‘ಎಣ್ಣೆ’ಗಾಗಿ ಆಸ್ಪೆತ್ರೆಯಿಂದ ಓಡಿ ಹೋದ ಕೊರೊನಾ ಪಾಸಿಟಿವ್!
ಬೆಂಗಳೂರು ಪಟ್ಟಣದಲ್ಲಿಯ ಕೋರೊನಾ ವಾರ್ಡದಲ್ಲಿಯ ಒಬ್ಬ ರೋಗಿಯು ಓಡಿ ಹೋಗಿದ್ದಾನೆ ಇದರಿಂದ ಪೊಲೀಸರಲ್ಲಿ ಗೊಂ’ದಲ ಉಂಟಾಗಿದೆ. ದೊರೆತ ಮಾಹಿತಿಯ ಅನುಸಾರ ಈ ರೋಗಿಯನ್ನು ಒಂದು ಕೊ’ಲೆ ಆ’ರೋಪದ ಮೇಲೆ ಬಂಧಿಸಲಾಗಿದೆ. ಈ ಆ’ರೋಪಿ ಮ’ದ್ಯ ಕುಡಿಯುವ ಸಲುವಾಗಿ ಆಸ್ಪತ್ರೆಯಿಂದ ಓಡಿ ಹೋಗಿದ್ದಾನೆಂದು ತಿಳಿದು ಬಂದಿದೆ. ಸದ್ಯಕ್ಕೆ ಈ ಆ’ರೋಪಿಯನ್ನು ಪೊಲೀಸರು ಬಂ’ಧಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ ಆ’ರೋಪಿಗೆ ಮದ್ಯ ಕುಡಿಯುವ ಅಭ್ಯಾಸ ವಿದ್ದುದರಿಂದ ಈತನು ಆಸ್ಪತ್ರೆಯಿಂದ ಓಡಿ ತನ್ನ ಗೆಳೆಯನ ಮನೆಗೆ ಹೋಗಿದ್ದಾನೆ ಅಲ್ಲಿ ಅಷ್ಟೇ ಸ್ನೇಹಿತನಿಗೆ ಮದ್ಯದ ವ್ಯವಸ್ಥೆ ಮಾಡಲು ಸಹ ಹೇಳಿದ್ದನಂತೆ..

ಸುದ್ದಿ ಮೂಲಗಳ ಪ್ರಕಾರ, ಈ ಆ’ರೋಪಿಗೆ ಪೊಲೀಸರು 19 ಜೂನ್ ರಂದು ಕೊ’ಲೆಯ ಪ್ರಕರಣದಲ್ಲಿ ಬಂಧಿಸಿದ್ದರು. ವ್ಯಕ್ತಿ ತನ್ನ ಆಪ್ತ ಸ್ನೇಹಿತನ ಮೇಲೆಯೇ ಚಾ’ಕುವಿನಿಂದ ಹ’ಲ್ಲೆ ಮಾಡಿದ ಆ’ರೋಪದ ಮೇರೆಗೆ ಪೊಲೀಸರು ಈತನನ್ನು ತಮ್ಮ ವಶಕ್ಕೆ ತಗೆದುಕೊಂಡಿದ್ದರು.
ಹೊಸ ನಿಯಮದ ಅನುಸಾರ ಬಂ’ಧಿಸಿದ ನಂತರ ಆತನ ಕೋರೊನಾ ತಪಾಸಣೆ ಮಾಡಲಾಯಿತು. ಮಂಗಳವಾರ ಆತನ ರಿಪೋರ್ಟ್ ಪಾಸಿಟಿವ್ ಬಂದಿದ್ದ ಕಾರಣ ಈ ವ್ಯಕ್ತಿಯನ್ನು ವಿಕ್ಟೊರಿಯಾ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆತನ ಜೊತೆಗೆ ಅವನನ್ನು ಬಂ’ಧಿಸಿದ ಪೊಲೀಸರನ್ನು ಸಹ ಕ್ವಾರಂಟೈನ್ ಮಾಡಲಾಯಿತು.
