ರಾಹುಲ್ ದ್ರಾವಿಡ್ ಅವರ ಈ ‘ಒಂದು’ ನಿರ್ಧಾರದಿಂದ ಧೋನಿ ತಂಡ 2007 ರ T-20 ವಿಶ್ವಕಪ್ ಗೆದ್ದಿತು!
ವರ್ಷ 2007 . ವಿಶ್ವ ಕಪ್ ಟೂರ್ನಿಯಲ್ಲಿ ಎರಡು ದೊಡ್ಡ ಘಟನೆಗಳಾದವು. ಒಂದು 50 ಓವರ್ ಗಳ ವಿಶ್ವ ಟೂರ್ನಿಯಲ್ಲಿ ಹೀನಾಯ ಸೋಲು ಮತ್ತು ಅದೇ ವರ್ಷ ಮೊಟ್ಟ ಮೊದಲ T-ಟ್ವೆಂಟಿ ಯಲ್ಲಿ ವರ್ಲ್ಡ್ ಚಾಂಪಿಯನ್! ರಾಹುಲ್ ಅವರ ನೇತೃತ್ವದಲ್ಲಿ ಭಾರತಕ್ಕೆ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮೊದಲ ರೌಂಡ್ ನಲ್ಲಿ ಹೊರ ಬೀಳುವ ಪರಿಸ್ಥಿತಿ ಎದುರಾಯಿತು. ಆನಂತರ ಧೋನಿಯ ಯುವಬಳಗ ಚುಟುಕು ಪಂದ್ಯದಲ್ಲಿ ಭಾರತದ ಬಾವುಟ ಬಾನೆತ್ತರಕ್ಕೆ ಹಾರಿಸಿದರು.
ಭಾರತದ ಫ್ಯಾನ್ಸ್ ಗಳು ರಾಹುಲ್ ಅವರ ನೇತೃತ್ವದ 2007 ರ ವರ್ಲ್ಡ್ ಕಪ್ ನ್ನು ನೆನಪಿಸಿಕೊಳ್ಳಲು ಬಯಸುವದಿಲ್ಲ. 2007 ರ ಚುಟುಕು ಪಂದ್ಯದ ಬಗ್ಗೆ ತತ್ಕಾಲಿನ ಮ್ಯಾನೇಜರ್ ಲಾಲಚಂದ್ ರಾಜಪೂತ್ ಅವರು ಖುಲಾಸೆಯೊಂದನ್ನು ಈಗ ಹೊರಗೆ ಹಾಕಿದ್ದಾರೆ. ಅವರ ಪ್ರಕಾರ 2007 ವಿಶ್ವಕಪ್ ಟೂರ್ನಿಯಲ್ಲಾದ ಸೋಲಿನ ನಂತರ ರಾಹುಲ್ ಅವರು ತಮ್ಮ ಜೊತೆಗಿದ್ದ ಸೀನಿಯರ್ ಆಟಗಾರರಿಗೆ ಚುಟುಕು ಪಂದ್ಯದಲ್ಲಿ ಆಡದಂತೆ ಸಲಹೆಯನ್ನು ಕೊಟ್ಟಿದ್ದರು. ಈ ಕಾರಣದಿಂದ ಸಚಿನ್, ಸೌರವ್ ಹಾಗೂ ಸ್ವತಃ ರಾಹುಲ್ ಅವರು ಈ ಚುಟುಕು ಪಂದ್ಯಗಳಲ್ಲಿ ಭಾಗವಹಿಸಲಿಲ್ಲ.

ಸ್ಪೋರ್ಟ್ಸ್ ಕ್ರೀಡಾ ಫೇಸ್ಬುಕ್ ಲೈವ್ ನಲ್ಲಿ ಲಾಲ್ ಚಂದ್ ರಾಜಪೂತ್ ರು, ಸಚಿನ್ ಮತ್ತು ಸೌರವ್ ಅವರಿಗೆ ಟ್ವೆಂಟಿ ಟ್ವೆಂಟಿ ವರ್ಲ್ಡ್ ಕಪ್ ನಲ್ಲಿ ಆಡದಂತೆ ರಾಹುಲ್ ಅವರೇ ತಡೆದಿದ್ದರು ಎಂದು ಹೇಳಿದ್ದಾರೆ.
ರಾಹುಲ್ ಅವರು ಭಾರತದ ನಾಯಕರಾಗಿದ್ದು ಆ ಸಮಯದಲ್ಲಿ ಇಂಗ್ಲೆಂಡಿನಲ್ಲಿದ್ದರು. ಚುಟುಕು ವರ್ಲ್ಡ್ ಕಪ್ ಆಡಲು ಆಗ ಕೆಲವು ಆಟಗಾರರು ಇಂಗ್ಲೆಂಡಿನಿಂದ ನೇರವಾಗಿ ಜೋಹನ್ಸಬರ್ಗಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ರಾಹುಲ್ ಅವರು ಯುವಕರಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು.

ದ್ರಾವಿಡ್ ಅವರ ಇದೇ ವಿಚಾರದಿಂದ 2007 ರ ವಿಶ್ವ ಕಪ್ ನಲ್ಲಿ ರೋಹಿತ್, ಯೂಸುಫ್ ಪಠಾಣ್ ಮತ್ತು ಜೋಗಿಂದರ್ ಶರ್ಮರಂತಹ ಆಟಗಾರರು ಮುಂದೆ ಬಂದರು.
ಸಚಿನ್ ತೆಂಡೂಲ್ಕರ್ ಅವರು ಯಾವಾಗಲೂ ನನ್ನ ಮುಂದೆ, ನಾನು ಎಷ್ಟೋ ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ ಆದರೆ ಒಮ್ಮೆಯೂ ಈ ಕಪ್ ಗೆದ್ದಿಲ್ಲವೆಂದು ತಮ್ಮ ನೋವು ವ್ಯಕ್ತಮಾಡುತ್ತಿದ್ದರು. ಎಂದು ಲಾಲ್ಚಂದ್ ರಾಜಪೂತ್ ರು ಉಚ್ಚರಿಸಿದ್ದಾರೆ.

ಭಾರತದ ಟೀಮಿನ ಈ ಮೊದಲ ಟ್ವೆಂಟಿ ಪಂದ್ಯಾವಳಿ ಹಾಗೂ ಧೋನಿಯ ನಾಯಕತ್ವದಲ್ಲಿಯ ಸುಂದರ ಆಟವನ್ನು ಜನ ಈಗಲೂ ತುಂಬಾ ಸ್ಮರಿಸಿಕೊಳ್ಳುತ್ತಾರೆ.