ಮದುವೆಯ 12 ವರ್ಷಗಳ ನಂತರ ಸತ್ಯ ಬಿಚ್ಚಿಟ್ಟ ಶೋಎಬ್ ಮಲಿಕ್! ಈ ಕಾರಣದಿಂದ ಸಾನಿಯಾ ಜೊತೆ ಮದುವೆಯಾದರಂತೆ…
ಭಾರತದ ಸ್ಟಾರ್ ಆಟಗಾರರಾದ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟ್ ಪಟು ಶೋಯಬ್ ಮಲಿಕ್ ಅವರೊಂದಿಗೆ 2008 ರಲ್ಲಿ ವಿವಾಹವಾಗಿದ್ದರು. ಇಬ್ಬರ ಮದುವೆಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ಬಹಳಷ್ಟು ಚರ್ಚೆ ಉಂಟಾಗಿತ್ತು. ಆದರೆ ಒಬ್ಬರಿಗೊಬ್ಬರು ತುಂಬಾ ಪ್ರೀತಿ ಮಾಡುತ್ತಿದ್ದರು.
ಇಂತಹ ಪರಸ್ಥಿತಿಯಲ್ಲಿ ಮದುವೆಯಾದ 12 ವರ್ಷಗಳ ನಂತರ ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಮದುವೆಯಾದ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಹೌದು ಮೊದಲ ಬಾರಿಗೆ ಅವರಿಬ್ಬರ ಮದುವೆಯ ಕುರಿತು ದೊಡ್ಡ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾರೆ. ಅದರಲ್ಲಿ ಸಾನಿಯಾ ಮಿರ್ಜಾ ಅವರನ್ನು ತುಂಬಾ ಪ್ರೀತಿಸುತ್ತಿದ್ದರು ಎಂಬುದು ಒಪ್ಪಿಕೊಂಡಿದ್ದಾರೆ.
ಟೆನಿಸ್ ಪಟು ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರು ಒಬ್ಬರಿಗೊಬ್ಬರು ಡೇಟ್ ಮಾಡಿದ ನಂತರವೇ ಮದುವೆ ಮಾಡಿಕೊಳ್ಳುವ ನಿರ್ಣಯ ತಗೆದುಕೊಂಡಿದ್ದಾರೆ. ಹೈದ್ರಾಬಾದ್ ನ ತಾಜ್ ಕೃಷ್ಣ ಹೋಟೆಲ್ ನಲ್ಲಿ ಇಬ್ಬರ ಮದುವೆಯಾಗಿತ್ತು. ಅಲ್ಲಿ ಒಂದು ದೊಡ್ಡ ಕಾರ್ಯಕ್ರಮವೇ ನಡೆಸಿದ್ದರು.

ಆದರೂ ಸಹ ಮದುವೆಯ ನಂತರ ಶೋಯಬ್ ಮತ್ತು ಸಾನಿಯಾ ಮಿರ್ಜಾ ಇಬ್ಬರೂ ಜೊತೆಗೂಡಿ ಬಹಳಷ್ಟು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಏಕೆಂದರೆ, ಇಬ್ಬರು ಸಹ ತಮ್ಮ ವೃತ್ತಿಯಲ್ಲಿ ತುಂಬಾ ನಿರತರಾಗಿದ್ದರು. ಇಂದು ನಾವು ಶೋಯಬ್ ಮಲಿಕ್ ಅವರು ಸಾನಿಯಾ ಮಿರ್ಜಾ ಅವರೊಂದಿಗೆ ಮದುವೆಯಾದ ಕಾರಣವನ್ನು ಬಹಿರಂಗದ ಕುರಿತು ನಾವು ಮಾಹಿತಿ ತಿಳಿಸುವವರಿದ್ದೇವೆ.
‘ಮದುವೆಯ ಸಲುವಾಗಿ ಕೇವಲ ಪ್ರೀತಿಯೇ ಮುಖ್ಯವಾಗಿರುತ್ತದೆ” – ಶೋಯಬ್ ಮಲಿಕ್.
