ಕೇವಲ 5,000 ರೂ.ಗಳನ್ನು 16,400 ಕೋಟಿ ರೂ.ಗಳಲ್ಲಿ ಪರಿವರ್ತಿಸಿದ ಶೇರ್ ಮಾರ್ಕೆಟ್ ಕಿಂಗ್ ರಾಕೇಶ್ ಜುನಜುನವಾಲಾ ಅವರ ಕಥೆ! ಒಮ್ಮೆ ಓದಿ…
ಭಾರತದ ಸುಪ್ರಸಿದ್ಧ ಹೂಡಿದಿಕೆದಾರರಾದ ರಾಕೇಶ್ ಜುನಜುನವಾಲಾ (rakesh jhunjhunwala) ಇವರು ಈಗಷ್ಟೇ 60 ನೆ ಹುಟ್ಟುಹಬ್ಬವನ್ನು ಆಚರಿಸಿದರು. ಆ ಪ್ರೀತ್ಯರ್ಥವಾಗಿ ಈ ಒಂದು ಲೇಖನವನ್ನು ಬರೆಯುತ್ತಿದ್ದೇವೆ. ಅವರ ಜೀವನದ ಕೆಲವು ಮಹತ್ವದ ವಿಷಯಗಳನ್ನು ಇಲ್ಲಿ ಸಾದರ ಪಡಿಸುತ್ತಿದ್ದೇವೆ.
ಶೇರ್ ಮಾರ್ಕೆಟ್ ಅಂದರೆ ಅದೊಂದು ಜೂಜಲ್ಲ. ಎಂಬ ಮಹತ್ವದ ವಿಚಾರವನ್ನು ಜಗತ್ತಿಗೆ ತೋರಿಸಿ ಕೊಟ್ಟ ವ್ಯಕ್ತಿ ಎಂದರೆ ವಾರೆನ್ ಬಫೆಟ್. ಶೇರ್ ಮಾರ್ಕೆಟ್ ನಲ್ಲಿ ಹಣವನ್ನು ಹೂಡಿಕೆ ಮಾಡಿ ಜಗತ್ತಿನ ಅತ್ಯಧಿಕ ಶ್ರೀಮಂತರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿದ ವ್ಯಕ್ತಿಯೇ ವಾರೆನ್ ಬಫೆಟ್. ಇವರು ಅನೇಕರಿಗೆ ಗುರು ಆಗಿದ್ದಾರೆ. ಭಾರತದಲ್ಲಿಯೂ ಇಂಥ ಕೆಲಸ ಮಾಡಿದ ವ್ಯಕ್ತಿ ಯಾರು ಅಂದರೆ ಅವರೇ ರಾಕೇಶ್ ಜುನಜುನವಾಲಾ.
ರಾಕೇಶ್ ಅವರಿಗೆ ಭಾರತದ ವಾರೆನ್ ಬಫೆಟ್ ಅಂತಲೂ ಕರೆಯುತ್ತಾರೆ. ಕಾರಣ ಬರೀ 35 ವರ್ಷದಲ್ಲೇ 5000 ₹ ಗಳನ್ನು 16,400 ಕೋಟಿ ರೂಪಾಯಿಗಳಲ್ಲಿ ಪರಿವರ್ತನೆ ಮಾಡಿ ತೋರಿಸಿದ ಜಾದೂಗಾರ.

1985 ರಲ್ಲಿ ಇವರು ಮುಂಬಯಿಯ ದಲಾಲ್ ಸ್ಟ್ರೀಟ್ ನಲ್ಲಿ (ಶೇರ್ ಮಾರ್ಕೆಟ್ ಇರುವ ಸ್ಥಳ) ಕಾಲಿಟ್ಟರು. ಆಗ ಬಾಂಬೆ ಸ್ಟಾಕ್ ಎಕ್ಸ್ಚೆಂಜ್ 150 ರ ಲೇವಲ್ ಮೇಲಿತ್ತು. ಆ ಸಮಯದಲ್ಲಿ ಇವರು 5000 ₹ ಗಳಿಂದ ಹೂಡಿಕೆ ಪ್ರಾರಂಭ ಮಾಡಿದರು. ಸದ್ಯಕ್ಕೆ ಈಗ ಅವರು $2.2 ಅರಬ್ ಅಂದರೆ ಸುಮಾರು 16, 400 ಕೋಟಿ ₹ ಗಳ ಒಡೆಯರಾಗಿದ್ದಾರೆ. ಭಾರತದ ಶ್ರೀಮಂತರ ಪಟ್ಟಿಯಲ್ಲಿ ಸದ್ಯಕ್ಕೆ 48 ಸ್ಥಾನದಲ್ಲಿದ್ದಾರೆ. ರಾಕೇಶ್ ಅವರು ತಮ್ಮ ಒಟ್ಟು ಹೂಡಿಕೆಯ ಮೇಲೆ 700 ಪ್ರತಿಶತ ಲಾಭ ಗಳಿಸಿದ್ದಾರೆ.
ಟಾಯ್ಟನ್ ಕಂಪನಿಯು ಇದರಲ್ಲಿ ರಾಕೇಶ್ ಅವರಿಗೆ ಹೆಚ್ಚು ಹಣವನ್ನು ಗಳಿಸಿ ಕೊಟ್ಟಿದೆ. ಇದರ ಹೊರತಾಗಿಯೂ ಬೇರೆ ಅನೇಕ ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆದಿದ್ದಾರೆ. ಇವರು ತಮ್ಮ ಯಶಸ್ಸಿನ ಬಗ್ಗೆ ಹೀಗೆ ಹೇಳುತ್ತಾರೆ. ಟ್ರೆಂಡಿಂಗ್ ನಲ್ಲಿ ವೇಗ ತುಂಬಾ ಮಹತ್ವದ್ದಾಗಿದೆ. ಅಲ್ಲಿ ಸಮಯಕ್ಕೆ ತಕ್ಕ ಹಾಗೆ ನಿರ್ಣಯ ತೆಗೆದುಕೊಳ್ಳಲಿಲ್ಲ ಅಂದ್ರೆ ಹಾನಿಯಾಗುವದು ಗ್ಯಾರಂಟಿ. ಜೊತೆಗೆ ಹೂಡಿಕೆ ಮಾಡಿಯೂ ಹಣ ದೊರೆಯುತ್ತದೆ. ಅದರ ಸಲುವಾಗಿ ಸಹನೆ ಸಂಯಮ ಮತ್ತು ಸಮಯದ ಸದುಪಯೋಗ ಮಾಡಿಕೊಳ್ಳಬೇಕಾಗುತ್ತದೆ. ಟ್ರೆಂಡಿಂಗ್ ಮತ್ತು ಇನ್ವೆಸ್ಟಮೆಂಟ್ ಅಂದರೆ ಪತ್ನಿ ಮತ್ತು ಪ್ರೇಯಸಿ ಇದ್ದ ಹಾಗೆ, ಇಬ್ಬರಿಗೂ ಒಂದೇ ಸ್ಥಳದಲ್ಲಿಡಲು ಸಾಧ್ಯವಿಲ್ಲ. ಇವೆರಡಕ್ಕೂ ಬೇರೆ ಬೇರೆ ಇಡಿ. ಒಬ್ಬಳಿಗೆ ಇನ್ನೊಬ್ಬಳ ಮಾಹಿತಿ ಇರದ ಹಾಗೆ ಕಾಳಜಿ ವಹಿಸಿ ಎಂದು ಹೇಳುತ್ತಾರೆ.