ತಲೆನೋವಿನ ಮಾತ್ರೆ ಖರೀದಸಲು ಹೋದ ಮಹಿಳೆ, ಒಂದೇ ಒಂದು ನಿರ್ಣಯದಿಂದ ಕ್ಷಣಾರ್ಧದಲ್ಲಾದಳು ಕೋಟ್ಯಾಧೀಶ್ವರಿ!

ತಲೆನೋವಿಗೆ ಔಷಧಿ ತರಲು ಸ್ಟೋರ್ ಗೆ ಹೋದ ಮಹಿಳೆ ಎಂದಿಗೂ ವಿಚಾರ ಮಾಡಲಿಕ್ಕಿಲ್ಲ ಮುಂಬರುವ ಕೆಲವೇ ಕ್ಷಣಗಳಲ್ಲಿ ತಾನು ಕೋಟ್ಯಾಧೀಶಳಾಗುತ್ತೇನೆಂದು. ಪೆನ್ ಕಿ’ಲರ್ ಕೊಳ್ಳಲು ಹೋದ ಮಹಿಳೆ ಮೆಗಾ ಮನಿ ಸ್ಕ್ರೆಚ್ ಆಫ್ ಟಿಕೆಟ್ ಖರೀದಿಸಿದಳು. ಮತ್ತೇನು ನೋಡನೋಡುವಷ್ಟರಲ್ಲಿ ಮಹಿಳೆಯ ಅದೃಷ್ಟವೇ ಖುಲಾಯಿಸಿತು.

ಖರೀದಿಸಿದ ಟಿಕೆಟ್ ನಿಂದ ಮಹಿಳೆಗೆ 3.77 ಕೋಟಿ ರೂಪಾಯಿಗಳ (5 ಲಕ್ಷ ಡಾಲರ್) ಲಾಟರಿ ಹೊಡೆದಳು. ಅಮೆರಿಕೆಯ ವ್ಹರ್ಜಿನಿಯಾದಲ್ಲಿ ವಾಸಿಸುವ ಒಲಗಾ ರಿಟ್ಚೆ ಇವರು ತಲೆನೋವಿಗೆ ಔಷಧಿಯನ್ನು ತರಲು ಅಲ್ಲಿಯ ಲೋಕಲ್ ಸ್ಟೋರ್ ಗೆ ಹೋಗಿದ್ದರು. ಔಷಧಿಯನ್ನು ತೆಗೆದುಕೊಳ್ಳುವಾಗ ಅವರೊಂದು ಲಾಟರಿ ಟಿಕೆಟ್ ಖರೀದಿಸಿದರು. ಆ ಟಿಕೆಟ್ ನಿಂದ ಅವರು ಕೆಲವೇ ಕ್ಷಣಗಳಲ್ಲಿ ಕೋಟ್ಯಾಧೀಶರಾದರು.

ಲಾಟರಿ ಹೊಡೆದ ನಂತರ ಒಲಗಾ “ನನಗೆ ನನ್ನ ಕಣ್ಣುಗಳ ಮೇಲೆಯೇ ವಿಶ್ವಾಸ ಕೂಡುತ್ತಿಲ್ಲ” ಎಂದು ಹೇಳುತ್ತಾಳೆ.

ಈ ಹಣವನ್ನು ಏನು ಮಾಡುವಿರಿ ಎಂದು ಕೇಳಿದಾಗ, ಇದರಿಂದ ನನ್ನ ಮನೆಯ ರಿಪೇರಿ ಮಾಡಿಸುವೆನು. ಉಳಿದ ಹಣವನ್ನು ನಿವೃತ್ತಿಯ ನಂತರ ಜೀವನಕ್ಕಾಗಿ ಉಳಿಸಿ ಇಡುವೆ ಎಂದು ಹೇಳಿದರು.

ಈ ರೀತಿ ಲಾಟರಿ ಹೊಡೆದ ಒಲಗಾ ಮೊದಲ ಮಹಿಳೆ ಅಲ್ಲ, ಇದಕ್ಕೂ ಮೊದಲು ತನ್ನ ನೌಕರಿ ಕಳೆದುಕೊಂಡ ಮಹಿಳೆಯೊಬ್ಬಳು ಗ್ರೋಸರಿ ಸ್ಟೋರ್ ನಲ್ಲಿ ಪಾರ್ಟ್ ಟೈಮ್ ನೌಕರಿ ಮಾಡುತ್ತ ಫೇಸ್ ಮಾಸ್ಕ್ ತಯಾರಿಸಿ ಮಾರಿ ಬಂದ ಹಣದಿಂದ ಲಾಟರಿ ಖರೀದಿಸಿದ್ದರು. ಈ ಟಿಕೆಟ್ ನಿಂದ ಅವರಿಗೆ ಒಟ್ಟು 1,27,000 ಡಾಲರ್ಸ್ ಲಾಟರಿ ಹೊಡೆದಿದ್ದಳು.