ಕ್ಯಾಮೆರಾ ಡಿಸೈನ್’ನಲ್ಲಿ ಮನೆ ಕಟ್ಟಿಸಿದ ಹವ್ಯಾಸಿ ಫೋಟೋಗ್ರಾಫರ್! ಮಕ್ಕಳಿಗೂ Canon ಮತ್ತು Nikon ಹೆಸರು….

ಬೆಂಗಳೂರು:- ಜಗತ್ತಿನಲ್ಲಿ ಕೆಲವರು ತಾವು ಅತ್ಯಂತ ಇಷ್ಟ ಪಡುವ ವಸ್ತುವಿನಿಂದಲೇ ಮನೆಯನ್ನು ತಯಾರಿಸಿ ಅದರಲ್ಲೇ ವಾಸವಿರಲು ಬಯಸುತ್ತಾರೆ. ಕೆಲವೊಬ್ಬರಿಗೆ ಚಾಕಲೇಟ್, ಕೆಲವೊಬ್ಬರಿಗೆ ಬಿಸ್ಕಿಟ್ ಮತ್ತು ಕೆಲವರಿಗೆ ಇನ್ನಿತರ ವಸ್ತುಗಳಿಂದ ಮನೆ ತಯಾರು ಮಾಡಲು ಬಯಸುತ್ತಾರೆ. ಆದರೆ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಬೆಂಗಳೂರಿನಲ್ಲಿ ಕ್ಯಾಮೆರಾದ ಡಿಸೈನ್ ನಲ್ಲಿ ಕಟ್ಟಿದ ಮನೆಯೊಂದು ತುಂಬಾ ಚರ್ಚೆ ನಡೆದಿದೆ.

ಫೋಟೋಗ್ರಾಫರ್ ರವಿ ಹೊಂಗಲ್ ಆವರು ತಮ್ಮ ಮನೆಯನ್ನು ಕ್ಯಾಮೆರಾ ಆಕಾರದಲ್ಲಿಯೇ ಕಟ್ಟಿದ್ದಾರೆ. ಅವರ ಮನೆಯ ಕುರಿತು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ. ಕ್ಯಾಮೇರಾದ ಚಿತ್ರ ಮತ್ತು ಅದರ ಆಕಾರದ ಮನೆ ಇರಬೇಕು ಎಂಬುದು ಹೊಂಗಲ್ ಅವರ ಕನಸಾಗಿತ್ತಂತೆ. ರವಿ ಇವರು ಕರ್ನಾಟಕದ ಬೆಳಗಾವಿಯ ನಿವಾಸಿಯಾಗಿದ್ದಾರೆ. ಅವರು ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದಾರೆ. ಅವರಿಗೆ ಚಿಕ್ಕಂದಿನಿಂದಲೂ ಫೋಟೋಗ್ರಾಫಿ ಎಂದರೆ ತುಂಬಾ ಇಷ್ಟವಂತೆ. ಅವರು ಹೇಗೆ ದೊಡ್ಡವರಾಗುತ್ತ ಹೋದರೊ ಹಾಗೆ ಅವರ ಫೋಟೋಗ್ರಾಫರ್ ಇಚ್ಛೆ ಸಹ ಹೆಚ್ಚುತ್ತ ಹೋಯಿತು.

ಅವರು ಬೆಂಗಳೂರಿನಲ್ಲಿಯ ತಮ್ಮ ಮನೆಯ ರಚನೆಯನ್ನು ಕ್ಯಾಮೆರಾ ತರಹ ರಚಿಸಿದ್ದಾರೆ. ದೂರದಿಂದ ನೋಡಿದರೆ ಒಂದು ಕ್ಯಾಮೆರಾ ಇರಬಹುದೇನೋ ಎಂಬಂತೆ ಭಾಸವಾಗುತ್ತದೆ. ರವಿ ಅವರು ತಮ್ಮ ಮಕ್ಕಳ ಹೆಸರು ಸಹಿತ ಕ್ಯಾಮೆರಾಗೆ ಸಂಬಂಧ ಪಟ್ಟಂತೆ ಇಟ್ಟಿದ್ದಾರೆ. ಮಕ್ಕಳಿಗೆ ಕ್ಯಾನನ್ ನಿಕಾನ ಮತ್ತು ಎಫ್ಸೊನ್ ಅಂತ. ಈ ವಿಡಿಯೋದಲ್ಲಿ ಕ್ಯಾಮೆರಾ ಆಕಾರದ ಮನೆಯನ್ನು ನೀವು ನೋಡಬಹುದು. ಈ ವಿಡಿಯೋಗೆ ಇದುವರೆಗೆ 46 ಸಾವಿರಕ್ಕಿಂತ ಹೆಚ್ಚು ವೀಕ್ಷಣೆ ಬಂದಿವೆ, ಈ ಮನೆಯ ಕುರಿತು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಚರ್ಚೆ ಶುರುವಾಗಿದೆ.