TikTok ಗೆ ಸೆಡ್ಡು ಹೊಡೆಯಲು ಬಂದಿದೆ ಭಾರತೀಯ App; ಜೊತೆಗೆ ಹಣವೂ ಗಳಿಸಬಹುದು!
ನವ ದೆಹಲಿ:- ಭಾರತದಲ್ಲಿ ಶಾರ್ಟ್ ವಿಡಿಯೋ ಶೆಯರಿಂಗ್ ಆಪ್ ಟಿಕ್ ಟಾಕ್ ನ ಬಹಳಷ್ಟು ಯೂಜರ್ಸ್ ಗಳಿದ್ದರು. ಇತ್ತೀಚೆಗೆ ಈ ಆಪ್ ನ್ನು ಸರಕಾರ ಬ್ಯಾನ್ ಮಾಡಿದೆ. ಸರಕಾರವು 59 ಚೀನಾ ಆಪ್ ಗಳನ್ನು ಬ್ಯಾನ್ ಮಾಡುವ ನಿರ್ಣಯ ತಗೆದುಕೊಂಡಿದೆ. ಅದರಲ್ಲಿ ಎಲ್ಲಕ್ಕಿಂತ ಹೆಚ್ಚು ಚರ್ಚೆಯಲ್ಲಿದ್ದ ಅಪ್ ಟಿಕ್ ಟಾಕ್ ಆಗಿತ್ತು. ಚೀನಾ ಅಪ್ ಬ್ಯಾನ್ ಆದ ಮೇಲೆ ದೇಶಿ ಆಪ್ ಚಿಂಗಾರಿ ಭಾರತೀಯರ ಸ್ಮಾರ್ಟ್ ಫೋನ್ ಗಳಲ್ಲಿ ತನ್ನ ಸ್ಥಾನವನ್ನು ನಿಶ್ಚಿತವಾಗಿ ಪಡೆದುಕೊಳ್ಳುತ್ತಿದೆ.
ಟಿಕ್ ಟಾಕ್ ನ ಹಾಗೆ ಶಾರ್ಟ್ ವಿಡಿಯೋ ಪ್ಲೇಟ್ ಫಾರ್ಮ್ ಚಿಂಗಾರಿ ಆಪ್ ನಲ್ಲಿ ಸಹ ಕ್ರಿಯೇಟರ್ಸ್ ತಮ್ಮ ಟ್ಯಾಲೆಂಟ್ ಮುಖಾಂತರ ಹಣವನ್ನು ಗಳಿಸಬಹುದು. ಈ ಆಪ್ ಡೆವಲೇಪರ್ಸ್ ಅವರ ಹೇಳಿಕೆಯ ಪ್ರಕಾರ, ಇದರಲ್ಲಿ ಮ್ಯೂಜಿಕ್ ಕ್ರಿಯೇಟರ್ಸ್ ಗಳಿಗೆ ಅವರ ಹಾಡುಗಳ ವ್ಯಾಪ್ತಿ ಅಥವಾ ಹಿಟ್ಗಳ ಆಧಾರದ ಮೇಲೆ ಹಣವನ್ನು ಪಾವತಿಸಲಾಗುವದು.

ಅಷ್ಟೇ ಅಲ್ಲ, ಚಿಂಗಾರಿ ಮ್ಯೂಜಿಕ್ ಕಂಪೋಜರ್ಸ್ ಗಳ ಹಿಟ್ ಹಾಡುಗಳ ಸಲುವಾಗಿ ರೆವೆನ್ಯೂ ಶೇರಿಂಗ ಸಹ ಮಾಡಲಾಗುವದು.
ಪ್ಲೇಟ್ ಫಾರ್ಮ್ ಗಳಿಂದ ಗಳಿಸುವ ಅವಕಾಶ.
