ಗಂಡನ ಆಫೀಸಿನಲ್ಲಿ ಆಕ್ಷೇಪಾರ್ಹ ವಸ್ತುಗಳೊಂದಿಗೆ ಆಪ್ತ ಗೆಳತಿಯನ್ನೇ ರೆಡ್ ಹ್ಯಾಂಡ್ ಆಗಿ ಹಿಡಿದ ಮಹಿಳೆ; ಆಮೇಲೆ ಗಂಡ ಮತ್ತು ಗೆಳತಿ ಇಬ್ಬರನ್ನೂ…

ಪತಿ ಪತ್ನಿಯ ಸಂಬಂಧ ನಿಂತಿರುವದೇ ವಿಶ್ವಾಸದ ಮೇಲೆ. ಒಮ್ಮೆ ಈ ಸಂಬಂಧಕ್ಕೆ ಪೆಟ್ಟು ಬಿದ್ದರೆ ಸಂಸಾರದ ಬಿಕ್ಕಟ್ಟು ಹೆಚ್ಚಾಗಿ ಗಂಡ ಹೆಂಡಿರಲ್ಲಿ ವಿವಾದಗಳು ಹುಟ್ಟಿಕೊಳ್ಳಲು ಪ್ರಾರಂಭಿಸುತ್ತವೆ.

ಇದೆ ರೀತಿಯ ಒಂದು ಘಟನೆ ನೆರೆಯ ಮಹಾರಾಷ್ಟ್ರದ ನಾಗಪೂರದಲ್ಲಿ ನಡೆದಿದೆ. ಪತ್ನಿಯ ಗೆಳತಿಯ ಜೊತೆಯೇ ಅಫೇಯರ್ ಇದ್ದ ಗಂಡನಿಗೆ ಮುದ್ದೆ ಮಾಲು ಸಹ ಹಿಡಿದಳು ಮತ್ತು ಸ್ಥಳದಲ್ಲಿಯೇ ಇಬ್ಬರಿಗೂ ಮೈ ಹಣ್ಣು ಮಾಡಿದ್ದಾಳೆ. ಪತ್ನಿಯು ಪತಿಯ ಪ್ರೇಯಸಿಯಾದ ತನ್ನ ಹಳೆಯ ಗೆಳತಿಯ ಕೂದಲನ್ನೇ ಹಿಡಿದು ಚಚ್ಚಿದ್ದಾಳೆ.

ಆಫೀಸಿನಲ್ಲಿ ಅಶ್ಲೀ’ಲವಾದ ಕೃತ್ಯಗಳನ್ನು ಮಾಡುತ್ತಿದ್ದಾಗ ಇಬ್ಬರೂ ಪತ್ನಿಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದನ್ನು ನೋಡಿದ ಮೇಲೆ ಪತ್ನಿಯ ಸಿಟ್ಟು ಮಸ್ತಕಕ್ಕೇರಿ ಪತಿಯ ಪ್ರೇಯಸಿಯ (ತನ್ನ ಗೆಳತಿ) ಕೂದಲನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾಳೆ. ತನ್ನ ಪ್ರೇಯಸಿಯನ್ನು ಉಳಿಸಲು ಮಧ್ಯದಲ್ಲಿ ಬಂದ ಗಂಡನಿಗೂ ಕಪಾಳಮೋಕ್ಷ ಮಾಡಿದ್ದಾಳೆ. ಕೊನೆಗೆ ಪ್ರಕರಣ ಪೊಲೀಸ್ ಸ್ಟೇಶನ್ ಮೆಟ್ಟಲೇರಿದೆ.

