ಕೋಟ್ಯಾವಧಿ ರೂಪಾಯಿಗಳಿವೆ ಬಾಲಿವುಡ್ ಕಿಂಗ್ ಅಮಿತಾಭ್ ಬಚ್ಚನ್ ಹತ್ತಿರ, ಆದರೂ ತುತ್ತು ಅನ್ನಕ್ಕೆ ವರ್ಜಿತವಾಗಿದೆ ಅವರದೊಂದು ಈ ಕುಟುಂಬ!
ಅಮಿತಾಬ್ ಬರೀ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ತಮ್ಮನ್ನು ಗುರುತಿಸಿಕೊಂಡವರು. ಬಾಲಿವುಡ್ ದ ಬಾದಶಾಹ್ ಎಂದೇ ಪ್ರಸಿದ್ಧಿಯಾಗಿರುವ ಇವರು ತಮ್ಮ ಹೆಸರಿನೊಂದಿಗೆ ಅಷ್ಟೇ ಹಣ ಸಂಪತ್ತನ್ನು ಗಳಿಸಿದ್ದಾರೆ. ಇದೆಲ್ಲ ಸುಮ್ಮನೆ ಹಾಗೆಯೇ ಬಂದಿಲ್ಲ, ಅವರು ತಮ್ಮ ಕಷ್ಟದ ಬೆವರ ಹನಿಗಳಿಂದ ಕೂಡಿಸಿದ ಸಂಪತ್ತೇ ಇಂದು ಅವರಿಗೆ ದೇಶದ ಸಿರಿವಂತರ ಪಟ್ಟಿಯಲ್ಲಿ ಕೂಡಿಸಿದೆ. ಇಂದು ಅವರು ತಮ್ಮ ವಯಸ್ಸಿನ 70 ರ ಗಡಿ ದಾಟಿದರೂ ಸಹ ಕೆಲಸದಲ್ಲಿ ಮಾತ್ರ 18 ರ ಹುಡುಗನ ಹಾಗೆ ಚಪಲತೆಯಿಂದ ಓಡಾಡುತ್ತಾರೆ. ಕೋಟ್ಯಾಧಿಪತಿಯಾದ ಅಮಿತಾಭ್ ಹತ್ತಿರ ಇಂದು ಪ್ರತಿಯೊಂದು ಸುಖ ಸೌಲಭ್ಯವಿದೆ. ಆದರೆ ಅವರ ಪರಿವಾರದವರೇ ಆದ ಒಂದು ಕುಟುಂಬ ಮಾತ್ರ ಹಣಕ್ಕಾಗಿ ವಂಚಿತವಿದೆ ಎಂದರೆ ನಿಜವೆನಿಸದು.
ಈ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಇಂದು 400 ಮಿಲಿಯನ್ ಡಾಲರ್ ಮಾಲೀಕಾರಗಿದ್ದಾರೆ. ತಮ್ಮ ಇಲ್ಲಿಯವರೆಗಿನ ಕರಿಯರ್ ನಲ್ಲಿ 180 ಕ್ಕಿಂತ ಹಚ್ಚು ಚಿತ್ರಗಳನ್ನು ಮಾಡಿದ್ದಾರೆ.
1969 ರಲ್ಲಿ ಸಾತ್ ಹಿಂದೂಸ್ತಾನಿ ಚಿತ್ರದ ಮುಖಾಂತರ ಬಾಲಿವುಡ್ ನಲ್ಲಿ ಪದಾರ್ಪಣೆ ಮಾಡಿದರು.

ಆದರೆ ಇಂದು ನಾವಿಲ್ಲಿ ಹೇಳುವ ವಿಷಯವೆಂದರೆ ಬಚ್ಚನ್ ಪರಿವಾರದ ಒಂದು ಕುಟುಂಬ ಎರಡು ಹೊತ್ತಿನ ಊಟಕ್ಕಾಗಿ ಜೂಜಾಡುತ್ತಿದೆ. ಸುಳ್ಳು ಎನಿಸುತ್ತಾ? ಇಲ್ಲ ಅಮಿತಾಬ್ ಪರಿವಾರದ ಸದಸ್ಯರೆಲ್ಲರ ಹತ್ತಿರ ಸಾಕಷ್ಟು ಹಣವಿದೆ. ಆದರೂ ಯಾರಿರಬಹುದು ಅಂತೀರಾ ಈ ಸ್ಥಿತಿಯಲ್ಲಿ? ಹಾಗಾದರೆ ಓದಿ.

