ಮಗಧೀರ ನಟಿ ಕಾಜಲ್ ಅಗರವಾಲ್ ಳ ತಂಗಿ ಇದ್ದಾಳೆ ಕಾಜಲ್ ಗಿಂತ ‘ಸುಂದರ’. ಫೋಟೋ ನೋಡಿದ ಮೇಲೆ ನೀವೂ ಫ್ಯಾನ್ ಆಗ್ತಿರಾ!

ಸೌತ್ ಸಿನಿಮಾದ ಅಭಿನೇತ್ರಿಯಾದ ಕಾಜಲ್ ಅಗ್ರವಾಲ್ ಇವರು ‘ಸಿಂಘಮ’ ಚಿತ್ರದ ಮೂಲಕ ಬಾಲಿವುಡ್ ಕರಿಯರ್ ಶುರು ಮಾಡಿದರು. ಇದರ ಹೊರತು ‘ಸ್ಪೆಷಲ್ 26’ ಮತ್ತು ‘ದೋ ಲಫ್ಜೊ ಕಿ ಕಹಾನಿ’ ಯಲ್ಲಿ ಸಹ ನಟಿಸಿದ್ದಾರೆ. ಕಾಜಲ್ ಅಗ್ರವಾಲ್ ಅವರು ಬಾಲಿವುಡ್ ನಲ್ಲಿ ಅಷ್ಟೊಂದು ಹಿಟ್ ಆಗದೆ ಇದ್ದರೂ, ದಕ್ಷಿಣ ಸಿನಿಮಾ ರಂಗದಲ್ಲಿ ಮಾತ್ರ ತಮ್ಮ ಹೆಸರು ತುಂಬಾ ಫೇಮಸ್ ಮಾಡಿಕೊಂಡಿದ್ದಾರೆ.

ಟಾಪ್ ನಟಿಯರಲ್ಲಿ ಕಾಜಲ್ ಅವರ ಹೆಸರು ಸಹ ಒಂದಾಗಿದೆ. ಆದರೆ ನಾವಿಂದು ಕಾಜಲ್ ಕುರಿತು ಅಲ್ಲ ಅವರ ಸಹೋದರಿಯ ಕುರಿತು ತಿಳಿದುಕೊಳ್ಳುವವರಿದ್ದೇವೆ. ಕಾಜಲ್ ಅಗ್ರವಾಲ್ ಅವರ ಕಿರಿಯ ಸಹೋದರಿಯ ಹೆಸರು ನಿಶಾ ಅಗ್ರವಾಲ್ ಇದೆ. ನಿಶಾ ಅವರು ಸಹ ಕಾಜಲ್ ಹಾಗೆ ಅಭಿನೇತ್ರಿಯಾಗಿದ್ದಾರೆ. ನಿಶಾ ಕಾಜಲ್’ಕ್ಕಿಂತ ನಾಲ್ಕು ವರ್ಷ ಚಿಕ್ಕವರಿದ್ದಾರೆ.

2010 ರಲ್ಲಿ ನಿಶಾ ‘ಯೆಮಂದಿ ಈ ವೇಲಾ’ ಎಂಬ ತೆಲಗು ಚಿತ್ರದ ಮೂಲಕ ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಿಶಾ ಇವರು ತಮಿಳ್, ತೆಲಗು ಮತ್ತು ಮಲಯಾಳಂ ಚಿತ್ರಗಳಲ್ಲಿ ತಮ್ಮ ಅಭಿನಯದ ಮುಖಾಂತರ ಅನೇಕ ರಸಿಕರ ಮನಸ್ಸನ್ನು ಗೆದ್ದಿದ್ದಾರೆ. ಅದರ ಜೊತೆಗೆ ಅನೇಕ ಸೂಪರ್ ಹಿಟ್ ಚಿತ್ರಗಳೂ ಸಹ ಮಾಡಿದ್ದಾರೆ. ಆದರೆ ಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗಲೇ ಅವರ ವಿವಾಹ ವಾಯಿತು.

ಕಾಜಲ್ ಅವರ ಸಹೋದರಿಯ ಮದುವೆಯಾಗಿದೆ. 28 ಡಿಸೆಂಬರ್ 2013 ರಂದು ಮುಂಬಯಿಯಲ್ಲಿಯ ವ್ಯವಸಾಯಿಕರಾದ ಕರಣ್ ವಲೆಚಾ ಅವರೊಂದಿಗೆ ಮದುವೆ ಮಾಡಿಕೊಂಡರು. ಕರಣ್ ಮತ್ತು ನಿಶಾ ಅವರ ಮೊದಲ ಭೇಟಿ 5 ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಗೆಳೆಯರ ಮುಖಾಂತರ ಆಗಿತ್ತು. ನಿಶಾ ಅವರು ಔರಂಗಾಬಾದನಲ್ಲಿ ಹೋಟೆಲ್ ಮ್ಯಾನೇಜ್’ಮೆಂಟ್ ಪದವಿಯನ್ನು ಪಡೆದುಕೊಂಡಿದ್ದಾರೆ.

ಹೈದ್ರಾಬಾದ್ ಗೆ ಬರುವದಕ್ಕಿಂತ ಮುಂಚೆ ಅವರು ತಾಜ್ ಗ್ರೂಪ್ ಆಫ್ ಹೋಟೆಲ್’ನಲ್ಲಿ ಇಂಟರ್ಶಿಪ್ ಸಹ ಮಾಡಿದ್ದರು. ಅವರ ಪತಿಯೂ ಸಹ ವ್ಯವಸಾಯ ವ್ಯವಸ್ಥಾಪನೆಯಲ್ಲಿ ಪದವೀಧರರಾಗಿದ್ದಾರೆ. ಕರಣ್ ಒಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ತಮ್ಮ ಕರಿಯರ್ ಪ್ರಾರಂಭ ಮಾಡಿದರು. ಸದ್ಯದಲ್ಲಿ ಅವರು ತಮ್ಮ ಫ್ಯಾಮಿಲಿ ಬಿಜನೆಸ್ ಕಂಪನಿಯಾದ ವಲೆಚಾ ಇಂಜಿನಿಯರಿಂಗ್ ಲಿಮಿಟೆಡ್ ಮತ್ತು ಫಿಟ್ನೆಸ್ ಚೆನ್ ‘ಗೋಲ್ಡ್ ಜೀಮ್’ ನ್ನು ನೋಡಿಕೊಳ್ಳುತ್ತಿದ್ದಾರೆ.

ಮದುವೆಯ ನಂತರ ನಿಶಾ ಅವರು ಯಾವುದೇ ಚಿತ್ರ ಮಾಡಿಲ್ಲ. ನಿಶಾ ಅವರು ಕೊನೆಯದಾಗಿ ‘ಕಜಿನ್ಸ್’ ಎಂಬ ಮಲಯಾಳಂ ಚಿತ್ರದಲ್ಲಿ ನಟಿಸಿದ್ದಾರೆ. ನಿಶಾ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟಿವ್ ಇದ್ದಾರೆ. ಇತ್ತೀಚೆಗೆ ನಿಶಾ ಅವರ ಬಿ’ಕನಿ ಫೋಟೋಗಳು ತುಂಬಾ ವೈರಲ್ ಆಗಿದ್ದವು.