ಯಾವ ಕಾಲೇಜಿನಲ್ಲಿ ‘ಮಾಲಿ’ ಕೆಲಸ ಮಾಡುತ್ತಿದ್ದನೋ, ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆದ ಕಥೆ ಒಮ್ಮೆ ನೋಡಿ!
ಯಾವುದೇ ಕನಸು ಮಾಯಾಜಾಲದಿಂದ ಈಡೇರುವುದಿಲ್ಲ, ಅದಕ್ಕೆ ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಬೇಕು. ಕಠಿಣ ಪರಿಶ್ರಮ ಹಾಗೂ ಸತತವಾಗಿ ಮಾಡುತ್ತಿರುವ ಪ್ರಯತ್ನ ಎಂದಿಗೂ ವಿಫಲ ವಾಗುವದಿಲ್ಲ. ಇದಕ್ಕೆ ಸಾಕ್ಷಿಯೇ ಈ ವ್ಯಕ್ತಿ. ಅವರ ಹೆಸರು ಈಶ್ವರ್ ಸಿಂಗ್ ಬಾರಗಾಹ. ಇವರಿಗೆ 48 ವಯಸ್ಸಾಗಿದೆ. ಇವರು ಪ್ರಾರಂಭದಲ್ಲಿ ಒಬ್ಬ ಸೇಲ್ಸ್ ಮ್ಯಾನ್, ತೋಟಗಾರ ಅಲ್ಲದೆ ನೈಟ್ ವಾಚಮ್ಯಾನ್ ಕೆಲಸ ಸಹ ಮಾಡಿದ್ದಾರೆ.
ತಮ್ಮ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಒಂದು ಹೊಸ ಇತಿಹಾಸವನ್ನೇ ರಚಿಸಿದ್ದಾರೆ.
ಈಶ್ವರ್ ಸಿಂಗ್ ಬಾರಗಾಹ ಇವರು ಯಾವ ಕಾಲೇಜ್ ನಲ್ಲಿ ಮಾಲೀ (ತೋಟಗಾರ) ಕೆಲಸ ಮಾಡುತ್ತಿದ್ದರೋ ಅದೇ ಕಾಲೇಜಿನಲ್ಲಿ ಇಂದು ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಈಶ್ವರ್ ಅವರು ಸದ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು ಕೊಂಡಿದ್ದಾರೆ. ಆದರೆ ಮೊದಲಿಗೆ ತಮ್ಮ ಶಿಕ್ಷಣ ಹಾಗೂ ಮನೆಯನ್ನು ನಡೆಸಿಕೊಂಡು ಹೋಗುವ ಸಲುವಾಗಿ ಅವರು ಸೇಲ್ಸ್ ಮ್ಯಾನ್, ಮಾಲೀ, ವಾಚಮ್ಯಾನ್ ಮತ್ತು ಸೂಪರ್ ವೈಜರ್ ನಂತಹ ಅನೇಕ ಕೆಲಸ ಮಾಡಬೇಕಾಯಿತು. ಇವರ ಈ ಪಯಣ 19 ವಯಸ್ಸಿನಲ್ಲಿಯೇ ಶುರುವಾಯಿತು. ಆ ಸಮಯದಲ್ಲಿ ಛತ್ತೀಸಗಡ ದ ಬೈತಲಪುರ್ ನ ಹತ್ತಿರ ವಿರುವ ಘುಟಿಯಾ ಊರಿನಿಂದ ತಮ್ಮ ಮುಂದಿನ ಶಿಕ್ಷಣ ಪಡೆಯುವ ಸಲುವಾಗಿ ಹಾಗೂ ತದನಂತರ ನೌಕರಿ ಹುಡುಕುವ ಸಲುವಾಗಿ ಭಿಲಾಯಿಗೆ ಹೋದರು. ಅಲ್ಲಿ ಹೋದಾಗ ಅವರಿಗೆ ದಿನಕ್ಕೆ 150 ರೂಪಾಯಿ ದಿನಗೂಲಿಯಂತೆ ಒಂದು ಅಂಗಡಿಯಲ್ಲಿ ಸೇಲ್ಸ್ ಮನ್ ಕೆಲಸ ಸಿಕ್ಕಿತು. ಅವರಿಗೆ ತಮ್ಮ ಶಿಕ್ಷಣ ಮುಂದುವರೆಸುವ ಇಚ್ಛೆಯು ಸಹ ಇತ್ತು, ಆದ್ದರಿಂದ ಅವರಿಗೆ ಬರುವ ಸಂಬಳದಿಂದ ಕೆಲವು ರೂಪಾಯಿಗಳನ್ನು ಉಳಿಸುತ್ತ ಮುಂದೆ ಬಿ ಎ ಶಿಕ್ಷಣ ಸಲುವಾಗಿ ಅಪ್ಲಾಯ್ ಮಾಡಿದರು. ಅಷ್ಟೇ ಅಲ್ಲ ಭಿಲಾಯಿಯ ಒಂದು ಕಾಲೇಜ್ ನಲ್ಲಿ ಮಾಲೀ ಕೆಲಸ ಸಹ ಮಾಡಲು ಪ್ರಾರಂಭಿಸಿದರು. ಇದೆಲ್ಲ 1985 ರಲ್ಲಿ ನಡೆದಿದೆ.ಅವರು 1989 ರಲ್ಲಿ ತಮ್ಮ ಗ್ರೇಜುಯೇಷನ್ ಪೂರ್ಣ ಮಾಡಿದರು ಇದರ ಸಲುವಾಗಿ ಅವರಿಗೆ ಹಲವಾರು ಕೆಲಸಗಳು ಮಾಡಬೇಕಾಯಿತು,, ಮಾಲೀ, ಪಾರ್ಕಿಂಗ್ ಸ್ಟ್ಯಾಂಡ್ ನಲ್ಲಿ ಕೀಪರ್ ಮತ್ತು ಕನ್ಸ್ಟ್ರಕ್ಷನ್ ಸೈಟ್ ಮೇಲೆ ಸೂಪರ್ ವೈಜರ್ ಹೀಗೆ ಅನೇಕ ಕೆಲಸ ಮಾಡಿದರು.

ಪದವಿ ಮುಗಿದ ನಂತರ ಕ್ರಾಫ್ಟ್ ಶಿಕ್ಷಕರಾಗಿ ಒಂದು ಕಾಲೇಜಿಗೆ ಸೇರಿಕೊಂಡರು ಮತ್ತು ರಾತ್ರಿಯ ಸಮಯದಲ್ಲಿ ಅದೇ ಕಾಲೇಜಿನಲ್ಲಿ ವಾಚಮ್ಯಾನ್ ಕೆಲಸ ಮಾಡಲು ಪ್ರಾರಂಭಿಸಿದರು. ಅವರ ಕೌಶಲ್ಯ ಮತ್ತು ಯೋಗ್ಯತೆಯನ್ನು ಗುರುತಿಸಿ ಕಾಲೇಜ್ ಅಧಿಕಾರಿಗಳು ಈಶ್ವರ ಅವರನ್ನು ಅಸಿಸ್ಟೆಂಟ್ ಪ್ರೊಫೆಸರ್ ರೂಪದಲ್ಲಿ ನೇಮಕ ಮಾಡಿದರು.
