ಒಂದೇ ಮಂಟಪದಲ್ಲಿ ಇಬ್ಬರು ಯುವತಿಯರೊಂದಿಗೆ ಮದುವೆಯಾದ ಯುವಕ! ಒಬ್ಬಳು ಲವರ್, ಇನ್ನೊಬ್ಬಳು ತಂದೆ-ತಾಯಿಯ ಆಯ್ಕೆ!

ಘಟನೆ ಮಧ್ಯಪ್ರದೇಶದಲ್ಲಿಯ ಬೈತೂಲ್ ಜಿಲ್ಲೆಯಲ್ಲಿಯದಿದೆ. ಇಲ್ಲಿ ಒಂದು ವಿಚಿತ್ರ ದೃಶ್ಯ ನೋಡಲು ಸಿಕ್ಕಿತು. ಇದರಲ್ಲಿ ಹುಡುಗ ತಾನಿರುವ ಪ್ರದೇಶದಲ್ಲಿಂದಲೇ ಎರಡು ಹುಡುಗಿಯರನ್ನು ಒಂದೇ ಕಲ್ಯಾಣ ಮಂಟಪದ ಅಡಿಯಲ್ಲಿ ಮದುವೆಯಾದನು. ಬೈತೂಲ್ ಜಿಲ್ಲೆಯ ಸಲೈಯಾ ಊರಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಜೂನ್ 29 ರಂದು ನಡೆದಿದೆ. ಹುಡುಗನ ಮದುವೆ ಒಬ್ಬಳು ಪ್ರೇಯಸಿ ಮತ್ತು ಇನ್ನೊಬ್ಬಳು ಹಿರಿಯರು ನೇಮಿಸಿದ ಹುಡುಗಿಯ ಜೊತೆಗೆ ಒಂದೇ ಮಂಟಪದಲ್ಲಿ ನಡೆದಿದೆ. ಈ ಮದುವೆಯಲ್ಲಿ ಮೂರು ಕುಟುಂಬದವರ ಜೊತೆಗೆ ಊರಿನವರೂ ಉಪಸ್ಥಿತರಿದ್ದರು.

ವರನೊಬ್ಬ ಇಬ್ಬರು ವಧುಗಳು ಕಲ್ಯಾಣ ಮಂಟಪದಲ್ಲಿದ್ದರು. ಸಂದೀಪ್ ಉಇಕೆ ಈತ ಸಲೈಯಾ ಊರಿನ ಪರಿಶಿಷ್ಟ ಪಂಗಡದ ಹುಡುಗನಾಗಿದ್ದು, ಒಬ್ಬಳು ಹೊಶಂಗಾಬಾದ್ ಜಿಲ್ಲೆಯ ಸುನಂದಾ ಇವಳು ಅಪ್ರಾಪ್ತಳಾಗಿದ್ದಾಳೆ, ಇನ್ನೊಬ್ಬಳು ಘಡಾಡೋಂಗರಿ ತಾಲೂಕಿನ ಶಶಿಕಲಾ ಜೊತೆಗೆ ಹೀಗೆ ಇಬ್ಬರ ಜೊತೆಗೂ ಮದುವೆಯಾಗಿದ್ದಾನೆ. ಸಂದೀಪ್ ಸದ್ಯಕ್ಕೆ ಭೋಪಾಲ್ ನಲ್ಲಿ ITI ಕಲಿಯುತ್ತಿದ್ದಾನೆ. ಇದೇ ಸಂದರ್ಭದಲ್ಲಿ ಸುನಂದಾಳ ಜೊತೆಗೆ ಪ್ರೀತಿ ಹುಟ್ಟಿತು. ಆದರೆ ಮನೆಯವರು ಶಶಿಕಲಾಳ ಜೊತೆಗೆ ಮದುವೆ ನಿಶ್ಚಯಿಸಿದ್ದರು. ಹೀಗಾಗಿ ಮೂರು ಕುಟುಂಬಗಳ ಮಧ್ಯೆ ತುಂಬಾ ವಾದ ವಿವಾದಗಳು ನಡೆದವು.

