Video: ಹಾವು ಸ್ಪೂನಿನಿಂದ ನೀರು ಕುಡಿಯುವದನ್ನು ನೋಡಿದ್ದೀರಾ?
ಇಂಟರ್ ನೆಟ್ ನಲ್ಲಿ ಹಾವಿಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೋಡಿರಬಹುದು. ಈ ವಿಡಿಯೋ ಸ್ವಲ್ಪ ಬೇರೆಯಾಗಿದೆ. ಯಾಕೆಂದರೆ, ಈ ಹಾವು ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಫೇಮಸ್ ಆಗಿದೆ. ಈ ಹಾವಿಗೆ ಜನರು ‘ಲೋಕಿ ದ ಸ್ನೇಕ್’ ಹೆಸರಿನಿಂದ ಗುರುತಿಸುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ‘ಲೋಕಿ’ ಗೆ 10 ಸಾವಿರಕ್ಕಿಂತಲೂ ಹೆಚ್ಚು ಜನರು ಫಾಲೋ ಮಾಡುತ್ತಾರೆ. ಇತ್ತೀಚೆಗೆ ಇದರ ಇನ್ಸ್ಟಾ ಪೇಜ್ ದಿಂದ ಒಂದು ವಿಡಿಯೋ ಶೇರ್ ಮಾಡಲಾಗಿತ್ತು. ಅದರಲ್ಲಿ ‘ಲೋಕಿ’ ಸ್ಪೂನಿನಿಂದ ನೀರು ಕುಡಿಯುತ್ತಿರುವದು ಕಂಡು ಬಂದಿದೆ.

ಈ ವಿಡಿಯೋ ಜೂನ್ 13 ರಂದು ಶೇರ್ ಮಾಡಲಾಗಿದೆ. ಈ ಸುದ್ದಿ ಪ್ರಕಟವಾಗುವವರೆಗೆ 13 ಸಾವಿರಕ್ಕೂ ಹೆಚ್ಚು ಜನ ನೋಡಿದ್ದರು. ಎಷ್ಟೋ ಜನರು ಇದನ್ನು ನೋಡಿ ತಮ್ಮ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ. ಕೆಲವರು ನೋಡಿ ಹೆದರಿದ್ದೇವೆ ಎಂದಿದ್ದಾರೆ, ಇನ್ನು ಕೆಲವರು ತುಂಬಾ ಕ್ಯೂಟ್ ಮತ್ತು ಸುಂದರವಾಗಿದೆ ಎಂದಿದ್ದಾರೆ. ಈ ಹಾವು ಚಮಚದಿಂದ ನೀರು ಕುಡಿಯುವ ಬದಲಾಗಿಯೂ ಇನ್ನು ಅನೇಕ ಕೆಲಸಗಳನ್ನು ಮಾಡುತ್ತದೆ.
ಇದಕ್ಕೆ ಏನಾದರೂ ಟಾಯಿಪ್ ಮಾಡಬೇಕಾಗಿದೆ?
ಎಲ್ಲೆಂದರಲ್ಲಿ ಅಡಗಿ ಕುಳಿತುಕೊಳ್ಳುವದು.
‘ಲೋಕಿ ದ ಸ್ನೇಕ್’ ಇನ್ಸ್ಟಾ ಪೇಜ್ ನಲ್ಲಿ ಹೋಗಿ ವಿಡಿಯೋಗಳನ್ನು ನೋಡಬಹುದು.