ಬುಧವಾರ ಮುಂಜಾನೆ ಈ ಆ’ರೋಪಿಯ ಕೈ ಗಾ’ಯ’ಗೊಂಡಿದ್ದರಿಂದ ಉಪಚಾರ ಮಾಡುವ ಸಲುವಾಗಿ ಬೇರೆ ವಾರ್ಡ್ ನಲ್ಲಿ ಶಿಫ್ಟ್ ಮಾಡಲು ನಿರ್ಧರಿಸಿದರು. ಕೋರೊನಾ ವಾರ್ಡ್ ನಿಂದ ಹೊರಗೆ ಕರೆದುಕೊಂಡು ಬೇರೆ ವಾರ್ಡ್ ನಲ್ಲಿ ಹೋಗುವಾಗ ಈ ವ್ಯಕ್ತಿ, ಜೊತೆಗಿದ್ದ ನರ್ಸ್ ಹಾಗೂ ಸುರಕ್ಷಾ ರಕ್ಷಕರನ್ನು ತಳ್ಳಿ ಅಲ್ಲಿಂದ ಪ’ರಾರಿಯಾದನು. ಈ ಆ’ರೋಪಿಯು ಬೇರೆ ವಾರ್ಡ್ ನಲ್ಲಿ ಹೋಗುವ ಸಲುವಾಗಿ ಪಿಪಿಇ ಕಿಟ್ ಹಾಕಿಕೊಂಡಿದ್ದರಿಂದ ಮುಖ್ಯ ಗೇಟ್ ನಲ್ಲಿ ಕಾರ್ಯರತವಾಗಿದ್ದ ಸುರಕ್ಷಾ ರಕ್ಷಕರು ಸಹ ಆತನನ್ನು ಹಿಡಿಯಲು ಹೋದಾಗ ವ್ಯಕ್ತಿ ಆಸ್ಪತ್ರೆಯ ಸಂರಕ್ಷಣೆ ಗೋಡೆಯನ್ನು ಹಾರಿ ಓಡಿ ಹೋದನು. ಬೆಂಗಳೂರು ಮೆಡಿಕಲ್ ಕಾಲೇಜ್ ಆಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ದ ನೋಡಲ್ ಅಧಿಕಾರಿ ಡಾಕ್ಟರ್ ಸುಮಿತಾ ಅವರು ಈ ಮಾಹಿತಿ ನೀಡಿದ್ದಾರೆ.
ಕೋರೊನಾ ರೋಗಿ ಪ’ರಾರಿಯಾದ ಸುದ್ದಿ ಬೆಳಕಿಗೆ ಬಂದಾಗ ಆಸ್ಪತ್ರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಈ ಸಂದರ್ಭದ ಮಾಹಿತಿಯನ್ನು ಆಸ್ಪತ್ರೆಯ ಪ್ರಶಾಸನವು ವಿ.ವಿ.ಪುರಮ್ ಪೊಲೀಸ್ ಸ್ಟೇಷನ್’ಗೆ ತಿಳಿಸಿದರು. ಈ ಆ’ರೋಪಿಯನ್ನು ಹುಡುಕುವ ಸಲುವಾಗಿ ಪೊಲೀಸರು ಒಂದು ಟೀಮ್ ತಯಾರಿಸಿ ಶೋಧನೆಯ ಕಾರ್ಯ ಪ್ರಾರಂಭ ಮಾಡಿದರು. ತಪಾಸಣೆಯ ಸಂದರ್ಭದಲ್ಲಿ ಈ ಆ’ರೋಪಿ ತನ್ನ ಸ್ನೇಹಿತನಿಗೆ ಫೋನ್ ಮಾಡಿರುವ ಮಾಹಿತಿ ದೊರೆಯಿತು. ಮ’ದ್ಯ ಕೊಂಡುಕೊಳ್ಳುವ ಸಲುವಾಗಿ ಸಹಾಯ ಮಾಡುವ ಬಗ್ಗೆ ಫೋನ್ ಮಾಡಿದ್ದಾನೆ ಎಂದು ಆತನ ಸ್ನೇಹಿತ ಸ್ವತಃ ಪೊಲೀಸರಿಗೆ ತಿಳಿಸಿದ್ದಾನೆ. ಇಬ್ಬರು ಭೇಟಿಯಾಗುವ ಸ್ಥಳದಲ್ಲಿ ಹೊಂ’ಚು ಹಾಕಿ ಪೊಲೀಸರು ಆ’ರೋಪಿಯನ್ನು ಬಂಧಿಸಿದ್ದಾರೆ. ಆ’ರೋಪಿಯು ಕೋರೊನಾ ರೋಗಿ ಇದ್ದುದ್ದರಿಂದ ಆತನ ಸ್ನೇಹಿತನು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾನೆ ಎಂದು ತಿಳಿದು ಬಂದಿದೆ.