ಪಾಕಿಸ್ತಾನ ಕ್ರಿಕೆಟ್ ಆಟಗಾರರಾದ ಶೋಯೇಬ್ ಮಲಿಕ್ ಅವರು ಒಂದು ಸಂದರ್ಶನದಲ್ಲಿ ‘”ಸಾನಿಯಾ ಅವರೊಂದಿಗೆ ಮದುವೆಯಾಗುವ ಸಮಯದಲ್ಲಿ ನಾನು ಸ್ವಲ್ಪವೂ ಹೆದರಲಿಲ್ಲ, ಏಕೆಂದರೆ ನಮ್ಮಿಬ್ಬರ ನಡುವೆ ತುಂಬಾ ಪ್ರೀತಿ ಇತ್ತು. ಮದುವೆಯ ಸಲುವಾಗಿ ರಾಷ್ಟ್ರೀಯತ್ವದ ಅವಶ್ಯಕತೆ ಇರದೆ ಕೇವಲ ಪ್ರೀತಿಯ ಅವಶ್ಯಕತೆ ಇರುತ್ತದೆ” ಎಂದು ಶೋಯಬ್ ಅವರು ಹೇಳಿದ್ದಾರೆ.
ಅವರ ಹೇಳಿದ ಮೇಲೆ ಅರ್ಥವಾಗುವದೇನೆಂದರೆ, ಅವರಿಬ್ಬರ ನಡುವೆ ಎಷ್ಟೊಂದು ಪ್ರೀತಿ ಇತ್ತೆಂದರೆ ಅವರ ಪ್ರೀತಿಗೆ ಎರಡು ದೇಶಗಳ ನಡುವಿನ ಬಿಗುವಿನ ಗಡಿ ಸಹ ಯಾವುದೇ ತೊಂದರೆ ನೀಡಲು ಸಾಧ್ಯವಾಗಲಿಲ್ಲ. ಸಾನಿಯಾ ಅವರು ಶೋಯಬ್ ಅವರೊಂದಿಗೆ ವಿವಾಹವಾದ ನಂತರ ಅದಕ್ಕೆ ಜನರು ತುಂಬಾ ವಿರೋಧ ವ್ಯಕ್ತ ಪಡಿಸಿದ್ದರು. ಅನೇಕ ಸಲ ಸಾನಿಯಾ ಟ್ರೋಲಿಂಗ್ ಸಹ ಎದುರಿಸಬೇಕಾಯಿತು.

ಶೋಯಬ್ ಮಲಿಕ್ ಅವರು ತಮ್ಮ ಸಂದರ್ಶನದಲ್ಲಿ ಮುಂದೆ ಹೇಳಿದ್ದಾರೆ, ಮದುವೆಯಲ್ಲಿ ನಿಮ್ಮ ಜೊತೆಗಾರ್ತಿ ಯಾರು ಎಲ್ಲಿಂದ ಇದ್ದಾರೆ ಎಂಬುದರ ಕುರಿತು ವಿಚಾರ ಮಾಡಬೇಡಿ ಅಥವಾ ದೇಶದಲ್ಲಿ ಅಥವಾ ರಾಜಕಾರಣದಲ್ಲಿ ಏನು ನಡೆದಿದೆ ಎಂಬುದರ ಕರಿತು ತಲೆ ಕೆಡಿಸಕೊಳ್ಳಬೇಡಿ.
ಹಾಗೆ ಮುಂದೆ, ನೀವು ಒಂದು ವ್ಯಕ್ತಿಯ ಮೇಲೆ ತುಂಬಾ ಪ್ರೀತಿ ಮಾಡುತ್ತಿದ್ದರೆ, ಅವರೊಂದಿಗೆ ನೀವು ಮದುವೆ ಆಗಲೇ ಬೇಕು, ಅವರು ಯಾವ ದೇಶದ ಅಥವಾ ಯಾವ ಸ್ಥಳದವರು ಇದ್ದಾರೆ ಎಂಬುದರ ಕುರಿತು ವಿಚಾರ ಮಾಡಬೇಡಿ. ಒಟ್ಟಿನಲ್ಲಿ ಮದುವೆಗೆ ಪ್ರೀತಿಯು ಮುಖ್ಯವಾಗಿದೆ, ಅದು ನನ್ನ ಮತ್ತು ಸಾನಿಯಾ ಅವರ ನಡುವೆ ಇತ್ತು ಎಂದು ತಿಳಿಸಿದ್ದಾರೆ.