ಈ ವಾದವನ್ನು ಶಮನಗೊಳಿಸುವದಕ್ಕಾಗಿ ಮೂರು ಕುಟುಂಬದವರು ಹಾಗೂ ಊರಿನ ಪ್ರಮುಖರು ಪಂಚಾಯತಿ ನೆರೆದರು. ಕೊನೆಗೆ ಒಂದು ನಿಶ್ಚಿಯಕ್ಕೆ ಬರಲಾಯಿತು. ಏನೆಂದರೆ, ಒಂದು ವೇಳೆ ಇಬ್ಬರೂ ಯುವತಿಯರು ಹುಡುಗನ ಜೊತೆಗೆ ಇರಲು ಒಪ್ಪಿಗೆ ಸೂಚಿಸಿದರೆ ಇಬ್ಬರಿಗೂ ಮದುವೆಗೆ ಒಪ್ಪಿಗೆ ಕೊಡಲಾಗುವದು. ಆಗ ಇಬ್ಬರು ಯುವತಿಯರು ಯುವಕನ ಜೊತೆಗೆ ಕೂಡಿಕೊಂಡು ಇರಲು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಆನಂತರ ಹುಡುಗನ ತಾಯಿ ಸೋನಿಬಾಯಿ, ಎರಡು ವಧುಗಳ ಜೊತೆಗೆ ಮತ್ತು ಮೂರು ಕುಟುಂಬದವರ ಇಚ್ಛೆಯಂತೆ ಮದುವೆ ಮಾಡಿಕೊಂಡಿದ್ದಾನೆ ಎಂದು ಹೇಳಿದಳು.

ಹೆಂಡತಿ ಶಶಿಕಲಾ ಹೆಳುತ್ತಾಳೆ, ನಾವಿಬ್ಬರೂ ಚೆನ್ನಾಗಿ ಸಂಸಾರ ಮಾಡುತ್ತಿದ್ದೇವೆ, ಹಾಗೂ ನಾವು ಸಂತೋಷದಲ್ಲಿದ್ದೇವೆ. ಸಂದೀಪ್ ನಮ್ಮಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಭಾಷೆ ಕೊಟ್ಟಿದ್ದಾನೆ. ನಾವು ಎಲ್ಲರ ಸಮ್ಮತಿಯಿಂದಲೇ ಮದುವೆಯಾಗಿದ್ದೇವೆ.

ಆದರೀಗ ಈ ಪ್ರಕರಣ ಬೆಳಕಿಗೆ ಬಂದ ನಂತರ ಸ್ಥಾನಿಕ ಪ್ರಶಾಸನ ಇವರ ಮೇಲೆ ಏನಾದರೂ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿದೆ. ಮತ್ತು ಅದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುತ್ತಿದೆ ಎಂಬ ಸುದ್ದಿ ಹರಡಿದೆ. ಹರದೊಂಗರಿ ತಾಲೂಕಿನ ತಹಸಿಲ್ ದಾರರಾದ ಮೋನಿಕಾ ವಿಶ್ವಕರ್ಮಾ ಹೇಳುವ ಹಾಗೆ ಒಬ್ಬ ತರುಣ ಇಬ್ಬರ ಜೊತೆಗೆ ಮದುವೆಯಾದ ವಿಷಯ ನಮಗೆ ಗೊತ್ತಾಗಿದೆ, ಹಾಗೂ ಅವರ ಮನೆಯವರ ಜೊತೆಗೂ ಚರ್ಚೆಯಾಗಿದೆ. ಮುಂದಿನ ತನಿಖೆ ಪೊಲೀಸರು ಕೈಗೊಂಡಿದ್ದಾರೆ ಎನ್ನುವ ಸುದ್ದಿ ಇದೆ.