ಅಂದು PPE ಕಿಟ್ ಧರಿಸಿ ಭರ್ಜರಿ ಡಾನ್ಸ್ ಮಾಡಿದ ವೈರಲ್ ವಿಡಿಯೋದಲ್ಲಿನ ಡಾಕ್ಟರ್ ಯುವತಿ ಯಾರು ಗೊತ್ತಾ..?
ಕೆಲವೇ ದಿವಸಗಳ ಹಿಂದೆ PPE ಕಿಟ್ ಧರಿಸಿ ಹಾಯ್ ಗರಮಿ ಈ ಹಾಡಿನ ಸಂಗೀತಕ್ಕೆ ಕುಣಿಯುವ ಡಾಕ್ಟರ್ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆದದ್ದು ನಿಮಗೆಲ್ಲ ಗೊತ್ತೇ ಇದೆ. ಈ ಡ್ಯಾನ್ಸ್ ನ್ನು ಇಲ್ಲಿಯವರೆಗೆ 5 ಲಕ್ಷಕ್ಕಿಂತ ಹೆಚ್ಚು ಜನ ನೋಡಿದ್ದಾರೆ. ಅದರಲ್ಲಿ ವರುಣ್ ಧವನ್ ಮತ್ತು ನೋರಾ ಫತೇಹ್ ಅಭಿನಯದ ಗರ್ಮಿ ಚಿತ್ರದ ಹಾಡಿನ ಮೇಲೆ ಡಾಕ್ಟರ್ ಕುಣಿದಿದ್ದರು. ಡಾಕ್ಟರ್ PPE ಕಿಟ್ ಧರಿಸಿ ಕುಣಿದಿದ್ದರಿಂದ ತುಂಬಾ ಚರ್ಚೆಯಾಗಿತ್ತು. ಈ ಪೋಸ್ಟನ್ನು ಜುಲೈ 1 ರಂದು ಶೇರ್ ಮಾಡಿದ್ದು ಇಲ್ಲಿಯವರೆಗೆ ಸುಮಾರು 5 ಲಕ್ಷ ವ್ಯೂವ್ಜ್ ದೊರಕಿವೆ.
ಈ ಡಾಕ್ಟರ್ ಯಾರು? ಎಂಬ ಪ್ರಶ್ನೆ ನಿಮಗೆ ಬಿದ್ದಿರಬಹುದು. ಹಾಗಾದರೆ ಈ ಡಾಕ್ಟರ್ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಈ ಡಾಕ್ಟರ್ ಮಹಿಳೆಯಾಗಿದ್ದು ಮುಂಬಯಿ ನಿವಾಸಿಯಾಗಿದ್ದಾಳೆ. ಈಕೆಯ ಹೆಸರು ರೀಚಾ ನೇಗಿ ಇದ್ದು ಇವಳು ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಎಕ್ಟಿವ್ ಇರುತ್ತಾಳೆ. ಇನ್ಸ್ಟಾಗ್ರಾಮ್ ಮಾಧ್ಯಮದಿಂದ ಅನೇಕ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾಳೆ. ಡಾಕ್ಟರ್ಸ್ ಡೇ ದಿವಸ ಶೇರ್ ಮಾಡಿದ ಈ ಡಾನ್ಸಿಂಗ್ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಎಲ್ಲರಿಗೂ ತುಂಬಾ ಮೆಚ್ಚಿಗೆಯಾಗಿತ್ತು
ಸದ್ಯದ ಕೊರೊನ ಮಹಾಮಾರಿಯಲ್ಲಿ ಕೊರೊನದ ಮೇಲೆ ವಿಜಯ ಸಾಧಿಸಲು ವೈದ್ಯರು ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿರುವಾಗ ಮನಸ್ಸು ಅನೇಕ ಸಲ ನೈರಾಶ್ಯಕ್ಕೆ ಒಳಗಾಗುತ್ತದೆ, ಎಂದು ರೀಚಾ ತನ್ನ ಪೋಸ್ಟ್ ನಲ್ಲಿ ಹೇಳಿದ್ದಾರೆ. ರೀಚಾ ಒಬ್ಬಳು ಉತ್ತಮ ಬಾಕ್ಸರ್ ಳಾಗಿದ್ದು ಕರಿಯರ್ ಸಲುವಾಗಿ ವೈದ್ಯಕೀಯ ಕ್ಷೇತ್ರವನ್ನು ಆರಿಸಿದ್ದಾಳೆ. ರೀಚಾ ತನ್ನ ವಿದ್ಯಾಭ್ಯಾಸ ಮುಂಬಯಿ ಮತ್ತು ನಾಶಿಕ್ ನಲ್ಲಿ ಪೂರ್ಣಗೊಳಿಸಿದ್ದಾಳೆ. ರೀಚಾಳಿಗೆ ಡ್ಯಾನ್ಸ್ ಮಾಡುವದು ತುಂಬಾ ಇಷ್ಟವೆಂದು ಅವಳು ಇನ್ಸ್ಟಾಗ್ರಾಮ್ ನಲ್ಲಿ ಮಾಡುವ ಪೋಸ್ಟ್ ಗಳಿಂದ ಗೊತ್ತಾಗುತ್ತದೆ.