ಚೀನಾದೊಂದಿದೆ ಯುದ್ಧವಾದರೆ ಅಮೆರಿಕೆಯ ಸೈನ್ಯ ಭಾರತದ ಪರ ಹೋರಾಡುವುದು! ವೈಟ್ ಹೌಸ್ ಘೋಷಣೆ!
ಒಂದು ವೇಳೆ ಭಾರತ ಮತ್ತು ಚೀನಾದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾದರೆ ಅಮೆರಿಕೆಯ ಸೈನ್ಯ ಭಾರತಕ್ಕೆ ಸಮರ್ಥನೆ ಕೊಡುತ್ತದೆ, ಎಂಬ ಘೋಷಣೆ ಸೋಮವಾರದಂದು ವ್ಹಾಯಿಟ್ ಹೌಸ್ ಮಾಡಿತು.
ವಾಷಿಂಗ್ಟನ್: ಕಳೆದ ಅನೇಕ ದಿವಸಗಳಿಂದ ಲದ್ದಾಕ್ LAC ಯಲ್ಲಿ ಭಾರತ ಮತ್ತು ಚೀನಾದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಭಾರತ ಚೀನಾಗೆ ಸಖತ್ ಉತ್ತರ ಕೊಟ್ಟಿದೆ. ವಿಶೇಷವೆಂದರೆ ಚೀನಾದ ವಿರೋಧದ ಈ ಸಂಘರ್ಷದಲ್ಲಿ ಅನೇಕ ದೇಶಗಳು ಭಾರತಕ್ಕೆ ತಮ್ಮ ಬೆಂಬಲ ಸೂಚಿಸಿವೆ. ಚೀನಾದ ಈ ಸತತವಾದ ಮತ್ತು ವಿಸ್ತಾರವಾದ ಧೋರಣೆಗೆ ಜಪಾನ್, ವಿಯೆಟ್ನಾಮ್, ತೈವಾನ್ ಗಳಂತಹ ದೇಶಗಳು ರೋಸಿ ಹೋಗಿವೆ. ಇವರ ಭೂಮಿಯಲ್ಲಿ ಚೀನಾ ಯಾವತ್ತೂ ಅತಿಕ್ರಮಣ ಮಾಡುತ್ತಿದೆ. ಹೀಗಾಗಿ ಇವರು ಭಾರತದ ಸಮರ್ಥನೆಗೆ ಇಳಿದಿದ್ದಾರೆ. ಇವುಗಳ ಜೊತೆಗೆ ರಶಿಯಾ ಮತ್ತು ಅಮೆರಿಕೆಗಳಂತಹ ದೇಶಗಳು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದವು.
ಆದರೆ ಈಗ ಅಮೆರಿಕಾ ದೇಶವು ಓಪನ್ನಾಗಿ ಭಾರತಕ್ಕೆ ಸಮರ್ಥನೆ ನೀಡಿದೆ. ಒಂದು ವೇಳೆ ಭಾರತ ಮತ್ತು ಚೀನಾದ ನಡುವೆ ಯುದ್ಧಜನ್ಯ ಪರಿಸ್ಥಿತಿ ನಿರ್ಮಾಣವಾದರೆ ಅಮೆರಿಕೆಯ ಸೈನ್ಯ ಭಾರತಕ್ಕೆ ಸಮರ್ಥನೆ ಕೊಡುತ್ತದೆ ಎಂದು ಸೋಮವಾರ ವ್ಹಾಯಿಟ್ ಹೌಸ್ ಘೋಷಿಸಿದೆ. ಚೀನಾಗೆ ಏಷಿಯಾ ಖಂಡದಲ್ಲಿ ದಾದಾಗಿರಿ ಮಾಡಲು ಬಿಡುವದಿಲ್ಲವೆಂದು ಅಮೆರಿಕಾ ಹೇಳಿದೆ. ವ್ಹಾಯಿಟ್ ಹೌಸ್ ನ ಈ ಘೋಷಣೆಯ ನಂತರ ಅಮೆರಿಕೆಯ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುತ್ತ ಚೀನಾಗೆ ಗುರಿ ಮಾಡಿದ್ದಾರೆ. ಚೀನಾದಿಂದ ಅಮೆರಿಕಾ ಸಹಿತ ಅನೇಕ ರಾಷ್ಟ್ರಗಳಿಗೆ ತುಂಬಾ ಹಾನಿಯಾಗಿದೆ ಎಂದು ಉಚ್ಚರಿಸಿದ್ದಾರೆ.

