ಅಕ್ಷಯ್ ಕುಮಾರ್ ಮನೆಗೆ ಬರುವ ಹಾಲಿನ ಬೆಲೆ ಕೇಳಿದರೆ ಅಚ್ಚರಿಯಾಗುವುದು!

ಇತ್ತೀಚಿನ ದಿನಗಳಲ್ಲಿ, ಸಾಮಾನ್ಯ ಜನರಿಂದ ಹಿಡಿದು ವಿಐಪಿಗಳವರೆಗೆ ಎಲ್ಲರೂ ಆರೋಗ್ಯದ ಕುರಿತು ಕಾಳಜಿ ಹೊಂದಿದ್ದಾರೆ. ಕೆಲವು ಜನರನ್ನು ಹೊರತುಪಡಿಸಿ, ಅನೇಕ ಜನರು ವಿಶೇಷವಾಗಿ ಯುವಕರು ತಮ್ಮ ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಬಹಳ ಜಾಗೃತರಾಗಿದ್ದಾರೆ. ಈ ಇಂಟರ್ನೆಟ್ ಯುಗದಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಮಾಹಿತಿಯು ಉಚಿತವಾಗಿ ಲಭ್ಯವಿದೆ, ಆದ್ದರಿಂದ ಅವರು ತಮ್ಮದೇ ಆದ ಮಾಹಿತಿಯನ್ನು ಸಂಗ್ರಹಿಸಿ ಅದಕ್ಕೆ ಅನುಗುಣವಾಗಿ ತಮ್ಮ ಆಹಾರಕ್ರಮ ಮತ್ತು ವ್ಯಾಯಾಮ ಆರಿಸಿಕೊಳ್ಳುತ್ತಾರೆ.

ಬಾಲಿವುಡ್ ತಾರೆಯರ ಕಡೆಗೆ ಹಣದ ಯಾವುದೇ ಸಮಸ್ಯೆ ಇರುವದಿಲ್ಲ. ಈ ಸ್ಟಾರ್ಸ್ ಗಳು ತಮ್ಮದೇ ಆದ ಜೀವನ ಶೈಲಿಯನ್ನು ಹೊಂದಿರುತ್ತಾರೆ. ಅದರಲ್ಲಿ ಅವರದೇ ಆದ ವಿಭಿನ್ನ ಉಡುಗೆ ತೊಡುಗೆ ಹಾಗೂ ಆಹಾರಕ್ರಮ ಸಹ ಭಿನ್ನವಾಗಿರುತ್ತದೆ. ಅಕ್ಷಯ ಕುಮಾರ್ ಅವರು ತಮ್ಮ ಆರೋಗ್ಯದ ಸಲುವಾಗಿ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದು ನಮಗೆಲ್ಲ ತಿಳಿದ ಸಂಗತಿಯಾಗಿದೆ.

ಅವರ ದಿನ ಮುಂಜಾನೆಯ ನಾಲ್ಕು ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಕೊನೆಯ ಊಟ ಸಾಯಂಕಾಲ 7 ಗಂಟೆಯ ಒಳಗಡೆಯೇ ಮುಗಿಯುತ್ತದೆ. ಒಂದು ವೇಳೆ ರಾತ್ರಿಯ ಸಮಯದಲ್ಲಿ ಹಸಿವೆ ಉಂಟಾದರೆ ಅವರು ವೈಟ್ ಎಗ್ ಆಮ್ಲೆಟ್ ಸೇವನೆ ಮಾಡುವರು. ಏಕೆಂದರೆ ಅದು ಸಲೀಸಾಗಿ ಪಚನವಾಗಲು ಸಹಾಯಕವಾಗಿದೆ. ಅವರ ಮನೆಗೆ ಬರುವ ಹಾಲು ತುಂಬಾ ದುಬಾರಿಯಾಗಿದೆ.

ನಮ್ಮ ನಿಮ್ಮೆಲ್ಲರ ಮನೆಯಲ್ಲಿ ಕೊಂಡುಕೊಳ್ಳುವ ಹಾಲಿನ ಬೆಲೆ ಪ್ರತಿ ಲೀಟರ್’ಗೆ 40 ರಿಂದ 50 ರೂಪಾಯಿ ಇರಬಹುದು. ಆದರೆ ಅಕ್ಷಯ ಕುಮಾರ ಅವರ ಮನೆಯಲ್ಲಿ ಬರುವ ಹಾಲಿನ ಬೆಲೆ ಪ್ರತಿ ಲೀಟರ್’ಗೆ 190 ರೂಪಾಯಿ ಇದೆಯಂತೆ. ಈ ಹಾಲು ಆಕಳಿನ ಹಾಲಾಗಿರುತ್ತವೆ. ಆದರೆ ಈ ಆಕಳುಗಳಿಗೆ ವಿಶೇಷವಾದ ಆಹಾರ ತಿನ್ನಲು ಕೊಡುವರು. ಆದುದರಿಂದ ಈ ಹಾಲು ತುಂಬಾ ಪೌಷ್ಟಿಕವಾಗಿರುತ್ತದಂತೆ!

