M S ಧೋನಿಯ ಫಾರ್ಮ್ ಹೌಸಿನ ಸುಂದರ ದೃಶ್ಯಗಳನ್ನೊಮ್ಮೆ ನೋಡಿ, 7 ಎಕರೆ ತೋಟದಲ್ಲಿ ಕಟ್ಟಲಾಗಿದೆ ಕನಸಿನ ಮಹಲು!
ಕೊರೊನಾದ ಈ ಸಂಕಟ ಸಮಯದಲ್ಲಿ ಎಲ್ಲ ಸೆಲಿಬ್ರಿಟಿಗಳು ಹೆಚ್ಚಾಗಿ ತಮ್ಮ ಫಾರ್ಮ್ ಹೌಸಗಳ ಮೊರೆ ಹೋಗಿದ್ದಾರೆ. ಹಾಗೆ ಧೋನಿಯವರು ಸಹಿತ ತಮ್ಮ ಕುಟುಂಬ ಸಮೇತ ಅಲ್ಲಿಯೇ ಇದ್ದರು. ರಾಂಚಿಯಲ್ಲಿ ಧೋನಿಯ 7 ಎಕರೆ ಪರಿಸರದಲ್ಲಿ ಸುಂದರವಾದ ಫಾರ್ಮ್ ಹೌಸ್ ವ್ಯಾಪಿಸಿದೆ.

ಈ ಫಾರ್ಮ್ ಹೌಸಿನ ಹೆಸರು ಕೈಲಾಶ್ ಪತಿ ಇದೆ. ಮಾಹಿ ಮತ್ತು ಸಾಕ್ಷಿ ಇವರಿಬ್ಬರ ಮದುವೆಗೆ 10 ವರ್ಷಗಳು ಪೂರ್ಣವಾದವು. ಇದೆ ಸಂದರ್ಭದಲ್ಲಿ ಅವರ ಫಾರ್ಮ್ ಹೌಸಿನ ಅಂತರಂಗದ ಫೋಟೋಗಳು ವೈರಲ್ ಆಗಿವೆ ನೋಡೋಣ ಹೇಗಿವೆ ಅಂತ.

ಕೈಲಾಶ್ ಪತಿ ಹೆಸರಿನ ಮಾಹಿಯ ಈ ಫಾರ್ಮ್ ಹೌಸ್ ತುಂಬಾ ಸುಂದರವಾಗಿ ಹಾಗೂ ಆಲಿಶಾನ್ ಆಗಿದೆ. ಧೋನಿಯವರು ನೈಸರ್ಗಿಕವಾದ ಸೌಂದರ್ಯಕ್ಕೆ ತುಂಬಾ ಮಹತ್ವ ಕೊಟ್ಟಿದ್ದಾರೆ. ಟೀಮ್ ಇಂಡಿಯಾದ ಅನೇಕ ಆಟಗಾರರು ಇಲ್ಲಿಗೆ ಬಂದಾಗ ಅವರು ಸಹ ಇಲ್ಲಿಯ ನೈಸರ್ಗಿಕ ಸೌಂದರ್ಯದ ಆಸ್ವಾದವನ್ನು ತೆಗೆದುಕೊಳ್ಳುತ್ತಾರೆ.

ಯಾವ ಊರಿನಲ್ಲಿ ಧೋನಿ ಚಿಕ್ಕವರಿಂದ ಹಿಡಿದು ದೊಡ್ಡವರಾದರೊ ಅದೇ ಊರಲ್ಲಿ ಧೋನಿ ಕ್ರಿಕೆಟ್ ಲೀಜೇಂಡ್ ಆಗಿದ್ದಾರೆ. ಅಲ್ಲಿಯೇ ಸುಂದರವಾದ ಈ ಫಾರ್ಮ್ ಹೌಸ್ ತಯಾರಿಸಿದ್ದಾರೆ. ಈ ಫಾರ್ಮ್ ಹೌಸ್ ರಾಂಚಿಯ ರಿಂಗ್ ರೋಡ್ ನಲ್ಲಿದೆ.

ಈ ಭವ್ಯ ಫಾರ್ಮ್ ಹೌಸ್ ತಯಾರಿಸಲು 3 ವರ್ಷಗಳ ಕಾಲ ಬೇಕಾಯಿತು. ಗಿಡ ಮರಗಳ ಬಗ್ಗೆ ಇದ್ದ ಮಾಹಿಯ ಪ್ರೇಮ ಎಷ್ಟು ಎಂಬುದನ್ನು ನಾವಿಲ್ಲಿ ಕಾಣಬಹುದು. ಈ ಫಾರ್ಮ್ ಹೌಸ್ ನಲ್ಲಿ ಎಲ್ಲವೂ ಭವ್ಯ ಮತ್ತು ದಿವ್ಯವಾಗಿವೆ.

