ಕೂದಲಿದ್ದರೂ ಬೋಳು ‘ತಲೆ’ಯಲ್ಲೇಕೆ ಇರುತ್ತಾರೆ ಹೃತಿಕ್ ತಂದೆ ರಾಕೇಶ್ ರೋಷನ್?
ಇಂದು ನಾವು ನಿಮಗೆ ರಾಕೇಶ್ ರೋಷನ್ ಬಗ್ಗೆ ಒಂದು ಆಸಕ್ತಿದಾಯಕ ವಿಷಯವನ್ನು ತಿಳಿಸುವವರಿದ್ದೇವೆ. ಹೃತಿಕ್ ಅವರ ತಂದೆ ರಾಕೇಶ್ ಅವರ ಬೋಳು ತಲೆಯನ್ನು ನೋಡಿ ಅನೇಕ ಜನರಿಗೆ ಅವರ ತಲೆಯಲ್ಲಿ ಕೂದಲೇ ಇಲ್ಲ ಉದುರಿ ಹೋಗಿವೆ ಎಂಬ ಸಂಶಯವಿರಬೇಕು ಆದರೆ ಅದು ಸತ್ಯವಲ್ಲ. ರಾಕೇಶ್ ಅವರು ಸದಾ ಬೋಳು ತಲೆಯಲ್ಲಿರಲು ಇದರ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ, ಅದು ಬಹುಶಃ ಕೆಲವು ಜನರಿಗೆ ಮಾತ್ರ ತಿಳಿದಿದೆ.

ನಿರ್ದೇಶಕರಾಗಿ ರಾಕೇಶ್ ಅವರ ಮೊದಲ ಚಿತ್ರ ‘ಖುದ್ಗರ್ಜ್’ 1987 ಬಿಡುಗಡೆಯಾಗಿತ್ತು. ಅದರಲ್ಲಿ ಶತ್ರುಘ್ನ ಸಿನ್ಹಾ ಮತ್ತು ಜಿತೇಂದ್ರ ಈ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಪ್ರೊಡ್ಯೂಸರ್ ಕೂಡಾ ರಾಕೇಶ್ ಅವರೇ ಆಗಿದ್ದರು. ಅಂದಿನ ಕಾಲದಲ್ಲಿ ಈ ಚಿತ್ರಕ್ಕೆ ಜನರು ತುಂಬಾ ಇಷ್ಟ ಪಟ್ಟಿದರು.

ಈ ಫಿಲ್ಮ್ ರಿಲೀಸ್ ಮಾಡುವದಕ್ಕಿಂತ ಮುಂಚೆ ರಾಕೇಶ್ ರೋಷನ್ ಅವರು ತಿರುಪತಿಯ ಬಾಲಾಜಿಯ ಮಂದಿರಕ್ಕೆ ಹೋಗಿದ್ದರು. ಅಲ್ಲಿ ಅವರು ಒಂದು ಹರಕೆ ಹೊತ್ತರು. ಆ ಹರಕೆ ಏನೆಂದರೆ ” ನನ್ನ ಈ ಮೊದಲನೆಯ ಫಿಲ್ಮ್ ಹಿಟ್ ಆದರೆ ನಿನಗೆ ನನ್ನ ಕೂದಲುಗಳನ್ನು ಅರ್ಪಿಸುವೆ” ಎಂದು ಬಾಲಜಿಯನ್ನು ಬೇಡಿಕೊಂಡರು.

ರಿಲೀಸ್ ನಂತರ ಅವರ ಚಿತ್ರ ಬಾಕ್ಸ್ ಆಫೀಸ್’ನಲ್ಲಿ ತುಂಬಾ ಸೂಪರಹಿಟ್ ಆಗಿ ಸಾಬೀತಾಯಿತು. ಆದರೆ ರಾಕೇಶ್ ಅವರು ಬಾಲಜಿಗೆ ನೀಡಿದ ಹರಕೆಯನ್ನು ಮರೆತು ಅವರ ಕೂದಲನ್ನು ಸಹ ಅರ್ಪಿಸಲು ಮರೆತೇ ಬಿಟ್ಟರು.

ಬಹಳ ದಿನಗಳ ನಂತರ, ರಾಕೇಶ್ ಅವರ ಪತ್ನಿ ಪಿಂಕಿ ಈ ಹರಕೆಯ ಬಗ್ಗೆ ತಿಳಿಸಿದರು. ಏತನ್ಮಧ್ಯೆ, ಅವರು ತಮ್ಮ ಎರಡನೇ ಚಿತ್ರವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದರು.

ರಾಕೇಶ ಅವರ ನಿರ್ದೇಶನದ ಎರಡನೆಯ ಚಿತ್ರ ‘ಖೂನ್ ಭರಿ ಮಾಂಗ್’ ಆಗಿತ್ತು. ಈ ಚಿತ್ರ ರಿಲೀಸ್ ಆಗುವದಕ್ಕಿಂತ ಮುಂಚೆ ರಾಕೇಶ ಅವರು ಹರಕೆಯಂತೆ ತಮ್ಮ ತಲೆಯ ಕೂದಲನ್ನು ಬೋಳಿಸಿಕೊಂಡರು. ಹಾಗೂ ಅಂದಿನಿಂದ ತಾವು ಸದಾ ಬೋಳು ತಲೆಯಲ್ಲಿಯೇ ಇರುವೆನು ಎಂದು ನಿಶ್ಚಯ ಮಾಡಿದರು. ಈ ಒಂದು ಕಾರಣಕ್ಕಾಗಿ ಇಂದಿಗೂ ಸಹ ರಾಕೇಶ ರೋಷನ್ ಅವರು ಸದಾ ಬೋಳು ತಲೆಯಿಂದಲೇ ಇರುತ್ತಾರೆ.

ತದನಂತರ ಅವರ ಮತ್ತೊಂದು ಚಿತ್ರ ಬಾಕ್ಸ್ ಆಫೀಸಿನಲ್ಲಿ ಅತ್ಯಂತ ಸೂಪರ್ ಹಿಟ್ ಸಾಬೀತಾಯಿತು. ಖಂಡಿತವಾಗಿಯೂ ಇದು ಅವರ ಯಶಸ್ಸಿನ ರಹಸ್ಯವೆಂದು ಸಹ ಹೇಳಲಾಗುತ್ತದೆ.

ರಾಕೇಶ್ ರೋಷನ್ ಅವರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಅವರು ಸಿನಿಮಾ ಸೆಟ್ ಗಿಂತ ಜಾಸ್ತಿ ಹೊತ್ತು ಜೀಮ್ ನಲ್ಲೇ ಕಳೆಯುತ್ತಾರೆ.