ರಾತ್ರಿಯಲ್ಲಿ ‘ಈ’ ಆಹಾರಗಳನ್ನು ಎಂದಿಗೂ ಸೇವಿಸಬೇಡಿ, ಇಲ್ಲದಿದ್ದರೆ ‘ಈ’ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ!

ನಮ್ಮ ಆರೋಗ್ಯ ಉತ್ತಮವಾಗಿರಲು ಸಮತೋಲವಾದ ಮತ್ತು ಒಳ್ಳೆಯ ಆಹಾರ ಸೇವನೆ ಮಾಡುವದು ತುಂಬಾ ಮಹತ್ವದ್ದಾಗಿದೆ. ಯಾವಾಗ ತಿನ್ನಬೇಕು, ಎಷ್ಟು ತಿನ್ನಬೇಕು? ಈ ಎಲ್ಲ ಸಂಗತಿಗಳ ಕುರಿತು ತಿಳಿದುಕೊಂಡು ಅದರ ಪ್ರಕಾರ ಸೇವನೆ ಮಾಡಿದರೆ ನಮ್ಮ ಶರೀರ ಸದೃಢ ವಾಗಿರುವದರ ಜೊತೆಗೆ ಉತ್ತಮವಾದ ಆರೋಗ್ಯ ಸಹ ಲಭಿಸುವದು. ಆದರೆ ಒಂದಿಷ್ಟು ಜನರು ತಮ್ಮ ಆಹಾರವನ್ನು ಬೇಗನೆ ಸೇವಿಸುವರು, ಮತ್ತಷ್ಟು ಜನರು ತುಂಬಾ ಲೇಟಾಗಿ ಸೇವನೆ ಮಾಡುವರು. ಇದರಿಂದ ಶರೀರಕ್ಕೆ ಬೇಕಾದ ಪ್ರಮಾಣದಲ್ಲಿ ಆಹಾರ ಪೂರೈಕೆ ಆಗುವದಿಲ್ಲ ಇದರಿಂದ ನಮಗೆ ಅನಾರೋಗ್ಯ ಬರುವ ಸಾಧ್ಯತೆ ಇರುತ್ತದೆ.

ಊಟದ ಸಮಯ ಮತ್ತು ಅದರ ಪ್ರಮಾಣ ಇವುಗಳ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲಾಗುವದು. ರಾತ್ರಿ ತಿಂದ ಆಹಾರದ ಪರಿಣಾಮ ನಮ್ಮ ನಿದ್ದೆಯ ಮೇಲಾಗುವದು. ಒಂದು ವೇಳೆ ರಾತ್ರಿಯ ಊಟ ಸರಿಯಾಗಿ ಮಾಡದಿದ್ದರೆ ಅದರ ಪರಿಣಾಮ ನಮ್ಮ ನಿದ್ರೆಯ ಮೇಲಾಗುವದು. ಆಯುರ್ವೇದದ ಅನುಸಾರ ನಾವು ಮಲಗುವದಕ್ಕಿಂತ 2 ಗಂಟೆ ಮುಂಚೆ ಆಹಾರ ಸೇವನೆ ಮಾಡಬೇಕಂತೆ. ಊಟ ಮಾಡಿದ ತಕ್ಷಣವೇ ಮಲಗಿದರೆ ನಮ್ಮಲ್ಲಿ ಬೊಜ್ಜು ನಿರ್ಮಾಣವಾಗುವುದರ ಹಾಗೂ ನಮ್ಮ ಪಚನಕ್ರಿಯೆ ಸಹ ಸರಿಯಾಗಿ ಆಗುವದಿಲ್ಲ.

ನಿಮಗೆ ಗೊತ್ತಿದೆಯಾ ಮಲಗುವದಕ್ಕಿಂತ ಮುಂಚೆ ಈ ಪದಾರ್ಥಗಳ ಸೇವನೆ ಮಾಡಬಾರದಂತೆ. ಏಕೆಂದರೆ ಅದರ ಋಣಾತ್ಮಕ ಪರಿಣಾಮ ನಮ್ಮ ಆರೋಗ್ಯದ ಮೇಲಾಗುವದು. ಇಂದು ನಾವು ಮಲಗುವ ಮುಂಚೆ ಸೇವನೆ ಮಾಡಬಾರದಂತಹ ಪದಾರ್ಥಗಳ ಬಗ್ಗೆ ತಿಳಿಸುವವರಿದ್ದೇವೆ.