ಅಮಿತಾಭ್ ಅವರ ಸ್ವಂತ ಚಿಕ್ಕಮ್ಮನ ಮಗ ಅನೂಪ ರಾಮಚಂದ್ರ. ಇವರ ಜೊತೆ ಬಚ್ಚನ್ ಪರಿವಾರದ ವಿಶೇಷ ಸಂಬಂಧವಿದೆ. ಹೀಗಿದ್ದರೂ ಅವರು ಇಂದು ಬಡತನದಲ್ಲಿ ಜೀವನ ಕಳೆಯುತ್ತಿದ್ದಾರೆ. ಈ ಕುಟುಂಬ ಮೊದಲು ಶ್ರೀಮಂತವಿತ್ತು. ಆದರೆ ಕಾಲಚಕ್ರದಲ್ಲಿ ಸಿಲುಕಿ ಇಂದು ದುಡ್ಡಿಗಾಗಿ ವಂಚಿರಾಗಿದ್ದಾರೆ. ಅಮಿತಾಭ್ ಮತ್ತು ಅನೂಪ್ ಇವರಲ್ಲಿ ಸದ್ಯಕ್ಕೆ ಸಂಬಂಧ ಹಳಸಿದೆ ಕಾರಣ, ಜಮೀನಿನ ವಿವಾದದಿಂದ. ಇದೇ ಕಾರಣದಿಂದ ಅಮಿತಾಭ್ ಇವರಿಂದ ದೂರವಿರಲು ಇಷ್ಟ ಪಡುತ್ತಾರೆ. ಅಭಿಷೇಕ್ ಅವರ ಮದುವೆಯಲ್ಲಿಯೂ ಈ ಕುಟುಂಬ ಉಪಸ್ಥಿತರಿರಲಿಲ್ಲ, ಕಾರಣ ಹಣದ ಮುಗ್ಗಟ್ಟಿನಿಂದಾಗಿ ಅಂತ ಹೇಳಿದರು. ಅನೂಪ್ ಅವರ ಕುಟುಂಬ ಇಂದು ಅಮಿತಾಭ್ ಅವರ ‘ಕಟಘರ್’ ದಲ್ಲಿಯ ಹಳೆಯ ಮನೆಯಲ್ಲಿಯೇ ಇರುತ್ತಾರೆ. ಅನೂಪ್ ಅವರ ಪ್ರಕಾರ ಈ ಮನೆ ಪೂರ್ವಜರ ಕಾಲದಿಂದಲೂ ಇದೆ. ಇದೇ ಕಾರಣದಿಂದ ಇಬ್ಬರಲ್ಲಿ ವಿವಾದವಿರಬೇಕು. ಆದರೆ ಅಮಿತಾಭ್ ಇವರಿಂದ ಯಾಕೆ ದೂರವಿರುತ್ತಾರೆ ಎಂಬುದು ಗೊತ್ತಾಗಿಲ್ಲ.

ಯಾರು ಎಷ್ಟೇ ಶ್ರೀಮಂತವಿದ್ದರೂ ಕೆಲವರು ಸ್ವಾಭಿಮಾನದ ಬದುಕು ಬದುಕಲು ಇಷ್ಟ ಪಡುತ್ತಾರೆ. ಬೇರೆಯವರು ಅಥವಾ ದೂರದ ಸಂಬಂಧಿಕರು ಕೊಟ್ಟದ್ದು ಎಷ್ಟು ದಿನ ಅಂತ ಆಗುವದು? ಹೀಗಾಗಿ ಬೇಡುವದು ಕೆಲವರಿಗೆ ಹಿಡಿಸುವದಿಲ್ಲ. ಒಬ್ಬೊಬ್ಬರಿಗೆ ಅಭಿಮಾನ ಕಾಡುತ್ತದೆ. ಈ ಕಾರಣದಿಂದಲೂ ಅಮಿತಾಭ್ ಅವರಿಂದ ಯಾವುದೇ ಸಹಾಯ ತೆಗೆದುಕೊಳ್ಳಲಿಕ್ಕಿಲ್ಲ. ಅವರವರ ಕುಟುಂಬದ ಸಮಸ್ಯೆಗಳು ಅವರಿಗೆ ಗೊತ್ತು ಹೌದಲ್ವಾ?