ವಿಶ್ವದ ಮೊಟ್ಟ ಮೊದಲ ಚಿನ್ನದ ಹೋಟೆಲ್! ಒಂದು ದಿನದ ಬಾಡಿಗೆ ಎಷ್ಟಿದೆ ತಿಳಿದುಕೊಳ್ಳಿ!
ಹನೋಯ್:- ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಂಗಾರದ ಹೋಟೆಲ್ ವ್ಹಿಯೇತನಾಮ್ ದ ರಾಜಧಾನಿಯಾದ ಹನೋಯ್ ನಲ್ಲಿದೆ. ಈ ಹೋಟೆಲ್ ನ ಬಾಗಿಲು, ಟೇಬಲ್, ಕಿಟಕಿ, ನಳ, ವಾಶ್’ರೂಮ್ , ತಿನ್ನುವ ಪಾತ್ರೆಗಳು ಸಹ ಬಂಗಾರದ್ದಾಗಿವೆ. ಜುಲೈ 2 ರಂದು ಈ ಹೋಟೆಲ್ ನ ಶುಭಾರಂಭವಾಗಿದೆ.
ಈ ಹೋಟೆಲ್ ನ ಹೆಸರು ಡೋಲಸೇ ಹನೋಯ್ ಲೇಕ್ (Dolce Hanoi Golden Lake) ಇದೆ. ಈ ಹೋಟೆಲ್ ನ ಗೇಟ್ ನಿಂದ ಕಾಫಿ ಕುಡಿಯುವ ಕಪ್’ನ ವರೆಗೆ ಎಲ್ಲವೂ ಬಂಗಾರದಿಂದ ತಯಾರಿಸಲಾಗಿದೆ.

ಇದು ಒಂದು ಫೈವ್ ಸ್ಟಾರ್ ಹೋಟೆಲ್ ಆಗಿದೆ. ಇದರಲ್ಲಿ 25 ಮಹಡಿಗಳಿವೆ. ಈ ಹೋಟೆಲ್ ನಲ್ಲಿ 400 ರೂಮ್ ಗಳಿವೆ. ಹೋಟೆಲ್ ದ ಹೊರಗಡೆ ಗೋಡೆಯ ಮೇಲೆ ಸುಮಾರು 54 ಸಾವಿರ ಚದುರ ಫೀಟ್ ನಷ್ಟು ಗೋಲ್ಡ್ ಪ್ಲೇಟೆಡ್ ಟೈಲ್ಸ್ ಹಚ್ಚಲಾಗಿದೆ.

ಹೊಟೇಲ್ ನಲ್ಲಿ ಕೆಲಸ ಮಾಡುವ ಸ್ಟಾಫ್ ಡ್ರೆಸ್ ಕೂಡಾ ರೆಡ್ ಮತ್ತು ಗೋಲ್ಡನ್ ಇಡಲಾಗಿದೆ. ಹೋಟೆಲ್ ದ ಲಾಬಿಯಲ್ಲಿಯ ಪೀಠೋಪಕರಣ ಹಾಗೂ ಅಲಂಕಾರ ಕೂಡಾ ಬಂಗಾರದ ಕರಕುಶಲತೆಯಿಂದ ಮಾಡಲಾಗಿದೆ. ಸಂಪೂರ್ಣ ಹೋಟೆಲ್ ಬಂಗಾರದಿಂದ ತಯಾರಿಸಲಾಗಿದೆ ಎಂಬ ಭಾವನೆ ಮೂಡುವ ಸಲುವಾಗಿ ಈ ಪ್ರಕಾರ ಮಾಡಲಾಗಿದೆ.

ವಾಶ್’ರೂಮ್ ನಲ್ಲಿಯ ಬಾತಟಬ್, ಸಿಂಕ್, ಶಾವರ್ ನಿಂದ ಎಲ್ಲ ಪರಿಕರಗಳನ್ನು ಸಹ ಬಂಗಾರದಿಂದ ತಯಾರಿಸಲಾಗಿದೆ. ಬೆಡ್ ರೂಮ್ ನಲ್ಲಿ ಸಹ ಫರ್ನಿಚರ್ ಮತ್ತು ಅಲಂಕಾರಿಕ ವಸ್ತುಗಳ ಮೇಲೆ ಗೋಲ್ಡ್ ಪ್ಲೇಟಿಂಗ್ ಮಾಡಲಾಗಿದೆ.
ಟೆರೇಸ್ ಮೇಲೆ ಇನ್ಫಿನಿಟಿ ಪೂಲ್ ಇದೆ. ಇಲ್ಲಿಂದ ಹನೋಯ್ ಪಟ್ಟಣದ ಸುಂದರವಾದ ದೃಶ್ಯ ಕಾಣಿಸುವದು. ಇಲ್ಲಿಯ ಗೋಡೆಗಳಿಗೂ ಸಹ ಬಂಗಾರದ ಇಟ್ಟಿಗೆಗಳನ್ನು ಹಚ್ಚಲಾಗಿದೆ.

