ತನ್ನ ಮರಿಗಳ ರಕ್ಷಣೆಗಾಗಿ ವಿಷಕಾರಿ ಹಾವಿನೊಂದಿಗೆ ಫೈಟ್ ಮಾಡಿದ ಅಳಿಲು! ನೋಡಿ ಈ ವೈರಲ್ ವಿಡಿಯೋ!

ತಾಯಿಯ ತ್ಯಾಗಕ್ಕೆ ತಾಯಿಯೇ ಸಮಾನ. ಬೇರೆ ಯಾರೂ ಆ ಸ್ಥಾನ ತೆಗೆದುಕೊಳ್ಳಲಿಕ್ಕೆ ಅಸಾಧ್ಯ. ಮಕ್ಕಳಿಗಾಗಿ ತಾಯಿಯು ಖಡ್ಗದ ಹೊಡೆತಗಳನ್ನು ಗುರಾಣಿಯ ತರ ತನ್ನ ಮೈಮೇಲೆ ತೆಗೆದುಕೊಳ್ಳುವಳು, ಆದರೆ ಮಕ್ಕಳಿಗೆ ಮಾತ್ರ ಸ್ವಲ್ಪವೂ ಚಿಕ್ಕದಾದ ಗಾಯವನ್ನು ಆಗಲು ಬಿಡುವದಿಲ್ಲ. ಹೀಗೆ ಬರೀ ಮಾನವರಲ್ಲಿ ಅಷ್ಟೇ ಅಲ್ಲ, ಪ್ರತಿಯೊಂದು ಜೀವಿಯಲ್ಲಿ ನೋಡಲು ಸಿಗುತ್ತದೆ. ಒಂದು ತಾಯಿ ಅಳಿಲಿನ ವಿಡಿಯೋ ತುಂಬಾ ಹರಿದಾಡುತ್ತಿದೆ. ಅದರಲ್ಲಿ ತನ್ನ ಮರಿಗಳ ಜೀವವನ್ನು ಉಳಿಸಲು ತನಗಿಂತ ನಾಲ್ಕು ಪಟ್ಟು ದೊಡ್ಡದಾದ ನಾಗನ ಜೊತೆಗೆ ಫೈಟ್ ಮಾಡಿದೆ. ಹೇಗಾದರೂ ಮಾಡಿ ತನ್ನ ಮರಿಗಳಿಂದ ಹಾವನ್ನು ದೂರ ಒಯ್ಯುವ ಪ್ರಯತ್ನ ಮಾಡಿದೆ. ವೀಡಿಯೊವನ್ನು Kruger Sightings ಹೆಸರಿನ ಯೂಟ್ಯೂಬ್ ಚಾನೆಲ್ ನವರು ಶೇರ್ ಮಾಡಿದ್ದಾರೆ.
ವಿಡಿಯೋ ನೋಡಿ
ಈ ವೀಡಿಯೋವನ್ನು ಮಾರ್ಚ್ 2 ರಂದು Kruger Sightings ತಮ್ಮ ಚಾನೆಲ್ ನಲ್ಲಿ ಶೇರ್ ಮಾಡಿದ್ದು ಸುದ್ದಿ ಬರೆಯುವವರೆಗೆ 3 ಲಕ್ಷಕ್ಕಿಂತ ಅಧಿಕ ವ್ಯೂವ್ಜ್ ದೊರಕಿವೆ. ಅದಕ್ಕೆ ಕ್ಯಾಪ್ಶನ್ ಹೀಗೆ ಕೊಟ್ಟಿದ್ದಾರೆ, ಯಾವಾಗ ಮರಿಗಳ ಮಕ್ಕಳ ವಿಷಯಕ್ಕೆ ಗಂಡಾಂತರ ಬರುತ್ತೋ ಆಗ ತಾಯಿ ಯಾರೊಂದಿಗೂ ಫೈಟ್ ಮಾಡಲು ತಯಾರಿರುತ್ತಾಳೆ. ಈ ವೀಡಿಯೋ ಹೇಳುವದೇನೆಂದರೆ, ತನ್ನ ಮಕ್ಕಳಿಗಾಗಿ ತಾಯಿಯು ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಲು ಹಿಂದೆ ಮುಂದೆ ನೋಡುವದಿಲ್ಲ.
ಪ್ರಶಂಸಿಸುತ್ತಿದ್ದಾರೆ ಯುಜರ್ಸ್ ಗಳು.

ಸೋಶಿಯಲ್ ಮೀಡಿಯಾದಲ್ಲಿಯ ವೀಕ್ಷಕರು ಅಳಿಲಿನ ಪ್ರಶಂಸೆ ಮಾಡುತ್ತಿದ್ದಾರೆ. ಅವರು ಬರೆದಿದ್ದಾರೆ, ಹಾವಿಗೆ ಹೆದರಿಸುವ ಸಲುವಾಗಿ ತನ್ನ ಬಾಲದ ಉಪಯೋಗವನ್ನು ಹೇಗೆ ಮಾಡುತ್ತಿದೆ ನೋಡಿ. ಮತ್ತೆ ಕೆಲವರು ಈ ಅಳಿಲಿಗೆ ಚಿಕ್ಕ ಯೋದ್ಧಾ ಎನ್ನುತ್ತಿದ್ದಾರೆ.