1) ಪಾಸ್ತಾ:-

ಪಾಸ್ತಾ ಇದೊಂದು ಬೇಗನೆ ತಯಾರಾಗುವ ಪದಾರ್ಥವಾಗಿದೆ. ದಿನ ತುಂಬಾ ಆಯಾಸಗೊಂಡ ಜನರು ಮಲಗುವದಕ್ಕಿಂತ ಮುಂಚೆ ಪಾಸ್ತಾ ಬೇಗನೆ ತಯಾರಾಗುವದೆಂದು ಪಾಸ್ತಾ ಸೇವನೆ ಮಾಡುವರು. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ಇನ್ನಿತರ ಅನೇಕ ಪದಾರ್ಥಗಳಿರುತ್ತವೆ. ಅವುಗಳನ್ನು ನಮ್ಮ ಶರೀರಕ್ಕೆ ಬೇಗನೆ ಪಚನ ಮಾಡಲು ಸಾಧ್ಯವಾಗುವದಿಲ್ಲ. ರಾತ್ರಿ ತಡವಾಗಿ ಪಾಸ್ತಾ ಸೇವನೆ ಮಾದುವವರಿಗೆ ಮಲಬದ್ಧತೆ ಮತ್ತು ಹೈಪರ್ ಆಸಿಡಿಟಿ ಯಂತಹ ಸಮಸ್ಯೆಗಳು ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ.

2) ಮಸಾಲೆಯುಕ್ತ ಆಹಾರ:-

ಅಧಿಕ ಪ್ರಮಾಣದಲ್ಲಿ ಮಸಾಲೆಯುಕ್ತ ಆಹಾರ ಸೇವನೆ ಮಾಡುವದು ಆರೋಗ್ಯದ ದೃಷ್ಟಿಯಿಂದ ತುಂಬಾ ಹಾನಿಕಾರಕವಾಗಿದೆ. ರಾತ್ರಿ ಮಲಗುವದಕ್ಕಿಂತ ಮುಂಚೆ ಮಸಾಲೆಯುಕ್ತ ಪದಾರ್ಥ ಸೇವನೆ ಮಾಡಿದರೆ ಶರೀರದಲ್ಲಿ ಪಿತ್ತ ಹೆಚ್ಚಾಗುತ್ತದೆ. ಅದು ಶರೀರದ ಸಲುವಾಗಿ ತುಂಬಾ ಹಾನಿಕಾರಕ ವಾಗಿದೆ. ಆದ್ದರಿಂದ ರಾತ್ರಿ ಸಮಯದಲ್ಲಿ ಮಸಾಲೆಭರಿತ ಆಹಾರ ಸೇವನೆ ಮಾಡಬಾರದು.

3) ಸಿಹಿ:-

ರಾತ್ರಿ ತಡವಾಗಿ ಸಿಹಿ ತಿನ್ನುವದು ಕೂಡಾ ಆರೋಗ್ಯದ ಸಲುವಾಗಿ ತುಂಬಾ ಅಪಾಯಕಾರಿಯಾಗಿದೆ. ಮಲಗುವಕ್ಕಿಂತ ಮುಂಚೆ ಎಂದಿಗೂ ಸಿಹಿ ಪದಾರ್ಥ ತಿನ್ನಬೇಡಿ, ಇದರಿಂದ ಹಲ್ಲುಗಳಿಗೆ ಸಮಸ್ಯೆ ನಿರ್ಮಾಣವಾಗುವದು. ಅಲ್ಲದೆ ನಮ್ಮ ಶರೀರದಲ್ಲಿ ಬೊಜ್ಜು ಸಹ ಹೆಚ್ಚಾಗುವದು. ಇದರಿಂದ ನಮ್ಮ ಶರೀರದ ಮೇಲೆ ಕೆಟ್ಟ ಪರಿಣಾಮವಾಗುವದು. ಆದ್ದರಿಂದಲೇ, ಮಲಗುವ ಮುಂಚೆ ಚಾಕ್ಲೇಟ್ ತಿನ್ನ ಬಾರದು ಎಂದು ಹೇಳುತ್ತಾರೆ.

