ತಂದೆಗನಿಸಿತ್ತು ಮಗ ‘ಶಿಪಾಯಿ’ ಆಗ್ತಾನೆ ಅಂತ, ಮಗ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದು 12 ಶತಕಗಳನ್ನು ಬಾರಿಸಿದ.
61 ಟೆಸ್ಟ್ ಪಂದ್ಯ, 3982 ರನ್, 12 ಶತಕ ಮತ್ತು 15 ಅರ್ಧಶತಕ ಇದು ಟೀಮ್ ಇಂಡಿಯಾದಲ್ಲಿಯ ಒಬ್ಬ ಎಂತಹ ಆಟಗಾರನ ಪ್ರದರ್ಶನ ವಿದೆಯಂದರೆ, ಆತನು ಕಠಿಣ ಪರಸ್ಥಿತಿಯಲ್ಲಿ ಭಾರತೀಯ ತಂಡದ ಸಲುವಾಗಿ ಓಪನರ್ ಆಗಿ ಬಂದು ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಂತಹ ಆಟಗಾರ ಯಾರು ಎಂದರೆ ಅವರೇ ಮುರಳಿ ವಿಜಯ್. ಈ ಕ್ರಿಕೆಟರ್ ಬಹಳಷ್ಟು ಕಾಲದವರೆಗೆ ಭಾರತ ಕ್ರಿಕೆಟ್ ತಂಡದಲ್ಲಿ ಓಪನರ್ ಬ್ಯಾಟ್ಸ್ಮನ್ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.

36 ವರ್ಷದ ಈ ಕ್ರಿಕೆಟಿಗ ಸದ್ಯಕ್ಕೆ ಭಾರತದ ತಂಡದ ಹೊರಗೆ ಇದ್ದರೂ ಸಹ ಅವರು ಮಾಡಿರುವ ಕಾರ್ಯ ಎಷ್ಟು ಉದಾತ್ತವಾಗಿದೆ ಎಂದರೆ ಅವರು ಕುಟುಂಬದವರು ಕನಸಲ್ಲಿ ಸಹ ಈ ರೀತಿಯ ಕಾರ್ಯ ಮಾಡುವನು ಅಂದುಕೊಂಡಿರಲಿಲ್ಲ. ಅವರ ತಂದೆಯವರಿಗೆ ಈತ ಒಬ್ಬ ಸಿಪಾಯಿ(ಸೈನಿಕ)ನಾಗುವನು ಎಂದು ಸದಾ ಅವರಿಗೆ ಅನಿಸುತ್ತಿತ್ತಂತೆ. ಆದರೆ ಮುರಳಿಯವರು ತಮ್ಮ ಪ್ರಯತ್ನದಿಂದ ಮುಂದೆ ಹೋದರು.
ಮುರಳಿ ವಿಜಯ್ ಅವರ ಪ್ರವಾಸ.

