ನಿಮ್ಮ ಹೆಸರಲ್ಲಿ ಖಾಲಿ ಜಮೀನು ಇದ್ದರೆ ತಿಂಗಳಿಗೆ ಗಳಿಸಬಹುದು ₹50,000! ಇಲ್ಲಿದೆ ಸಂಪೂರ್ಣ ಮಾಹಿತಿ.

ನವ ದೆಹಲಿ: ನಿಮ್ಮ ಹತ್ತಿರ ಯಾವುದೇ ಪ್ರಕಾರದ ಬರಿದಾದ ಜಾಗವಿದ್ದರೆ ಅಂದರೆ ಖಾಲಿ ಪ್ಲಾಟ್, ಖಾಲಿ ಮನೆ ಇದ್ದರೆ ನೀವು ಮನೆಯಲ್ಲಿಯೇ ಕುಳಿತುಕೊಂಡು 50 ಸಾವಿರ ರೂಪಾಯಿಗಳವರೆಗೆ ಗಳಿಸಬಹುದು. ನೀವು ನಿಮ್ಮ ಖಾಲಿ ಜಾಗದಲ್ಲಿ ಮೊಬೈಲ್ ಟಾವರ್ ಇನ್ಸ್ಟಾಲ್ ಮಾಡಿಕೊಂಡು ಬಹಳಷ್ಟು ಹಣ ಗಳಿಸಬಹುದು. ಆದರೆ ಮೊಬೈಲ್ ಟಾವರ್ ಹಚ್ಚುವ ಸಲುವಾಗಿ ಕೆಲವೊಂದು ಅತ್ಯಾವಶ್ಯಕ ವಿಷಯಗಳ ಬಗ್ಗೆ ಗಮನ ವಹಿಸಬೇಕಾಗುವದು ಅಗತ್ಯ. ಆ ಕ್ಷೇತ್ರದಲ್ಲಿ ಮೊಬೈಲ್ ಟಾವರ್ ಇದೆಯೋ ಇಲ್ಲವೋ? ಕ್ಷೇತ್ರದಲ್ಲಿ ಜನದಟ್ಟಣೆ ಇದೆಯೋ ಇಲ್ಲವೋ? ಟಾವರ್ ಇನ್ಸ್ಟಾಲ್ ಮಾಡುವದಕ್ಕಿಂತ ಮುಂಚೆ ಕಂಪನಿಯು ಈ ಎಲ್ಲ ಸಂಗತಿಗಳ ಪರಿಶೀಲನೆ ಮಾಡುವದು. ಒಂದು ವೇಳೆ ಕಂಪನಿಯು ನಿಮ್ಮ ಆವೇದನೇಯನ್ನು ಸ್ವೀಕಾರ ಮಾಡಿದರೆ ನಿಮ್ಮ ಖಾಲಿ ಸ್ಥಳದಲ್ಲಿ ಟಾವರ್ ಇನ್ಸ್ಟಾಲೇಶನ್ ಮಾಡಬಹುದು.

ಮೊಬೈಲ್ ಟಾವರ್ ಸಲುವಾಗಿ ಏನು ಅವಶ್ಯಕವಾಗಿದೆ?

ಒಂದು ವೇಳೆ ನೀವು ಮೊಬೈಲ್ ಟಾವರ್ ಸ್ಥಾಪಿಸಲು ಬಯಸಿದರೆ ನಿಮ್ಮ ಹತ್ತಿರ ಖಾಲಿಯಾದ ಜಾಗ ಇರಬೇಕು. ಆ ಖಾಲಿ ಸ್ಥಳವು ಜನವಸತಿಯಿಂದ ದೂರ ವಿದ್ದಿರಬೇಕು. ಮೊಬೈಲ್ ಟಾವರ್ ಸ್ಥಾಪಿಸಬೇಕಾದರೆ ನೀವು ಕಂಪನಿಗೆ ಅಪ್ಲಿಕೇಶನ್ ಮಾಡಬೇಕಾಗುತ್ತದೆ. ಮೊಬೈಲ್ ಟಾವರ್ ಸ್ಥಾಪಿಸಲು ಒಂದು ವೇಳೆ ಯಾರಾದರೂ ಫೋನ್‌ನಲ್ಲಿ ಹಣ ಕೇಳಿದರೆ ಅದು ಸಂಪೂರ್ಣವಾಗಿ ನಕಲಿಯಾಗಿರುತ್ತದೆ ಎಂಬುದನ್ನು ಸಹ ನೆನಪಿನಲ್ಲಿಡಬೇಕು. ಯಾವುದೇ ಕಂಪನಿಯು ಭೂಮಿಯನ್ನು ನೋಡಿದ ನಂತರವೇ ಅಗ್ರಿಮೆಂಟ್ ಮಾಡಿಕೊಳ್ಳುತ್ತದೆ. ಮೊಬೈಲ್ ಟವರ್ ಸ್ಥಾಪಿಸಿದ ನಂತರ ಕಂಪನಿಯು ನಿಮಗೆ ಬಾಡಿಗೆ ನೀಡುತ್ತದೆ. ಇದು 10 ಸಾವಿರದಿಂದ 50 ಸಾವಿರ ರೂಪಾಯಿಗಳವರೆಗೂ ಆಗಿರಬಹುದು.

ಅಪ್ಲಿಕೇಶನ್ ಹೇಗೆ ಮಾಡಬೇಕು:-

ಮೊಬೈಲ್ ಟಾವರ್ ಸ್ಥಾಪಿಸುವ ಸಲುವಾಗಿ ನೀವು ಕಂಪನಿಗೆ ಸಂಪರ್ಕ ಮಾಡಬೇಕಾಗುತ್ತದೆ. ಈ ಕಂಪನಿಗಳನ್ನು ಆನ್ ಲೈನ್ ನಲ್ಲಿ, ಮೊಬೈಲ್ ನಂಬರ್, ಅಥವಾ ಇಮೇಲ್ ಐಡಿ ಮುಖಾಂತರ ನೇರವಾಗಿ ಕಂಪನಿಗೆ ಸಂಪರ್ಕಿಸಬಹುದು. ಇವರ ಅಧಿಕೃತ ವೆಬ್ಸೈಟ್ ನಲ್ಲಿ ಅಪ್ಲಿಕೇಶನ್ ಫಾರ್ಮ್ ಕಾಣಬಹುದು. ನಿಮಗೆ ಪ್ರಾಪರ್ಟಿಯ ಹೆಸರು, ಪ್ರಾಪರ್ಟಿಯ ಪ್ರಕಾರ ಇದರ ಸಂಪೂರ್ಣ ಮಾಹಿತಿಯನ್ನು ಅಪ್ಲಿಕೇಶನ್ ನಲ್ಲಿ ನೀಡಬೇಕಾಗುವದು. ತದನಂತರ ಕಂಪನಿ ಸ್ವತಃ ನಿಮ್ಮನ್ನು ಸಂಪರ್ಕಿಸಿ ಇನ್ನೀತರ ಮಾಹಿತಿಯನ್ನು ಪಡೆದುಕೊಳ್ಳುವದು.