‘ “ನನಗೆ ಪ್ರೊಫೆಸರ್ ಟಿ ಎಸ್ ಠಾಕೂರ್, ಕಾಲೇಜ್ ಪ್ರಿನ್ಸಿಪಾಲ್ ಪಿ.ಕೆ. ಶ್ರೀವಾತ್ಸವ(ಎಚ್ ಓ ಡಿ ಎಜುಕೇಶನ್) , ಡಾ ಎಚ್.ಎನ್.ದುಬೆ(ಎಚ್ ಓ ಡಿ ಕೆಮಿಸ್ಟ್ರಿ) ಮತ್ತು ಜೆ. ಪಿ. ಮಿಶ್ರಾ ಇವರಿಂದ ಯಾವಾಗಲೂ ಸಾಕಷ್ಟು ಸಹಾಯ ಮತ್ತು ಮಾರ್ಗದರ್ಶನ ದೊರೆಯಿತು. ನನಗೆ ಜಬಲಪುರ್ ಎಜುಕೇಶನ್ ಕಾಲೇಜ್ ನಲ್ಲಿ ಬಿ.ಎಡ್ ಶಿಕ್ಷಣ ಪಡೆಯುವ ಸಲುವಾಗಿ ಎರಡು ಸಲ ಅವಕಾಶ ಸಿಕ್ಕಿತ್ತು ಆದರೆ ಆರ್ಥಿಕ ಸಮಸ್ಯೆಯಿಂದಾಗಿ ಕಾಲೇಜ್ ಸೇರಲು ಸಾಧ್ಯವಾಗಲಿಲ್ಲ.”- ಈಶ್ವರ್ ಸಿಂಗ್
ಅದೇ ಕಾಲೇಜಿನಲ್ಲಿ ನೌಕರಿ ಮಾಡುತ್ತ ಅವರು ತಮ್ಮ ಎಂ.ಏಡ್ , ಬಿಪಿಎಡ್ ಮತ್ತು ಎಮ್’ಫಿಲ್ ಪೂರ್ಣ ಮಾಡಿದರು. ನಂತರ ಅಲ್ಲಿಯ ಸಮಿತಿಯ ಸದಸ್ಯರ ಅನುಗ್ರಹದ ಮೇರೆಗೆ ಅವರನ್ನು ಛತ್ತೀಸಗಡದ ಅಹೇರಿಯಲ್ಲಿರುವ ಕಾಲೇಜ್, ಕಲ್ಯಾಣ್ ಶಿಕ್ಷಾ ಮಹಾವಿದ್ಯಾಲಯದಲ್ಲಿ ಪ್ರಿನ್ಸಿಪಾಲ್ ರೂಪದಲ್ಲಿ 2005 ರಲ್ಲಿ ನೌಕರಿ ದೊರೆಯಿತು.
‘ ನನ್ನ ಇನ್ನೊಂದು ಕನಸಿತ್ತು ಅದೇನೆಂದರೆ ಸೆಕ್ಯುರಿಟಿ ಫೋರ್ಸೆಜ್ ಸೇರಬೇಕೆಂದು, ಇದರ ಸಲುವಾಗಿ ನಾನು ಅನೇಕ ಟೆಸ್ಟ್ ಮತ್ತು ಫಿಜಿಕಲ್ ಎಕ್ಸಾಮ್ ಕೂಡಾ ಪಾಸ್ ಮಾಡಿದ್ದೆ ಆದರೆ ಕೊನೆಯಲ್ಲಿ ನನಗೆ ಯಶಸ್ಸು ದೊರೆಯಲಿಲ್ಲ”.– ಈಶ್ವರ್
ಇವರಿಗೆ ಸ್ಪೋರ್ತಿದಾಯಕ ಕಥೆಗಳನ್ನು ಓದುವದೆಂದರೆ ತುಂಬಾ ಇಷ್ಟವಂತೆ. ಅವರ ಯಶಸ್ಸಿಗೆ ಕಾಲೇಜು ಅಧಿಕಾರಿಗಳು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸುತ್ತಾರೆ. ಅವರ ಈ ಕಥೆ ಒಂದಲ್ಲಾ ಒಂದು ಜೀವನದಲ್ಲಿ ಯಶಸ್ಸು ಆಗಬೇಕು ಎಂದು ಆಶಿಸುವ ಎಲ್ಲರಿಗೂ ಸ್ಫೂರ್ತಿಯಾಗಿದೆ.