzgerald) June 4, 2020
ಎಷ್ಟೋ ಜನರು ಚಿತ್ರವಿಚಿತ್ರವಾದ ಉತ್ತರ ನೀಡಿದ್ದಾರೆ, ಆದರೆ ಕೊನೆಗೆ ಕೆಲವು ಜನರು ಇದು ಯಾವ ಪ್ರಾಣಿಯಂದು ಗುರುತಿಸಿದರು. ಈ ಪ್ರಾಣಿಗೆ ‘ಬ್ರಿಟಲ್ ಸ್ಟಾರ್ ಅಥವಾ ಒಫಿಯೋರೋಯಿಡ್ ಎಂದು ಕರೆಯುವರು.
ಬ್ರಿಟಲ್ ಸ್ಟಾರ್ ಇದು ಸಮುದ್ರ ಜೀವಿಯಾಗಿದ್ದು, ಇದು ಸ್ಟಾರ್ ಫಿಶ್ ಹಾಗೆ ಕಾಣುತ್ತದೆ. ಇದಕ್ಕೆ ಸರಪೆಂಟ ಸ್ಟಾರ್ಸ್ ಎಂದೂ ಸಹ ಗುರುತಿಸಲಾಗುವದು. ಬ್ರಿಟಲ್ ಸ್ಟಾರ್ಸ್ ನ 2000 ಕ್ಕಿಂತ ಹೆಚ್ಚು ಪ್ರಜಾತಿಗಳಿವೆ ಮತ್ತು ಅವುಗಳಲ್ಲಿ ಕೆಲವು ಸಮುದ್ರದ ಆಳದಲ್ಲಿ ಮಾತ್ರ ಕಂಡುಬರುತ್ತವೆ. ಅವು ತಮ್ಮ ಉದ್ದವಾದ ಭುಜಗಳ ಉಪಯೋಗ ಮಾಡಿಕೊಂಡು ಸಮುದ್ರದ ದಂಡೆಯ ಮೇಲೆ ತೇಲಾಡುತ್ತವೆ.