ಮುರಳಿ ವಿಜಯ್ ಅವರ ಜನ್ಮ ಒಂದು ಸಾಧಾರಣ ಕುಟುಂಬದಲ್ಲಿ 1 ಏಪ್ರಿಲ್ 1983 ರಂದು ಆಯಿತು. ಕುಟುಂಬದ ಆರ್ಥಿಕ ಪರಸ್ಥಿತಿ ಚೆನ್ನಾಗಿತ್ತು ಆದರೆ ಮುರಳಿ ವಿಜಯ್ ಅಭ್ಯಾಸದಲ್ಲಿ ಮಾತ್ರ ಬಹಳಷ್ಟು ಹಿಂದೆ ಇದ್ದರು. ಕಲಿಯುವದರಲ್ಲಿ ಮುರಳಿಯವರಿಗೆ ಮನಸ್ಸೇ ಬರುತ್ತಿರಲಿಲ್ಲ, ಈ ಪ್ರವಾಸದಲ್ಲಿ ಮುರಳಿಯವರು 12 ನೆ ತರಗತಿಯಲ್ಲಿ ಅನುತ್ತೀರ್ಣರಾದರು. ಪರೀಕ್ಷೆಯಲ್ಲಿ ಫೇಲ್ ಆದನಂತರ ಮುರುಳಿಯವರು ತಮ್ಮ ಮನೆಯನ್ನು ತೊರೆದರು. ವೈಫಲ್ಯದಿಂದ ಮುರಳಿ ವಿಜಯ್ ಅವರು ತಪ್ಪಾದ ದಾರಿ ಹಿಡಿಯಬಾರದು ಎಂದು ಸದಾ ಅವರ ಕುಟುಂಬದವರಿಗೆ ಅನಿಸುತ್ತಿತ್ತು. ಆದರೆ ಮುರಳಿ ವಿಜಯ್ ಅವರ ಗುರಿ ಬೇರೇನೇ ಯಾಗಿತ್ತು. ಅವರು ತಮ್ಮ ತಾಯಿ-ತಂದೆಯರಿಗೆ ‘ನೀವು ಹೆದ’ರಬೇಡಿ ನಾನೇನು ಆ’ತ್ಮ’ಹತ್ಯೆ ಮಾಡಿಕೊಳ್ಳುವದಿಲ್ಲ. ನನಗೆ ಹೇಗೆ ಬದುಕುವ ಆಸೆ ಇದೆಯೋ ಹಾಗೆ ಬದುಕುತ್ತೇನೆ. ನನ್ನದೇ ಆದ ಒಂದು ಸ್ವಂತದ ಗುರುತು ನಿರ್ಮಾಣ ಮಾಡುವದಿದೆ, ಎಂದು ಕುಟುಂಬದವರಿಗೆ ಭರವಸೆ ನೀಡಿದರು.

ಮನೆಯನ್ನು ಬಿಟ್ಟು ಮುರುಳಿಯವರು ತನ್ನ ಗೆಳೆಯನ ಮನೆಗೆ ಹೋದರು. ಅನೇಕ ಸಲ ಚೆನ್ನೈ ವಾಯ್’ಎಮ್’ಸಿ’ಎ ಅಥವಾ ಆಯ್ಆಯ್’ಟಿ ಯ ಕ್ರಿಕೇಟ್ ಮೈದಾನದಲ್ಲಿ ಮಲಗಿಕೊಂಡಿದ್ದಾರಂತೆ. ಕ್ರಿಕೇಟ್ ಜೊತೆಗೆ ಜೀವನ ಸಾಗಿಸಲು ಸ್ನೂಕರ್ ಪಾರ್ಕ್ ನಲ್ಲಿ ಅವರು ನೌಕರಿ ಸಹ ಮಾಡುತ್ತಿದ್ದರು.

ಮುರಳಿ ವಿಜಯ್ ಅವರ ಟ್ಯಾಲೆಂಟ್ ಆ ಕಾಲದ ಭಾರತೀಯ ತಂಡದ ಬೌಲರ್ ಗಳ ಕೋಚ್ ಭರತ್ ಅರುಣ್ ಅವರು ಮೊದಲು ಗುರುತಿಸಿದರು. ಅರುಣ್ ಮುರಳಿಯನ್ನು ಮೊದಲ ಬಾರಿಗೆ ಚೆನ್ನೈ ಕ್ರಿಕೆಟ್ ಲೀಗ್ ಪರ ಆಡಲು ಒತ್ತಾಯಿಸಿದರು. ಈ ಆಟದಲ್ಲಿ ಮುರಲಿಯವರು ಎಲ್ಲರನ್ನು ಆ’ಶ್ಚ’ರ್ಯಚಕಿತಗೊಳಿಸಿದರು. ಮುರಳಿ ಅವರು 21 ನೇ ವರ್ಷದಲ್ಲಿ ಪಾದಾರ್ಪಣೆ ಮಾಡುವವರೆಗೂ ತಮಿಳುನಾಡು ರಣಜಿ ತಂಡದಲ್ಲಿ ಆಡಲು ಸಿದ್ಧರಾಗಿದ್ದರು. ಆ ಸಮಯದಲ್ಲಿ ಮುರಳಿಯವರ ಕೂದಲು ತುಂಬಾ ಉದ್ಧವಾಗಿದ್ದ ಕಾರಣ ಅವರನ್ನು ತಂಡದಲ್ಲಿ ಆಯ್ಕೆಯಾಗಲು ಸಾಧ್ಯವಾಗಲಿಲ್ಲ.