ವಿಸ್ತೃತ ಮಾಹಿತಿಯ ಪ್ರಕಾರ, ವಿನೋದ್ ಮತ್ತು ಪ್ರಾಂಜಲಿ (ಹೆಸರು ಬದಲಿಸಲಾಗಿದೆ)ಇವರಿಬ್ಬರು ಉಚ್ಚಶಿಕ್ಷಿತರಿದ್ದು ಕೆಲವು ವರ್ಷಗಳ ಹಿಂದೆ ಫೇಸ್ ಬುಕ್ ಮಾಧ್ಯಮದಿಂದ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಗೆಳೆಯರಾದ ನಂತರ ಇಬ್ಬರಲ್ಲೂ ಒಬ್ಬರಿಗೊಬ್ಬರ ಪ್ರತಿ ಪ್ರೇಮ ಅಂಕುರಿಸಿತು. ಮುಂದೆ ಹಿರಿಯರ ಅನುಮತಿಯಿಂದ ಪ್ರೇಮವಿವಾಹ ಮಾಡಿಕೊಂಡರು. ವಿನೋದ ಒಂದು ಪ್ರೈವೇಟ್ ಕಂಪನಿಯಲ್ಲಿ ಒಳ್ಳೆಯ ಕೆಲಸದ ಮೇಲೆ ಇದ್ದರೆ, ಪ್ರಾಂಜಲಿ ಸಹಿತ ಪ್ರೈವೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು.

ಆಫೀಸ್ ನಲ್ಲಿ ಪ್ರಾಂಜಲಿಯ ಪರಿಚಯ ಪಿಂಕಿ ಹೆಸರಿನ ಯುವತಿಯ ಜೊತೆಗೆ ಆಯಿತು. ದಿನಗಳೆದಂತೆ ಇಬ್ಬರೂ ಆತ್ಮೀಯ ಮಿತ್ರರಾದರು. ಮುಂದೆ ಒಂದು ದಿನ ಪತ್ನಿ ಪ್ರಾಂಜಲಿ ತನ್ನ ಗಂಡನಿಗೆ ಪಿಂಕಿಯ ಪರಿಚಯ ಮಾಡಿಕೊಟ್ಟಳು. ಅಂದಿನಿಂದ ಪಿಂಕಿ ಇವರಿಬ್ಬರ ಫ್ಯಾಮಿಲಿ ಫ್ರೆಂಡ್ ಆದಳು. ಒಂದು ವರ್ಷದ ನಂತರ ವಿನೋದನ ಟ್ರಾನ್ಸಫರ್ ಮುಂಬಯಿಗೆ ಆದಕಾರಣ ಪ್ರಾಂಜಲಿ, ವಿನೋದ ಮತ್ತು ಮಗುವಿನ ಜೊತೆಗೆ ಮುಂಬಯಿಗೆ ಬಂದಳು. ಏತನ್ಮದ್ಯೆ ಪಿಂಕಿಗೂ ಸಹ ಮುಂಬಯಿಯಲ್ಲಿ ಜಾಬ್ ಸಿಕ್ಕಿತು. ಮುಂಬಯಿಯಲ್ಲಿ ಪರಿಚಯದವರು ಯಾರೂ ಇಲ್ಲದ ಕಾರಣ ಪಿಂಕಿ ವಿನೋದ್ ಮತ್ತು ಪ್ರಾಂಜಲಿಯ ಜೊತೆಗೆ ಅವರ ಮನೆಯಲ್ಲಿಯೇ ಇರತೊಡಗಿದಳು. ಪಿಂಕಿ ಮತ್ತು ವಿನೋದ್ ಇಬ್ಬರಲ್ಲೂ ಪ್ರೇಮ ಹುಟ್ಟಲು ಇದೇ ಕಾರಣವಾಯಿತು. ಇಬ್ಬರೂ ಒಬ್ಬರಿಗೊಬ್ಬರು ಗಾಢವಾಗಿ ಪ್ರೀತಿಸತೊಡಗಿದರು. ಪ್ರಾಂಜಲಿಗೆ ಮಾತ್ರ ಇದರ ಸ್ವಲ್ಪವೂ ವಾಸನೆ ಬಡಿಯಲಿಲ್ಲ. ಮುಂದೆ ಕೆಲವು ದಿನಗಳ ನಂತರ ವಿನೋದನ ವರ್ಗಾವಣೆ ನಾಗಪೂರಕ್ಕೆ ಆದ ನಂತರ ಮತ್ತೆ ನಾಗಪೂರಕ್ಕೆ ಬಂದನು. ಆತನ ಹಿಂದೆ ಹಿಂದೆ ಪಿಂಕಿಯೂ ನಾಗಪೂರಕ್ಕೆ ಬಂದಳು. ಇದೊಂದು ಕಾಕತಾಳೀಯವಾಗಿರಬೇಕೇಂದು ತಿಳಿದು ಪ್ರಾಂಜಲಿ ಅಷ್ಟೊಂದು ವಿಚಾರ ಮಾಡದೆ ಸುಮ್ಮನಾದಳು. ನಂತರ ವಿನೋದನ ವರ್ಗಾವಣೆ ನಾಶಿಕ್ ಗೆ ಆದಮೇಲೆ ಪಿಂಕಿ ಸಹ ನಾಶಿಕ್ ಗೆ ಹೋದಳು. ಈಗ ಮಾತ್ರ ಪತ್ನಿ ಪ್ರಾಂಜಲಿಗೆ ಪಿಂಕಿಯ ಮೇಲೆ ಸಂಶಯ ಮೂಡಲು ಪ್ರಾರಂಭಿಸಿ ಗಂಡನನ್ನು ಮರಳಿ ನಾಗಪೂರಕ್ಕೆ ಕರೆಸಿದಳು. ಮತ್ತು ಗಂಡನಿಗೆ ಇಲ್ಲಿಯೇ ಬಂದು ವ್ಯವಸಾಯ ಮಾಡಲು ಸೂಚಿಸಿದಳು. ವಿನೋದ್ ಅದಕ್ಕೆ ಒಪ್ಪಿ ನಾಗಪೂರಿನಲ್ಲಿ ಫೈನಾನ್ಸ್ ವ್ಯವಸಾಯ ಪ್ರಾರಂಭಿಸಿದನು. ವಿನೋದ್ ಈಗ ಹೆಂಡತಿಯ ರಡಾರ್ ಮೇಲಿದ್ದನು. ಹೀಗೆಯೇ ಒಂದು ದಿನ ಗಂಡನ ಮೊಬೈಲ್ ಚೆಕ್ ಮಾಡಿದಾಗ ಮಾತ್ರ ಪ್ರಾಂಜಲಿಗೆ ಧಕ್ಕೆಯಾಯಿತು. ಆನಂತರ ಮಾತ್ರ ಗಂಡನ ಮೇಲೆ ಒಂದು ದೃಷ್ಟಿ ಇಟ್ಟಳು.