ಚಿಂಗಾರಿ ಆಪ್ ನ ಫೌಂಡರ್ ಮತ್ತು ಚೀಫ್ ಪ್ರೊಡಕ್ಟ್ ಆಫೀಸರ್ ಹೇಳಿದ್ದೇನೆಂದರೆ,’ ದೇಶಿ ಕಂಟೆಂಟ್ ಮಾಡುವವರ ಸಲುವಾಗಿ ಚಿಂಗಾರಿ ಆಪ್ ಮೊದಲೇ ಒಂದು ಹಾಟ್ಸ್ಪಾಟ್ ಸ್ವರೂಪದಲ್ಲಿ ನಿಂತಿದೆ. ಇದನ್ನು ಗಮನಿಸಿ, ನಾವು ಸಂಗೀತ ಸಂಯೋಜಕರಿಗೆ ಈ ವೇದಿಕೆಯನ್ನು ಸಹ ನೀಡುತ್ತಿದ್ದೇವೆ.16 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಚಿಂಗಾರಿ ಆಪ್ ಪ್ರತಿಭಾವಂತ ಸಂಗೀತ ಸಂಯೋಜಕರಿಗೆ ಉತ್ತಮ ವ್ಯಾಪ್ತಿಯನ್ನು ನೀಡುತ್ತದೆ. ನಮ್ಮ ದೇಶದ ಪ್ರತಿಭೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಆ ಆಪ್ ನಲ್ಲಿ ಶೀಘ್ರದಲ್ಲೇ ಡ್ಯಾನ್ಸ್ ಮತ್ತು ಇತರ ಪ್ರತಿಭೆಗಳ ಮೂಲಕ ಉಪಯೋಗಕರ್ತರಿಗೆ ತಮ್ಮ ವೇದಿಕೆಯಿಂದ ಹಣಗಳಿಸುವ ಅವಕಾಶ ನೀಡುವದಿದೆ. ಆದರೆ ಕಂಟೇಟ್ ಮೇಲೆ ತುಂಬಾ ಲಕ್ಷ ಕೊಡಲಾಗುವದು. ಟಿಕ್ ಟಾಕ್ ನಲ್ಲಿ ಅನೇಕ ಕ್ರಿಯೇಟರ್ಸ್ ತಮ್ಮ ಟ್ಯಾಲೆಂಟ್ ಶೋ ಮಾಡಿ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದರು. ಈ ಅಪ್ ಡೆವಲಪರ್ಸ್ ಹೊಸ ಯು ಎಕ್ಸ್ ಜಾಹೀರು ಮಾಡಲಾಗಿದೆ. ಇದು ಮುಂದಿನ ವಾರದಲ್ಲಿ ಲೈವ್ ನಲ್ಲಿ ಬರುವದು. ಚಿಂಗಾರಿ ಆಪ್ ನ ಯುಎಕ್ಸ್’ನ್ನು ಸಂಪೂರ್ಣವಾಗಿ ನವೀಕರಣ ಮಾಡಲಾಗುತ್ತದೆ ಮತ್ತು ಇದಕ್ಕೆ ಇನ್ನಷ್ಟು ಹೆಚ್ಚು ಯೂಜರ್ಸ್ ಫ್ರೆಂಡಲಿ ಮಾಡುತ್ತದೆ.
ಗೂಗಲ್ ಪ್ಲೇ ಸ್ಟೋರ್ ನಲ್ಲಿ ಚಿಂಗಾರಿ ಆಪ್ ಟಾಪ್ – 3 ನಲ್ಲಿದೆ.
ಕಂಪೆನಿಯವರ ಹೇಳಿಕೆಯ ಪ್ರಕಾರ, ಸದ್ಯದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಟಾಪ್ 3 ಫ್ರೀ ಆಪ್ ನಲ್ಲಿ ಒಂದಾಗಿದೆ. ಆ ಅಪ್ ಕೇವಲ 25 ದಿನಗಳಲ್ಲಿ 16 ಮಿಲಿಯನ್ ಕ್ಕಿಂತ ಹೆಚ್ಚು ಹೊಸ ಯುಜರ್ಸ್ ಮಾಡಕೊಂಡಿದೆ.
ಚಿಂಗಾರಿ ಆಪ್ ನ ಕೋ-ಫೌಂಡರ್ ಬಿಸ್ವಾಮಾತಾ ನಾಯಕ ಅವರು ಹೇಳಿದ್ದಾರೆ, ‘ಈ ಸಮಯದಲ್ಲಿ ಪ್ರತಿ ಗಂಟೆಗೆ ಸುಮಾರು 3 ಲಕ್ಷ ಹೊಸ ಬಳಕೆದಾರರನ್ನು ಸೇರಿಕೆ ಯಾಗುತ್ತಿದ್ದಾರೆ. ಅದರ ಜೊತೆಗೆ ಪ್ರತಿ ಒಂದು ಗಂಟೆಗೆ 2.2 ಮಿಲಿಯನ್ ವಿಡಿಯೋ ಸ್ವೈಫ್/ವಿವ್ಹ ರೆಕಾರ್ಡ್ ಮಾಡುತ್ತಿದ್ದಾರೆ.
ಇಡೀ ಚಿಂಗಾರಿ ಟೀಮ್ ದಿನದ 24 ಗಂಟೆ ಹಗಲು ರಾತ್ರಿ ಯನ್ನದೆ ಸತತವಾಗಿ ಪರಿಶ್ರಮ ಪಡುತ್ತಿದ್ದಾರೆ. ಹೆಚ್ಚುತ್ತಿರುವ ಯೂಜರ್ಸ್ ಗಳ ಹೊಂದಾಣಿಕೆ ಹಾಗೂ ಅವರಿಗೆ ಸರಳವಾಗಿ ಅನುಭವವನ್ನು ಪ್ರದಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಬೀಜನೆಸ್ ಮ್ಯಾನ್ ಆನಂದ ಮಹಿಂದ್ರಾ ರಂತಹ ಅನೇಕ ವ್ಯಕ್ತಿಗಳು ಇದಕ್ಕೆ ಸಪೋರ್ಟ್ ಮಾಡಿದ್ದಾರೆ ಮತ್ತು ಈ ಆಪ್ ಜೊತೆಗೂಡಿದ್ದಾರೆ.