ಈ ಆಕಳಿನ ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಪ್ರಮಾಣ ಹೆಚ್ಚು ಇರುತ್ತದೆ. ಕ್ಯಾಲ್ಸಿಯಂ ಎಲುಬುಗಳು ಮತ್ತು ಹಲ್ಲಿನ ವಿಕಾಸದ ಸಲುವಾಗಿ ತುಂಬಾ ಅವಶ್ಯಕತೆ ಇರುತ್ತದೆ. ಹಾಗೆ ಸ್ನಾಯುಗಳ ಬೆಳೆವಣಿಗೆಗೆ ಸಹ ತುಂಬಾ ಉಪಯೋಗವಾಗುವದು. ಮೆದುಳು ಕಳುಹಿಸಿದ ಸಂದೇಶಗಳನ್ನು ದೇಹಕ್ಕೆ ಕೊಂಡೊಯ್ಯಲು ಕ್ಯಾಲ್ಸಿಯಂನ ಅಗತ್ಯವಿರುತ್ತದೆ.

ಈ ಹಸುಗಳಿಗೆ ಶುದ್ಧ RO ದ ಫಿಲ್ಟರ್ ನೀರು ಕುಡಿಯಲು ಕೊಡುತ್ತಾರೆ, ಮತ್ತು ಅವುಗಳಿರುವ ಸ್ಥಳ ಸಹ ಅತೀ ಸ್ವಚ್ಛವಾಗಿಡುತ್ತಾರೆ. ಬೇಸಿಗೆಯಲ್ಲಿ ವಿಶೇಷವಾಗಿ ಈ ಆಕಳುಗಳ ಸಲುವಾಗಿ AC ಯ ವ್ಯವಸ್ಥೆ ಸಹ ಮಾಡಲಾಗುತ್ತದೆ. ನಿಯಮಿತವಾಗಿ ಆಕಳುಗಳ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ಒಂದು ವೇಳೆ ಆಕಳು ಅನಾರೋಗ್ಯದಿಂದ ಬಳಲುತ್ತಿರುವದು ಕಂಡು ಬಂದರೆ ಅದರ ಹಾಲನ್ನು ಮಾರಾಟಕ್ಕೆ ಕಳುಹಿಸಲಾಗುವದಿಲ್ಲ.

ನಾವು ಕೊಂಡುಕೊಳ್ಳುವ ಹಾಲಿನಲ್ಲಿ ಪ್ರೇಜರ್ವೆಟಿವ್ಹಸ್ ಹೆಚ್ಚಾಗಿರುವದರಿಂದ ಹಾಲು ಬೇಗನೆ ಕೆಡುತ್ತವೆ. ಈ ಆಕಳಿನ ಹಾಲನ್ನು ಕೇವಲ ವಿ ಆಯ್ ಪಿ ಜನರಿಗೆ ಮಾತ್ರ ಪೂರೈಕೆ ಮಾಡಲಾಗುತ್ತದೆ. ಸಾಮಾನ್ಯ ಜನರಿಗಾಗಿ ಈ ಹಾಲು ಉಪಲಬ್ಧವಿಲ್ಲ. ಈ ಹಾಲಿನಲ್ಲಿ ಪೌಷ್ಟಿಕತೆ ಆಕಳುಗಳಿಗೆ ನೀಡುವ ಹಸಿರು ತರಕಾರಿಗಳಿಂದ ದೊರೆಯುತ್ತದೆ.

ಈ ಆಕಳುಗಳ ಹಾಲನ್ನು ತಗೆಯುವ ಸಲುವಾಗಿ ಯಂತ್ರದ ಉಪಯೋಗ ಮಾಡಲಾಗುತ್ತದೆ. ಅಷ್ಟೇ ಅಲ್ಲ ಹಾಲು ತಗೆದ ಎರಡು ಗಂಟೆಯ ಒಳಗಾಗಿ ಅದನ್ನು ಗ್ರಾಹಕರ ಮನೆಗೆ ತಲುಪಿಸಲಾಗುತ್ತದೆ. ಈ ಹಾಲು ಆದಷ್ಟು ಬೇಗ ಗ್ರಾಹಕರ ಮನೆಗೆ ತಲುಪಿಸುದರಿಂದ ಇದರಲ್ಲಿ ಪ್ರೇಜರ್ವೆಟಿವ್ಹಸ್ ಮಿಶ್ರಣ ಮಾಡುವದಿಲ್ಲ. ಈ ಹಾಲು ನೈಸರ್ಗಿಕವಾಗಿ ತಾಜಾ ಆಗಿರುತ್ತದೆ.

ಪ್ರತಿದಿನ ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸುವ ಅಕ್ಷಯ್ ಕುಮಾರ್‌ಗೆ 190 ರೂ. ಯಾವುದೇ ಹೆಚ್ಚಢನಲ್ಲ, ಆದರೆ ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆ ಇದಲ್ಲ. ಅಕ್ಷಯ ಕುಮಾರ್ ಅವರ ಕಡೆಗೆ ಬರುವಂತಹ ಹಾಲು ನಾವು ಕೊಂಡುಕೊಳ್ಳದೆ ಇದ್ದರೂ, 15-20 ರೂಪಾಯಿ ಹೆಚ್ಚಿಗೆ ಕೊಟ್ಟು ಉತ್ತಮ ಮಟ್ಟದ ಹಾಲು ಅವಶ್ಯಕವಾಗಿ ಕೊಂಡುಕೊಳ್ಳಬಹುದು.

-Team Infotrend