ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಪತ್ನಿ ಹಸೀನ್ ಜಹಾನ್ ಅವರು ಹಂಚಿಕೊಂಡಿದ್ದಾರೆ ‘ಲವ್’ ಆಗಿರೊ ವಿಡಿಯೋ! ಜನರಂತಿದ್ದಾರೆ ರಾಖಿ ಸಾವಂತ್ ಪಾರ್ಟ್ – 2
ಟೀಮ್ ಇಂಡಿಯಾದ ಬೌಲರ್ ಮೊಹಮ್ಮದ್ ಶಮಿಯವರು ಇತ್ತಿತ್ತಲಾಗಿ ತುಂಬಾ ಚರ್ಚೆಯಲ್ಲಿರುತ್ತಿದ್ದಾರೆ. ತಮ್ಮ ಕೆಲಸದಿಂದ ಅಥವಾ ಅವರ ಪತ್ನಿ ಶೇರ್ ಮಾಡುವ ವಿಡಿಯೋಗಳಿಂದ. ಅವರ ಪತ್ನಿ ಹಸೀನ್ ಜಹಾಳು ಸಹ ಸೋಶಿಯಲ್ ಮೀಡಿಯಾದ ಕಾರಣದಿಂದ ಯಾವತ್ತೂ ಲೈಮ್ ಲೈಟ್ ನಲ್ಲಿರುತ್ತಾರೆ. ಇವರು ಇನ್ಸ್ಟಾಗ್ರಾಮ್ ನಲ್ಲಿ ಏನಾದರೊಂದು ಶೇರ್ ಮಾಡುತ್ತಲೇ ಇರುತ್ತಾರೆ, ಇದರಿಂದ ಶಮಿಯ ಫ್ಯಾನ್ಸ್ ಗಳ ದೃಷ್ಟಿ ಅದರ ಮೇಲೆ ಹೋಗುವ ಹಾಗೆ ಮಾಡುತ್ತಲೇ ಇರುತ್ತಾಳೆ. ಇತ್ತೀಚೆಗೆ ಮಾಜಿ ರಾಷ್ಟ್ರಪತಿಯವರಾದ ಎಪಿಜೆ ಅಬ್ದುಲ್ ಕಲಾಂ ಅವರ ವಿಡಿಯೋ ಒಂದನ್ನು ಶೇರ್ ಮಾಡಿ ಅದಕ್ಕೆ ಕ್ಯಾಪ್ಶನ್ ಕೊಟ್ಟಿದ್ದರು. ಆದರೆ ವಿಡಿಯೋ ಮತ್ತು ಕ್ಯಾಪ್ಶನ್ ಎಲ್ಲಿಯೂ ಒಂದನ್ನೊಂದು ಹೋಲುತ್ತಿರಲಿಲ್ಲ. ಹೀಗಾಗಿ ಯೂಜರ್ ಗಳು ಹಸೀನ್ ಳಿಗೆ ಬಾಲಿವುಡ್ ಡ್ರಾಮಾ ಕ್ವಿನ್ ರಾಖಿ ಸಾವಂತ್ ಳಿಗೆ ಹೋಲಿಸುತ್ತಿದ್ದಾರೆ. ಹೀಗಾಗಿ ಹಸೀನ್ ಳು ತುಂಬಾ ತಮಾಷೆಗೆ ಗುರಿಯಾಗುತ್ತಿದ್ದಾಳೆ. ಮೊನ್ನೆ ಒಂದು ಬೇರೆ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ಬಾಲಿವುಡ್ ಫಿಲ್ಮ್ ಸೊಲ್ಜರ್ ಚಿತ್ರದ Soldier soldier meethi baatein bol kar ಹಾಡಿನೊಂದಿಗೆ ತಾನು ಡ್ಯಾನ್ಸ್ ಮಾಡುವ ವೀಡಿಯೊ ಒಂದನ್ನು ಶೇರ್ ಮಾಡಿದ್ದಾಳೆ.
ಕೆಲವು ದಿನಗಳ ಹಿಂದೆ ತುಂಬಾ ಸೂಪರ್ ಹಿಟ್ ಹಾಡು ‘ಕಾಟಾ ಲಗಾ’ ಹಾಡಿನ ವಿಡಿಯೋವನ್ನು ಶೇರ್ ಮಾಡಿದ್ದರು. ಅದರಲ್ಲಿ ಹಸೀನ್ ಳು ಒರಿಜನಲ್ ಹಾಡಿನಲ್ಲಿ ಕುಣಿದ ಶೇಫಾಲಿ ಜರೀವಾಲಾ ಅವಳ ತರ ಕುಣಿಯಲು ಪ್ರಯತ್ನಿಸಿದ್ದಳು. ಈ ವಿಡಿಯೋವನ್ನು ನೋಡಿ ಫ್ಯಾನ್ಸ್ ಗಳು ತುಂಬಾ ಟ್ರೋಲ್ ಮಾಡಿದ್ದರು. ಅದರಲ್ಲಿ ಕೆಲವರು ಕಮೆಂಟ್ಸ್ ಗಳನ್ನು ಸಹ ಈ ರೀತಿ ಬರೆದಿದ್ದರು. ಮೊದಲು ಹೋಗಿ ಶಮಿಯವರಿಗೆ ಕ್ಷಮೆ ಯಾಚಿಸಿ ಎಂದು.
ಹಸೀನ್ ಜಹಾಳು ಯಾವಾಗಲೂ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಡಾನ್ಸ್ ಗಳ ವಿಡಿಯೋವನ್ನು ಶೇರ್ ಮಾಡುತ್ತಿರುತ್ತಾಳೆ. ಶಮಿ ಮತ್ತು ಹಸೀನ್ ಳ ನಡುವೆ ಕಳೆದೆರಡು ವರ್ಷಗಳಿಂದ ವಿವಾದ ನಡೆದಿದೆ. ಹಸೀನಳು, ಶಮಿಯು ಬೇರೊಬ್ಬಳ ಜೊತೆಗೆ ಸಂಬಂಧವಿಟ್ಟುಕೊಂಡಿದ್ದಾನೆಂದು ಆರೋಪಿಸಿದ್ದಾಳೆ. ಹೀಗಾಗಿ ಇಬ್ಬರು ಸದ್ಯಕ್ಕೆ ಬೇರೆ ಬೇರೆ ಇರುತ್ತಾರೆ.