4) ನೂಡಲ್ಸ್

ನೂಡಲ್ಸ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲರಿ ಇರುತ್ತವೆ. ಆದ್ದರಿಂದ ಮಲಗುವದಕ್ಕಿಂತ ಮುಂಚೆ ನೂಡಲ್ಸ್ ಸೇವನೆ ಮಾಡಬಾರದು. ನೂಡಲ್ಸ್ ಸಹ ಬಹಳಷ್ಟು ಬೇಗ ತಯಾರಿಸಲಾಗುತ್ತದೆ, ಆದರಿಂದ ಜನರು ಅದನ್ನು ಹೆಚ್ಚು ಸೇವನೆ ಮಾಡುವರು. ನಿಮ್ಮ ಮಾಹಿತಿಗಾಗಿ, ನೂಡಲ್ಸ್ ನಲ್ಲಿ ಕಾರ್ಬೋಹೈಡ್ರೇಟ್ಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅದು ಬೊಜ್ಜಿನಲ್ಲಿ ರೂಪಾಂತರ ವಾಗುತ್ತದೆ. ಮಲಗುವದಕ್ಕಿಂತ ಮುಂಚೆ ಎಂದಿಗೂ ನೂಡಲ್ಸ್ ತಿನ್ನಬೇಡಿ ಇಲ್ಲದಿದ್ದರೆ ಹೊಟ್ಟೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಉಂಟಾಗುವವು.

5 ) ಹೆಚ್ಚಿನ ಪ್ರಮಾಣದಲ್ಲಿ ಫೈಬರ್ ಹೊಂದಿರುವ ತರಕಾರಿಗಳು:

ಫೈಬರ್ ಯುಕ್ತ ತರಕಾರಿಗಳನ್ನು ತಿನ್ನುವದರಿಂದ ನಮ್ಮ ಹೊಟ್ಟೆಯು ಬಹಳಷ್ಟು ಸಮಯದ ವರೆಗೆ ತುಂಬಿದ ಹಾಗೆ ಅನಿಸುವದು. ಕೋಸುಗಡ್ಡೆ, ಈರುಳ್ಳಿ, ಕೋಬಿ ಇತ್ಯಾದಿ ತರಕಾರಿ ಮಲಗುವದಕ್ಕಿಂತ ಮುಂಚೆ ತಿನ್ನಬಾರದು ಕಾರಣ ಫೈಬರ್ ನಮ್ಮ ಪಚನ ಕ್ರಿಯೆಯನ್ನು ಕಡಿಮೆ ಮಾಡುತ್ತದೆ ಆದ್ದರಿಂದ ನಮ್ಮ ಹೊಟ್ಟೆ ಉಬ್ಬಿದ ಹಾಗೆ ಅನಿಸುವದು.

ಸೂಚನೆ- ಈ ಲೇಖನದಲ್ಲಿ ನೀಡಲಾದ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Infotrend.in ಇದನ್ನು ಖಚಿತಪಡಿಸುವುದಿಲ್ಲ. ಇದನ್ನು ಕಾರ್ಯಗತಗೊಳಿಸುವ ಮುನ್ನ ತಜ್ಞರ ಸಲಹೆ ಪಡೆಯಿರಿ.

ಗೆಳೆಯರೇ ನಿಮಗೆ ಈ ಲೇಖನ ಇಷ್ಟವಾಗಿದ್ದರೆ ನಿಶ್ಚಿತವಾಗಿ ಲೈಕ್ ಮಾಡಿ ಮತ್ತು ಇದನ್ನು ನಿಮ್ಮ ಗೆಳೆಯರೊಂದಿಗೆ ಶೇರ್ ಮಾಡಲು ಮರೆಯದಿರಿ. ಹಾಗೆ ನಿಮ್ಮ ಪ್ರತಿಕ್ರಿಯೆ ಕಾಮೆಂಟ್ ಮಾಡಿ ತಿಳಿಸಿ.