ಮೊದಲನೆಯ ದಿವಸದಂದೇ ಅತಿಥಿಗಳು ಹೋಟೆಲ್ ಕುರಿತು ಹೆಚ್ಚಿನ ಆಸಕ್ತಿ ತೋರಿಸಿದರು. ಈ ಹೋಟೆಲ್ ನಿರ್ಮಾಣದ ಕಾರ್ಯ 2009 ರಲ್ಲಿ ಪ್ರಾರಂಭ ಮಾಡಲಾಗಿತ್ತು. ಈ ಹೋಟೆಲ್ ಮೇಲಿನ ಮಹಡಿಯಲ್ಲಿ ಫ್ಲ್ಯಾಟ್ಸ್ ಸಹ ನಿರ್ಮಾಣ ಮಾಡಿಲಾಗಿದೆ. ಒಂದು ವೇಳೆ ಯಾರಿಗಾದರೂ ತಮಗೆ ಫ್ಲ್ಯಾಟ್ ತಗೆದುಕೊಳ್ಳುವ ಇಚ್ಛೆ ಇದ್ದರೆ ಅವರ ಇಲ್ಲಿ ಉಪಲಬ್ಧವಿವೆ.
ಈ ಹೋಟೆಲ್’ಗೆ ದಕ್ಷಿಣ-ಪೂರ್ವ ಏಷಿಯಾದ ಎಲ್ಲಕ್ಕಿಂತ ಲಗ್ಝರಿ ಹೋಟೆಲ್’ದ ಪುರಸ್ಕಾರ ಸಹಿತ ಕೊಡಲಾಗಿದೆ. ಹೋಆ ಬಿನ್ ಗ್ರೂಪ್ ಮತ್ತು ವಿನ್’ಧಮ್ ಗ್ರೂಪ್ ಸೇರಿಕೊಂಡು ಈ ಹೋಟೆಲ್ ನಿರ್ಮಿಸಿದ್ದಾರೆ. ಎರಡು ಕಂಪನಿಗಳು ಒಟ್ಟಿಗೆ ಕೂಡಿಕೊಂಡು 2 ಸೂಪರ್ 6 ಸ್ಟಾರ್ ಹೋಟೆಲ್‌ಗಳ ಕಾರ್ಯ ನಿರ್ವಹಿಸುತ್ತಿವೆ.

ಬಂಗಾರವು ಮಾನಸಿಕ ಒತ್ತಡವನ್ನು ದೂರ ಮಾಡಲು ಸಹಾಯ ಮಾಡುತ್ತದೆ. ಅದರಿಂದ ನೀವು ರಿಲ್ಯಾಕ್ಸ್ ಕೂಡಾ ಆಗಬಹುದು. ಈ ಒಂದು ಕಾರಣದಿಂದ ಹೋಟೆಲ್ ವ್ಯವಸ್ಥಾಪನೆಯು ಬಂಗಾರದ ಪ್ಲೇಟಿಂಗ್ ಗಳ ಹೆಚ್ಚು ಉಪಯೋಗ ಮಾಡಿದ್ದಾರೆ.
ಡಬಲ್ ಬೆಡ್‌ರೂಮ್ ಸೂಟ್‌ನಲ್ಲಿ ಒಂದು ರಾತ್ರಿ ತಂಗಲು ಬಾಡಿಗೆ ಸುಮಾರು 75,000 ರೂ ಇದೆ. ಈ ಹೋಟೆಲ್ ಕೋಣೆಯ ಬಾಡಿಗೆಯ ಆರಂಭಿಕ ಬೆಲೆ ಸುಮಾರು 20,000 ರೂ.ಇದೆ.
ಇದರಲ್ಲಿ 6 ಪ್ರಕಾರದ ರೂಮ್ಸ್’ಗಳಿವೆ. ಜೊತೆಗೆ 6 ಪ್ರಕಾರದ ರಿಯಾಯಿತಿ ಕೂಡಾ ಇದೆ. ಪ್ರೆಸಿಡೆನ್ಸಿಯಲ್ ಸೂಟ್’ನ ಬೆಲೆ ಪ್ರತಿ ರಾತ್ರಿಗೆ 4.85 ಲಕ್ಷ ರೂಪಾಯಿ ಇದೆ.

ಈ ಹೋಟೆಲ್ ನಲ್ಲಿ ಗೆಮಿಂಗ್ ಕ್ಲಬ್ ಕೂಡಾ ಇದೆ, ಅದು ದಿನದ 24 ಗಂಟೆಗಳ ಕಾಲ ತೆರೆದಿರುತ್ತದೆ. ಇಲ್ಲಿ ಕಸಿನೋ ಮತ್ತು ಪೋಕರ್ ನಂತಹ ಆಟಗಳಿವೆ. ಅದರಲ್ಲಿ ನೀವು ಗೆದ್ದು ಹಣವು ಸಹ ಗಳಿಸಬಹುದು.