ಯುಜರ್ಸ್ ಗಳ ಹೆಚ್ಚಿನ ಡಿಮಾಂಡ್ ಗಮನದಲ್ಲಿಟ್ಟುಕೊಂಡು ಈ ಅಪ್ ನ್ನು ನಿರಂತರವಾಗಿ ಅಪ್ಡೇಟ್ ಮಾಡಲಾಗುತ್ತಿದೆ. ಆದಷ್ಟು ಬೇಗ ಈ ಕಂಪನಿ ನಾಲ್ಕು ಪಟ್ಟು ಹಾಯರಿಂಗ್ ಮಾಡಿಕೊಳ್ಳಲಿದೆ.
ಚಿಂಗಾರಿ ಆಪ್ ಗೆ ಹಲವಾರು ಕಂಪನಿಗಳಿಂದ ಧನಸಹಾಯ ಮತ್ತು ಹೂಡಿಕೆದಾರರ ಆಫರ್ ಸಹ ದೊರಕಿದೆ.
ಆಂಡ್ರಾಯ್ಡ್ ಮತ್ತು ಐಓಎಸ್ ಯೂಜರ್ಸ್ ಗಳಿಗೆ ಈ ಅಪ್ ಫ್ರೀ ಇದೆ.
ಚಿಂಗಾರಿ ಯುಜರ್ಸ್ ಗಳಿಗೆ ತಮ್ಮ ವಿಡಿಯೋಗಳ ಸಲುವಾಗಿ ಪಾಯಿಂಟ್ಸ್(ಪ್ರತಿ ವೀಕ್ಷಣೆ) ದೊರಕುತ್ತದೆ. ಇವುಗಳನ್ನು ನಂತರ ತಮ್ಮ ಹಣದಲ್ಲಿ ರಿಡೀಮ್ ಮಾಡಲಾಗುತ್ತದೆ. ಸಮಾಚಾರ ಫೀಡ್ ಫ್ಯಾಶನ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡುವದು ಮತ್ತು ಕಂಟೇಟ್ ಸರ್ಚ್ ಮಾಡುವ ಹೊರತಾಗಿ ಯೂಜರ್ಸ್ ಗಳಿಗೆ ಹೊಸ ಜನರೊಂದಿಗೆ ಮಾತುಕತೆ ಮತ್ತು ಅವರ ಜೊತೆಗೆ ಕಂಟೆಂಟ್ ಶೇರ್ ಮಾಡಲು ಅನುಮತಿ ನೀಡುತ್ತದೆ. ಆಪ್ ಟ್ರೆಂಡಿಂಗ್ ನ್ಯೂಜ, ಎಂಟರ್ಟೇನ್ಮೆಂಟ್ ನ್ಯೂಜ, ಲವ್ ಕೋಟ್ಸ್ ಮತ್ತು ಇನ್ನು ಹಲವಾರು ಪ್ರಕಾರದ ಮಾಹಿತಿ ಪ್ರದಾನ ಮಾಡುತ್ತದೆ.
ಚಿಂಗಾರಿ ಅಪ್ ನ ಇಂಟರ್ ಫೇಸ್ ಟಿಕ್ ಟಾಕ್ ತರಹವೇ ಇದೆ. ಆದರೆ ಅದರಲ್ಲಿ ಸುಧಾರಣೆ ಮಾಡುವದು ಅವಶ್ಯಕ ವಾಗಿದೆ. ಈ ಅಪ್ ನಲ್ಲಿ 10 ಭಾಷೆಗಳಲ್ಲಿ ಸಪೋರ್ಟ್ ದೊರೆಯುತ್ತದೆ. ಅವುಗಳಲ್ಲಿ ಇಂಗ್ಲಿಷ್, ಹಿಂದಿ, ಬಂಗಾಲಿ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳ್ ಮತ್ತು ತೆಲಗು ಭಾಷೆ ಸಮಾವೇಶ ವಾಗಿವೆ. ಈ ಆಪ್ ಆಪ್ ಆಂಡ್ರಾಯ್ಡ್ ಮಟ್ಟಿ ಐಓಎಸ್ ಯೂಜರ್ಸ್ ಗಳಿಗೆ ಫ್ರೀ ನಲ್ಲಿ ದೊರೆಯುತ್ತದೆ.