ಹೀಗೆಯೇ ಒಂದು ದಿನ ಪ್ಲಾನ್ ಮಾಡಿ ವಿನೋದ್ ನಿಗೆ ಸಹಜವಾಗಿ ಆಫೀಸಿಗೆ ಕಳಿಸಿದಳು. ಆತನ ಹಿಂದೆಯೇ ಪ್ರಾಂಜಲಿ ತನ್ನ ತಂಗಿಯ ಜೊತೆಗೆ ಆಫೀಸ್ ಮುಟ್ಟಿದಳು. ಆಗ ಆಫೀಸಿನ ಕ್ಯಾಬಿನ್ ನಲ್ಲಿ ಗಂಡ ವಿನೋದ್ ಮತ್ತು ಪಿಂಕಿ ಅ’ಶ್ಲೀಲವಾದ ಹಾವಭಾವಗಳನ್ನು ಮಾಡುತ್ತಿದ್ದುದನ್ನು ಕಂಡಳು. ಹಾಗೆಯೇ ಪಿಂಕಿಯ ಪರ್ಸನಲ್ಲೂ ಕೆಲವೊಂದು ಆಕ್ಷೇಪಾರ್ಹ ವಸ್ತುಗಳು ದೊರೆತವು. ಈ ಎಲ್ಲ ಕಾರಣದಿಂದ ಸಿಟ್ಟಾದ ಪ್ರಾಂಜಲಿ ಪಿಂಕಿಯ ಕೂದಲನ್ನು ಎಳೆದು ಅಲ್ಲಿಯೇ ಬೆಂ’ಡೆತ್ತಿದಳು. ಪಿಂಕಿಯನ್ನು ಉಳಿಸಲು ಮಧ್ಯದಲ್ಲಿ ಗಂಡ ಬಂದಾಗ ಆತನಿಗೂ ಕಪಾ’ಳಮೋಕ್ಷ ಮಾಡಿದ್ದಾಳೆ ಪ್ರಾಂಜಲಿ. ಇದೆಲ್ಲದರ ನಂತರ ಪ್ರಕರಣ ಪೊಲೀಸರ ಕಡೆಗೆ ಹೋಗಿದೆ.