ಗಣಿಯಲ್ಲಿ ಕೆಲಸ ಮಾಡುವವನಿಗೆ ದೊರಕಿತು ಖಜಾನೆ, ಕಾರ್ಮಿಕನ ಭಾಗ್ಯವೇ ತೆರೆಯಿತು!
ಟಾಂಜಾನಿಯಾದಲ್ಲಿ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನ ಭಾಗ್ಯ ಒಮ್ಮೆಲೇ ಮಿಂಚಿದೆ. ಒಂದು ಇಂಗ್ಲಿಷ್ ವೆಬ್ ಸೈಟ್ ನೀಡಿದ ಮಾಹಿತಿಯ ಪ್ರಕಾರ, ಟಾಂಜಾನಿಯಾದ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕನಿಗೆ ಕೆಲಸ ಮಾಡುವಾಗ ಎರಡು ದೊಡ್ಡದಾದ ಹಾಗೂ ಅಪರೂಪದ ವಜ್ರಗಳು ದೊರಕಿವೆ. ಸರಕಾರ ಆ ಎರಡು ಬೆಲೆಬಾಳುವ ರತ್ನಗಳ ಬದಲಾಗಿ ಕಾರ್ಮಿಕನಿಗೆ 7.74 ಬಿಲಿಯನ್ ಟಾಂಜಾನಿಯಾ ಶಿಲಿಂಗ್ (ಸುಮಾರು 25 ಕೋಟಿ 36 ಲಕ್ಷ ₹) ಧನಾದೇಶವನ್ನು (ಚೆಕ್) ಕೊಟ್ಟಿದೆ.
ಇಷ್ಟೊಂದು ಬೆಲೆಬಾಳುವದಿವೆ ಆ ಎರಡು ರತ್ನಗಳು.

ಈ ಎರಡು ರತ್ನಗಳು ದಟ್ಟ ನೇರಳೆ-ನೀಲಿ ಬಣ್ಣದ್ದಾಗಿವೆ. ಈ ಅಪರೂಪದ ರತ್ನಗಳು Saniniu Laizer ಹೆಸರಿನ ವ್ಯಕ್ತಿಗೆ ಗಣಿಯಲ್ಲಿ ದೊರೆಕಿವೆ. ಟಾಂಜಾನಿಯಾದ ಮೈನ್ ಮಿನಿಸ್ಟ್ರೀಯ ವಕ್ತಾರ ಹೇಳಿದ ಹಾಗೆ, ಮೊದಲ ರತ್ನದ ತೂಕ 9.27 ಕಿಲೋ ಇದ್ದು, ಎರಡನೇಯ ರತ್ನದ ತೂಕ 5.103 ಕಿಲೊಗ್ರಾಮ್ ಇದೆ. ಈ ಎರಡು ರತ್ನಗಳು ತುಂಬಾ ಬೆಲೆಬಾಳುವ ರತ್ನಗಳಾಗಿವೆ.
ಇತಿಹಾದಲ್ಲಿಯೇ ಮೊದಲ ಬಾರಿಗೆ ನಡೆದ ಘಟನೆ.

ರಿಪೋರ್ಟ್ ಪ್ರಕಾರ ಟಾಂಜಾನಿಯಾದಲ್ಲಿ ರತ್ನಗಳು ಬರೀ ಪೂರ್ವ ಆಫ್ರಿಕೆಯ ಉತ್ತರ ಭಾಗದಲ್ಲಿಯೇ ದೊರೆಯುತ್ತಿದ್ದವು. ಈ ಸಂಬಂಧವಾಗಿ ಮಾತನಾಡುತ್ತಿರುವಾಗ ಮೈನ್ ಮಿನಿಸ್ಟ್ರಿಯ ಸೆಕ್ರೆಟರಿ Simon Msanjila ಹೇಳುತ್ತಾರೆ, ‘ಇಂದಿನ ಘಟನೆ ಇತಿಹಾಸದಲ್ಲಿಯೇ ಎರಡು ದೊಡ್ಡ ಟಾಂಜಾನಾಯಿಟ್ ರತ್ನಗಳು ದೊರಕಿವೆ’.
ರಾಷ್ಟ್ರಪತಿಗಳು ಫೋನ್ ಮಾಡಿ ತಿಳಿಸಿದರು ಶುಭಾಶಯಗಳನ್ನು.

ಸೂತ್ರದ ಮಾಹಿತಿಯ ಪ್ರಕಾರ, Saniniu ನಿಗೆ ಚೆಕ್ ಕೊಡುವ ಸಂಪೂರ್ಣ ಕಾರ್ಯಕ್ರಮ TV ಯಲ್ಲಿ ಲೈವ್ ಟೆಲಿಕಾಸ್ಟ್ ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಟಾಂಜಾನಿಯಾ ದೇಶದ ರಾಷ್ಟ್ರಪತಿಗಳು ಸಹ John Magufuli ಈ ಭಾಗ್ಯವಂತನಿಗೆ ಫೋನ್ ಕರೆ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಎರಡು ರತ್ನಗಳನ್ನು ಟಾಂಜಾನಿಯಾದ ಒಂದು ಬ್ಯಾಂಕ್ ಖರೀದಿಸಿದೆ.