ಅಬ್ಬಾ..! ‘ಇಷ್ಟಿದೆ’ ನೋಡಿ ಮುಕೇಶ್ ಅಂಬಾನಿ ಮನೆಗೆ ಬರುವ ಒಂದು ಲೀಟರ್ ಹಾಲಿನ ಬೆಲೆ! ಭಾರತದ ನಂಬರ್ ಒನ್ ಡೇರಿ….

ದೇಶದ ಅತಿದೊಡ್ಡ ಉದ್ಯಮಿಗಳಿಂದ ಹಿಡಿದು ಬಾಲಿವುಡ್ ವರೆಗೆ ