ಫೋಟೋ ಕ್ಲಿಕ್ಕಿಸುವದಕ್ಕೊಸ್ಕರ ನೀರಿನಲ್ಲಿಳಿದ ವ್ಯಕ್ತಿ ಎದುರು ಬಂತು 8 ಫಿಟ್ ಉದ್ದನೆಯ ಶಾರ್ಕ್! ಮುಂದೇನಾಯಿತು ವೀಡಿಯೊ ನೋಡಿ!

ಅಮೇರಿಕಾದ ಡೇಲವೆಯರ್(Delaware) ಎಂಬಲ್ಲಿ ಒಬ್ಬ ಈಜುಗಾರ ಫೋಟೋ ತಗೆದುಕೊಳ್ಳುವ ಸಲುವಾಗಿ ಸಮುದ್ರದದಲ್ಲಿ ಧುಮುಕಿ ಶಾರ್ಕ್ ಹತ್ತಿರ ಹೋದ ಅಷ್ಟೇ ಅಲ್ಲ ತನ್ನ ಎರಡು ಕೈಗಳಿಂದ ಶಾರ್ಕ್ ಬಾಯಿಯನ್ನು ತೆರೆದು ಫೋಟೋ ತಗೆದುಕೊಂಡನು.

ವಾಷಿಂಗ್ಟನ್:- ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವದು ಇಂದು ಪ್ರತಿಯೊಬ್ಬರ ಕನಸಾಗಿದೆ ಆದರೆ ಕೆಲವೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಫೇಮಸ್ ಆಗುವ ಸಲುವಾಗಿ ತಮ್ಮ ಪ್ರಾ’ಣದ ಹಂಗನ್ನು ತೊರೆದು ಕೆಲವು ಕಾರ್ಯ ಮಾಡಲು ಮುಂದಾಗುತ್ತಾರೆ. ಇಂತಹದ್ದೇ ಒಂದು ಘಟನೆ ಅಮೇರಿಕಾದ ಡೇಲವೆಯರ್ ಎಂಬಲ್ಲಿ ನಡೆದಿದೆ. ಇಲ್ಲಿ ಒಬ್ಬ ಈಜುಗಾರನು ಫೋಟೋ ತೆಗೆದುಕೊಳ್ಳುವ ಸಲುವಾಗಿ ನೀರಿನಲ್ಲಿ ಧುಮುಕಿ ಶಾರ್ಕ್ ಹತ್ತಿರ ಹೋಗಿದ್ದಷ್ಟೇ ಅಲ್ಲ ತನ್ನ ಎರಡು ಕೈಗಳಿಂದ ಶಾರ್ಕ್ ಮೀನಿನ ಬಾಯಿಯನ್ನು ತೆರೆದು ಫೋಟೋ ತೆಗೆದುಕೊಳ್ಳಲು ಶುರು ಮಾಡಿದ. ಆತ ಈ ರೀತಿ ಮಾಡುವದನ್ನು ನೋಡಿದ ಅಲ್ಲಿಯ ಜನರಲ್ಲಿ ಗ’ದ್ದಲ ನಿರ್ಮಾಣವಾಯಿತು ತಕ್ಷಣ ಆತನನ್ನು ನೀರಿನ ಹೊರಗಡೆ ಕರೆಯಲಾಯಿತು.

ವಿಡಿಯೋ ನೋಡಿ……!

ದೊರೆತ ಮಾಹಿತಿಯ ಪ್ರಕಾರ, ಈ ಈಜುಗಾರ ಒಂದು TMZ ಶೋ ಸಲುವಾಗಿ ತನ್ನ ಫೋಟೋ ತಗೆದುಕೊಳ್ಳುತ್ತಿದ್ದ ಅಷ್ಟೇ ಅಲ್ಲ ವಿಡಿಯೋ ಶೂಟ್ ಸಹ ಮಾಡುತ್ತಿದ್ದ. ಈ ವಿಡಿಯೋದಲ್ಲಿ ವ್ಯಕ್ತಿ ಸುಮಾರು 8 ಫೀಟ್ ಉದ್ದದ ಅತ್ಯಂತ ಅ’ಪಾಯಕಾರಿ ಶಾರ್ಕ್’ನ್ನು ಹಿಡಿದು ಅದನ್ನು ನೀರಿನಿಂದ ಎಳೆಯುತ್ತಾನೆ, ಜೊತೆಗೆ ತನ್ನ ಕೈಗಳಿಂದ ಬಿಗಿಯಾಗಿ ಹಿಡಿಯುತ್ತಾನೆ. ತದನಂತರ ಬ’ಲವಂತವಾಗಿ ಅದರ ಬಾಯನ್ನು ತೆರೆಯುತ್ತಾನೆ ಹಾಗೂ ಫೋಟೋ ತಗೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಘಟನೆ ನಡೆದ ಸ್ಥಳದಲ್ಲಿ ಅನೇಕ ಜನರು ಹಾಗೂ ಮಕ್ಕಳು ಸಹ ಉಪಸ್ಥಿತರಿದ್ದರು. ಅಷ್ಟರಲ್ಲಿ ಅಲ್ಲಿದ್ದ ಒಬ್ಬ ಮಹಿಳೆ ಆತನನ್ನು ಶಾರ್ಕ್ ನಿಂದ ದೂರ ಸರಿಯಲು ಹೇಳುವದನ್ನು ಸಹ ವಿಡಿಯೋದಲ್ಲಿ ಕೇಳಿಸುತ್ತದೆ.

ಈಜುಗಾರನ ಮೇಲೆ ಕ್ರ’ಮ ಕೈ’ಗೊಳ್ಳಬಹುದು.

ಮಾಹಿತಿಯ ಅನುಸಾರ ಈ ಸಂಪೂರ್ಣ ಘಟನೆ ಡೇಲವೆಯರ್ ನ ಒಂದು ಸ್ಥಳೀಯ ಪಾರ್ಕ್ ನ ಹತ್ತಿರವಿರುವ ಸಮುದ್ರ ದಂಡೆಯ ಮೇಲೆ ನಡೆದಿದೆ. ಈ ಶಾರ್ಕ್ ಸಮುದ್ರದ ದಡದ ಮೇಲೆ ಬಂದಾಗ ಈಜುಗಾರನು ಎಚ್ಚರಿಕೆ ನೀಡಿದ ಮೇಲೂ ಸಹ ಅದರ ಜೊತೆಗೆ ಹಿಂ’ಸೆಯನ್ನು ಎಸಗಿದ್ದಾನೆ. ಅಲ್ಲಿದ್ದ ಅನೇಕ ಜನರು ಈ ಘಟನೆಯ ಕುರಿತು ದೂರು ಕೂಡಾ ದಾಖಲಿಸಿದ್ದಾರೆ. ಏ’ನಿಮಲ್ ರಾ’ಯಿಟ್ಸ್ ಸಂಘಟನೆಗಳು ಸಹ ಈ ಪ್ರಕಾರದ ಘಟನೆ ವಿರೋಧ ಮಾಡುತ್ತ ವ್ಯಕ್ತಿ ಹಾಗೂ ಫೋಟೋ ತಗೆಯುತ್ತಿರುವ ಜನರ ಮೇಲೆ ಕ್ರ’ಮವನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಜೂನ್ 4 ರಂದು ಇದೇ ಸ್ಥಳದಲ್ಲಿ ಶಾರ್ಕ್ ಹ’ಲ್ಲೆ’ಯಲ್ಲಿ 12 ವರ್ಷದ ಮಗು ತೀ’ವ್ರವಾಗಿ ಗಾ’ಯಗೊಂಡಿತ್ತು.