ವ್ಹಾಯಿಟ್ ಹೌಸ್ ಚೀಫ್ ಆಫ್ ಸ್ಟಾಫ್ ಮಾರ್ಕ್ ಮಿಡೋಜ್ ಇವರು ಒಂದು ಪ್ರಶ್ನೆಯ ಉತ್ತರದಲ್ಲಿ ಫಾಕ್ಸ್ ನ್ಯೂಜ್ ಗೆ ಹೇಳಿದರು. ನಾವು ಚೀನಾ ಮತ್ತು ಬೇರೆ ಯಾವುದೇ ದೇಶಕ್ಕೆ ಎಲ್ಲಕ್ಕೂ ಶಕ್ತಿವಂತ ಅಥವಾ ಪ್ರಭಾವಶಾಲಿ ದೇಶವೆಂದು ಸ್ವೀಕರಿಸುವದಿಲ್ಲ. ಈ ಸಂದೇಶ ಸ್ಪಷ್ಟವಾಗಿದೆ. ಅಮೆರಿಕೆಯ ನೇವಿ ಈ ಪ್ರದೇಶದಲ್ಲಿ ತನ್ನ ಉಪಸ್ಥಿತಿ ಹೆಚ್ಚು ಮಾಡುವ ಸಲುವಾಗಿ ಚೀನಾದ ದಕ್ಷಿಣ ದಿಕ್ಕಿನಲ್ಲಿರುವ ಸಮುದ್ರದಲ್ಲಿ ವಿಮಾನಗಳನ್ನು ಹೊತ್ತೊಯ್ಯುವ ಎರಡು ದೊಡ್ಡ ಯುದ್ಧನೌಕೆಗಳನ್ನು ನಿಲ್ಲಿಸಿದ ನಂತರ ಅದರ ಅಧಿಕಾರಿಯು ಕೊಟ್ಟ ಈ ಮೇಲಿನ ಸಂದೇಶಕ್ಕೆ ಮಹತ್ವ ಪ್ರಾಪ್ತವಾಗಿದೆ. ಚೀನಾದಿಂದ ಜಗತ್ತಿನ ಅನೇಕ ದೇಶಗಳು ಆರ್ಥಿಕ ಹಾನಿಗೆ ಒಳಪಟ್ಟಿವೆ. ಕೊರೊನಾ ವಿಷಾಣುವಿನ ಸಾಂಕ್ರಮಿಕದಿಂದ ಅಮೆರಿಕಾ ಜೊತೆಗೆ ಯುರೋಪ, ಭಾರತ ಹಾಗೂ ಅನೇಕ ದೇಶಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಮೊದಲ ಹಂತದಲ್ಲಿ ಚೀನಾ ಕೊರೊನ ಸಂದರ್ಭವಾಗಿ ಸರಿಯಾದ ಮಾಹಿತಿಯನ್ನು ಕೊಡದೆ ಮುಚ್ಚಿಟ್ಟಿತು, ಹಾಗೆಯೇ ಇದನ್ನು ಜಗತ್ತಿನ ತುಂಬಾ ಹರಡಲು ಬಿಟ್ಟಿತು. ಎಂಬ ಪ್ರಶ್ನೆಯನ್ನು ಉಪಸ್ಥಿತಿ ಮಾಡಿದ್ದಾರೆ.
ಸುರಕ್ಷೆಯ ಕಾರಣಕ್ಕಾಗಿ ದಕ್ಷಿಣ ಚೀನಾದ ಸಮುದ್ರದಲ್ಲಿ ಅಮೆರಿಕೆಯ ಸೈನ್ಯ.
ಮಿಡೋಜ್ ಅವರ ಪ್ರಕಾರ ದಕ್ಷಿಣ ಚೀನಾದ ಸಮುದ್ರದಲ್ಲಿ ವಿಮಾನಗಳನ್ನು ಕೊಂಡೊಯ್ಯುವ ಎರಡು ಯುದ್ಧ ನೌಕೆಗಳನ್ನು ಕಳುಹಿಸಲಾಗಿದೆ. ಅಮೆರಿಕಾ ಇದು ಜಗತ್ತಿನ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದೆ ಎಂಬುದು ಸಾಬೀತು ಪಡಿಸುವದು ನಮ್ಮ ಧ್ಯೇಯವಾಗಿದೆ. ಚೀನಾ ಯಾವತ್ತೂ ಸಮುದ್ರದಲ್ಲಿ ವಾದವನ್ನು ಕೆದಕುತ್ತಿರುತ್ತದೆ. ಚೀನಾವು ದಕ್ಷಿಣ ಚೀನಾ ಸಮುದ್ರದ ಮೇಲೆ ತನ್ನ ಹಕ್ಕನ್ನು ಪ್ರಸ್ಥಾಪಿಸುತ್ತಿರುತ್ತದೆ. ಅದು ವಿಯೆಟ್ನಾಮ್, ಫಿಲಿಪಿನ್ಸ್, ಮಲೇಷಿಯಾ, ಬ್ರುನೆಯಿ, ತೈವಾನ್ ಇವರ ಪ್ರದೇಶದ ಮೇಲೆ ತನ್ನ ಹಕ್ಕನ್ನು ಹೇಳುತ್ತಿರುತ್ತದೆ, ಎಂದು ಮಿಡೋಜ್ ಅವರು ಉಚ್ಚರಿಸಿದರು. ಜೊತೆಗೆ ಭಾರತದಲ್ಲಿ ಚೀನಾ ಆಪ್ ಗಳ ಮೇಲೆ ನಿರ್ಬಂಧ ಹಾಕಿರುವದು ಸರಿ ಎಂದೂ ಸಹ ಉಲ್ಲೇಖಿಸಿದ್ದಾರೆ.