ಚಲಿಸುವ ಬೈಕ್ ಕೆಳಗಡೆ ಹಾವನ್ನು ಕಂಡು ಅಲರ್ಟ್ ಮಾಡಿದ ಬೇರೆ ಬೈಕ್ ಸವಾರ! ನಡು ರಸ್ತೆಯಲ್ಲಿ ಹೀಗೆ ತೆಗೆಯಲಾಯಿತು …..ವಿಡಿಯೋ ನೋಡಿ.

ಚಲಿಸುತ್ತಿರುವಾಗಲೇ ಬೇರೆ ಬೈಕ್ ಸವಾರ ಮಾಡಿದ ಅಲರ್ಟ್! ಸೀಟ್ ಕೆಳಗೆ ಅವಿತು ಕುಳಿತ ಉದ್ದನೆಯ ಹಾವು, ವಿಡಿಯೋ ನೋಡಿ!

ಮುಂಬಯಿ: ಬೇಸಿಗೆಯ ಬಿಸಿಲಿನಿಂದ ಬಸವಳಿದವರಿಗೆ ಮಳೆ ಪ್ರಾರಂಭವಾದರೆ ಸಾಕು ವಾತಾವರಣ ತುಂಬಾ ಆಹ್ಲಾದದಾಯಕ ಸುಖವನ್ನು ಕೊಡುತ್ತದೆ. ಇದೇ ಮಳೆ ಸುಖದ ಜೊತೆಗೆ ಕೆಲವು ಸಮಸ್ಯೆಗಳನ್ನು ತಂದೊಡ್ಡುವದು ನಿಜ.ಮಳೆಯಲ್ಲಿ ಹೆಚ್ಚಾಗಿ ಹಾವುಗಳು ಹೊರಬೀಳುವದುಂಟು. ಈ ಹಾವುಗಳು ಮನುಷ್ಯರ ಭಯದಿಂದ ಎಲ್ಲಿ ಅವಿತು ಕೊಳ್ಳುತ್ತವೆ ಎಂಬುದೇ ಗೊತ್ತಾಗುವದಿಲ್ಲ. ಹೀಗಾಗಿ ಕೆಲವೊಂದು ಸಲ ವಿಷಕಾರಿ ಹಾವುಗಳು ಜೀವಕ್ಕೆ ಅಪಾಯ ತಂದೊಡ್ಡುತ್ತವೆ. ಇಂಥದ್ದೇ ಒಂದು ಘಟನೆ ಮುಂಬಯಿಯಿಂದ ಬಂದಿದೆ. ಇಲ್ಲಿ ಒಬ್ಬ ಬೈಕ್ ಸವಾರನ ಹಿಂದುಗಡೆಯ ಸೀಟಿನ ಕೆಳಗೆ ಹಾವೊಂದು ಅವಿತು ಕುಳಿತಿತ್ತು.

ಮುಂಬಯಿ ಹತ್ತಿರದ ವಿರಾರ್ ನಗರದಲ್ಲಿ ಬೈಕ್ ನ ಹಿಂದಿನ ಸೀಟಿನ ಕೆಳಗಡೆ ಹಾವು ಕುಳಿತಿತ್ತು. ಬೈಕ್ ಸವಾರನಿಗೆ ಸೀಟ್ ಕೆಳಗಡೆ ಏನೋ ಸುಳಿದಾಡಿದಂತೆ ಭಾಸವಾಗಿದೆ. ಆದರೂ ಮೊದಲಿಗೆ ಆತ ಅಷ್ಟೊಂದು ಗಮನ ಹರಿಸಿಲ್ಲ. ಯಾವಾಗ ಬದಿಯ ಬೇರೊಬ್ಬ ಬೈಕ್ ಸವಾರನಿಗೆ ಸೀಟಿನ ಕೆಳಗಡೆ ಹಾವು ಇರುವ ದೃಶ್ಯ ಕಣ್ಣಿಗೆ ಬಿತ್ತು, ಆಗ ಆತ ಶೀಘ್ರದಲ್ಲಿ ಅಲರ್ಟ್ ಮಾಡಿದ್ದಾನೆ. ಬೈಕ್ ರಸ್ತೆ ಬದಿಗೆ ತೆಗೆದುಕೊಂಡು ನೋಡಿದಾಗ ಅದರಲ್ಲಿ ಹಾವು ಕುಳಿತಿದ್ದನ್ನು ನೋಡಿ ಬೈಕ್ ಸವಾರ ಸುಸ್ತಾಗುವದೊಂದೆ ಬಾಕಿ ಇತ್ತು.

ವಿಡಿಯೋದಲ್ಲಿ ಬೈಕ್ ನಿಂದ ಹಾವನ್ನು ಹೊರ ತೆಗೆಯಲು ಯತ್ನಿಸುತ್ತಿದ್ದಾನೆ. ಕೈಯಲ್ಲಿ ಚಿಕ್ಕ ಬಡಿಗೆಯನ್ನು ಹಿಡಿದು ಹಾವನ್ನು ಬೈಕ್ ನಿಂದ ಓಡಿಸಲು ಪ್ರಯತ್ನಿಸಿದ್ದಾನೆ.

ಸ್ವಲ್ಪೇ ಸಮಯದ ನಂತರ ಹಾವು ಬೈಕ್ ನಿಂದ ಹೊರಗೆ ಬಂದು ಅಲ್ಲಿಯೇ ಇದ್ದ ಪೊದೆಯಲ್ಲಿ ಸೇರಿದೆ. ಸರ್ಪ ಮಿತ್ರರಾದ ಚಿತ್ರಾ ಪೆಡಣೆಕರ್ ಅವರು ಹೇಳುವ ಹಾಗೆ, ವೀಡಿಯೋದಲ್ಲಿ ಕಾಣುವ ಈ ಹಾವು ಕಾಮನ್ ಕ್ಯಾಟ್ ಸ್ನೇಕ್ ಪ್ರಜಾತಿಗೆ ಹೊಂದಿದ್ದಾಗಿದೆಯಂತೆ.

ಮಿತ್ರರೇ ಬೈಕ್ ಮೇಲೆ ಪ್ರವಾಸ ಮಾಡುವ ಮುನ್ನ ಸ್ವಲ್ಪ ತಡವಾದರೂ ಪರವಾಗಿಲ್ಲ, ಸರಿಯಾಗಿ ಚೆಕ್ ಮಾಡಿಯೇ ಮುಂದೆ ಹೆಜ್ಜೆ ಇಡಿ. ಏಕೆಂದರೆ ಮಳೆಗಾಲದಲ್ಲಿ ಈ ರೀತಿಯ ಅವಘಡಗಳು ಸಂಭವಿಸುವದನ್ನು ಕೇಳುತ್ತಲೇ ಇರುತ್ತೇವೆ. ಅದಕ್ಕಾಗಿ ಮೊದಲೇ ಜಾಗ್ರತೆ ವಹಿಸುವದು ಸೂಕ್ತ.