ಇಲ್ಲಿ ಇನ್ ಡೋರ್ ಸ್ಟೇಡಿಯಂ, ಸ್ವಿಮಿಂಗ್ ಪೂಲ್, ಪ್ರ್ಯಾಕ್ಟೀಸ್ ಸಲುವಾಗಿ ನೆಟ್ ಗ್ರೌಂಡ್ ಜೊತೆಗೆ ಆಧುನಿಕ ಜಿಮ್ ಸೌಲಭ್ಯವಿದೆ. ಈ ಫಾರ್ಮ್ ಹೌಸ್ ಧೋನಿಯ ಮೊದಲಿನ ಮನೆಯಿಂದ ಬರೀ 20 ನಿಮಿಷಗಳ ಅಂತರದಲ್ಲಿದೆ.

ಧೋನಿಯ ಕ್ರಿಕೆಟ್ ನಲ್ಲಿಯ ಕರಿಯರ್ ಶಿಖರಕ್ಕೇರಿದಾಗ ಮೊದಲಿನ ಮನೆಯಿಂದ ಹೊಸದಾದ ಮನೆಗೆ 2009 ರಲ್ಲಿ ಹರಮು ರೋಡ್ ನಲ್ಲಿ ಮೂರು ಅಂತಸ್ತಿನ ಮನೆಯನ್ನು ಖರೀದಿಸಿದರು. ಈ ಮನೆಯಲ್ಲಿ 8 ವರ್ಷಗಳವರೆಗೆ ವಾಸ್ತವ್ಯ ಮಾಡಿ 2017 ರಲ್ಲಿ ಕೈಲಾಶ್ ಪತಿ ಹೆಸರಿನ ಈ ಫಾರ್ಮ್ ಹೌಸ್ ನಲ್ಲಿ ಶಿಫ್ಟ್ ಆಗಿದ್ದಾರೆ.

ಮಾಹಿ ಈ ಫಾರ್ಮ್ ಹೌಸ್ ನಲ್ಲಿ ಬೇರೆ ಬೇರೆ ಪ್ರಕಾರದ ಗಿಡಗಳನ್ನು ನೆಟ್ಟಿದ್ದಾರೆ. ಅದರ ಜೊತೆಗೆ ಇಲ್ಲಿ ಕಟ್ಟಿಗೆ ಮತ್ತು ಮಾರ್ಬಲ್ ಗಳ ಉಪಯೋಗ ತುಂಬಾ ಸುಂದರವಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ ಧೋನಿ ಸಲುವಾಗಿ ವಿಶೇಷವಾದ ಪಾರ್ಕಿಂಗ್ ಸೌಲಭ್ಯವನ್ನು ಮಾಡಿದ್ದಾರೆ.

ಇಲ್ಲಿ ಒಂದು ಸುಂದರವಾದ ಕೈತೋಟವನ್ನು ಸಹಿತ ನಿರ್ಮಾಣ ಮಾಡಿದ್ದಾರೆ. ಧೋನಿ ತನ್ನ ಶ್ವಾನಕ್ಕೆ ಇಲ್ಲಿಯೇ ಟ್ರೇನಿಂಗ್ ನೀಡುತ್ತಾರೆ.

ಧೋನಿಯವರು ತಮ್ಮ ಮೊದಲಿನ ದಿನಗಳನ್ನು ಒಂದು ಚಿಕ್ಕದಾದ ಮನೆಯಲ್ಲಿ ಕಳೆದಿದ್ದಾರೆ. ಇಂದು ಜಗತ್ತಿನ ಅತ್ಯಂತ ಶ್ರೀಮಂತ ಆಟಗಾರರಲ್ಲಿ ಅವರ ಎಣಿಕೆಯಾಗುತ್ತದೆ. ಇಷ್ಟೆಲ್ಲವನ್ನು ಪಡೆಯಲಿಕ್ಕೆ ನಮ್ಮೆಲ್ಲರ ಪ್ರೀತಿಯ ಮಾಹಿ ದೊಡ್ಡ ಪ್ರವಾಸವನ್ನೇ ಮಾಡಿದ್ದಾರೆ.