ಫೇಸ್ಬುಕ್ ಗೆಳೆತನವು ಮಹಿಳೆಗೆ ಹಾಕಿತು 43 ಲಕ್ಷ ರೂಪಾಯಿಗಳ ಪಂಗನಾಮ! ಮಹಿಳೆಗೆ ಒಬ್ಬ ಯುವಕ ಫ್ರೆಂಡ್ ರಿಕ್ವೆಸ್ಟ್….
ಪುಣೆ- ಫೇಸ್ಬುಕ್ ನಲ್ಲಿ ಆದ ಗೆಳೆತನ ಒಬ್ಬ ಮಹಿಳೆಗೆ ತುಂಬಾ ದುಬಾರಿಯಲ್ಲಿ ಬಿದ್ದಿದೆ. ದುಬಾರಿ ಗಡಿಯಾರ, ಬಂಗಾರದ ಚೈನ್ , ಬ್ರಾಸ್ಲೇಟ್, ಆಪಲ್ ಮೊಬೈಲ್, ಅಮೆರಿಕನ್ ಡಾಲರ್ ಕೊಡುವ ನಿಟ್ಟಿನಲ್ಲಿ 43 ಲಕ್ಷ 35 ಸಾವಿರ ರೂಪಾಯಿ ಖರ್ಚು ಮಾಡಿದ್ದಾಳೆ. ಈ ಕುರಿತು 51 ವರ್ಷದ ಒಬ್ಬ ಮಹಿಳೆಯು ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಅದರ ಅನುಸಾರ ಐಟಿ ಆಕ್ಟ್ ಮತ್ತು ಮೋ’ಸ ಮಾಡಿದ ಕುರಿತು ದೂರು ದಾಖಲಿಸಲಾಗಿದೆ. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಈ ದೂರು ನೀಡಿದ ಮಹಿಳೆ ಒಂದು ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾಳೆ. ಆ ಕಂಪನಿ ಪುಣೆಯ ಕಾತ್ರಜ ಪರಿಸರದಲ್ಲಿ ಇದೆ.
ಜನೇವರಿ ತಿಂಗಳಲ್ಲಿ ಒಬ್ಬ ಯುವಕನು ಈ ಮಹಿಳೆಗೆ ಫೇಸ್ಬುಕ್ ನಲ್ಲಿ ಫ್ರೆಂಡ್ಸ್ ರೀಕ್ವೆಸ್ಟ್ ಕಳುಹಿಸಿದ್ದನು. ಆತನ ರೀಕ್ವೆಸ್ಟ್ ಈ ಮಹಿಳೆ ಸ್ವೀಕಾರ ಮಾಡಿ ಅವನೊಂದಿಗೆ ಗೆಳೆತನ ಮಾಡಿಕೊಂಡಳು. ತದನಂತರ ಒಬ್ಬರಿಗೊಬ್ಬರು ತಮ್ಮ ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಸೈಬರ್ ಕಳ್ಳರು ಆ ಮಹಿಳೆಯ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಂಡರು. ನಂತರ ಅವಳಿಗೆ ದುಬಾರಿ ಗಡಿಯಾರ, ಬಂಗಾರದ ಸರ, ಬ್ರಸಲೇಟ್, ಆಪಲ್ ಮೊಬೈಲ್ , ಅಮೆರಿಕನ್ ಡಾಲರ್ ಕುರಿಯರ್ ಮೂಲಕ ಕಳುಹಿಸಿದ್ದೇನೆ ಎಂದು ಅವಳಿಗೆ ಹೇಳಿದರು.

ಕುರಿಯರ್ ಸ್ವೀಕಾರ ಮಾಡುವ ಸಲುವಾಗಿ ಕಸ್ಟಮ್ ಡ್ಯೂಟಿ, ಟ್ಯಾಕ್ಸ್, ಆರ್ಬಿಐ ಟ್ಯಾಕ್ಸ್, ಜಿಎಸ್’ಟಿ ಜಮಾ ಮಾಡುವ ಕಾರಣ ಹೇಳಿ ಪದೇ ಪದೇ ಆನ್ಲೈನ್ ಮೂಲಕ ಹಣವನ್ನು ಸ್ವೀಕಾರ ಮಾಡಿದರು. ಸುಮಾರು 43 ಲಕ್ಷ 35 ಸಾವಿರ ರೂಪಾಯಿಗಳನ್ನು ಮಹಿಳೆ ಅವರಿಗೆ ಟ್ರಾನ್ಸಫರ್ ಮಾಡಿದಳು. ಇಷ್ಟಾದ ಮೇಲೆ ಯಾವುದೇ ಪ್ರಕಾರದ ಗಿಫ್ಟ್ ಕುರಿಯರ್ ಬರದದ್ದರಿಂದ ಅವಳು ತನಗೆ ಮೋ’ಸವಾಗಿದೆ ಎಂದು ತಿಳಿದುಕೊಂಡಳು. ಆ ನಂತರ ಅವಳು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ನಂತರ ಅಪರಿಚಿತ ವ್ಯಕ್ತಿಯ ಮೇಲೆ ದೂರು ನೋಂದಾಯಿಸಲಾಗಿದೆ. ಇದರ ಕುರಿತು ಹೆಚ್ಚಿನ ತನಿಖೆಯನ್ನು ಸೈಬರ್ ಪೊಲೀಸರು ಮಾಡುತ್ತಿದ್ದಾರೆ.