ಸಾನಿಯಾ ಮಿರ್ಜಾ ಅವರು ಮದುವೆಯಾಗಿ 10 ವರ್ಷಗಳ ನಂತರ ತಾಯಿಯಾದರು:- ಮದುವೆಯ ಹತ್ತು ವರ್ಷಗಳ ನಂತರ ಅಂದರೆ 2018 ರಲ್ಲಿ ಸಾನಿಯಾ ಮಿರ್ಜಾ ಅವರು ಒಂದು ಮಗುವಿಗೆ ಜನ್ಮ ನೀಡಿದರು. ಆ ಮಗುವಿನ ಮೇಲೆ ಇಬ್ಬರದು ತುಂಬಾ ಪ್ರೀತಿ ಇದೆ. ಸದ್ಯಕ್ಕೆ ಶೋಯಬ್ ಮಲಿಕ್ ಕೋರೊನಾ ವೈರಸ್ ನಿಂದ ಪಾಕಿಸ್ತಾನದ ಬೇರೆ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ. ಸಾನಿಯಾ ಅವರು ಇನ್ನೊಂದು ಭಾಗದಲ್ಲಿದ್ದಾರೆ.

ಹಾಗಾಗಿ ಶೋಯಬ್ ಅವರು ತಮ್ಮ ಪತ್ನಿ ಮತ್ತು ಮಗನನ್ನು ಭೇಟಿಯಾಗಲು ತುಂಬಾ ಹಾತೊರೆಯುತ್ತಿದ್ದಾರೆ. ಸಾನಿಯಾ ಮಿರ್ಜಾ ಅವರು ಒಂದು ಮಗುವಿಗೆ ಜನ್ಮ ನೀಡಿದ ನಂತರ ತಮ್ಮ ವೃತ್ತಿಗೆ ಬ್ರೇಕ್ ತಗೆದುಕೊಂಡಿದ್ದರು, ಆದರೆ ಡಬ್ಲ್ಯೂಟಿಎ ಹೊಬಾರ್ಟ್ ಅಂತರರಾಷ್ಟ್ರೀಯ ಎರಡನೇಯ ಚಾಂಪಿಯನ್’ಶಿಪ್ ಆಗಿ ಈ ವರ್ಷದ ಪ್ರಾರಂಭದಲ್ಲಿ ಉತ್ತಮವಾದ ಪುನರಾಗಮನ ಮಾಡಿದ್ದಾರೆ.
ನಾವು ಶೋಯಬ್ ಮಲಿಕ್ ಅವರ ವೃತ್ತಿಜೀವನದ ಬಗ್ಗೆ ಹೇಳುವದಾದರೆ, ಅವರು ಪಾಕಿಸ್ತಾನ ತಂಡದ ಪರವಾಗಿ ಇದುವರೆಗೂ ಹಲವಾರು ಪಂದ್ಯಗಳಲ್ಲಿ ಆಡಿದ್ದಾರೆ, ಅಲ್ಲದೆ ಸದ್ಯಕ್ಕೆ ಏಕದಿನ ಮತ್ತು ಟೆಸ್ಟ್ ಪಂದ್ಯಗಳಿಂದ ನಿವೃತ್ತಿ ತಗೆದುಕೊಂಡಿದ್ದರೂ ಸಹ ಅವರು ಟಿ-20 ಆಡುವದನ್ನು ಕಾಣಬಹುದು. ಅಂದಹಾಗೆ ಅವರು ಮುಂಬರುವ ಟಿ-20 ಪಂದ್ಯದ ಸಲುವಾಗಿ ತುಂಬಾ ಉತ್ಸುಕರಾಗಿದ್ದಾರೆ.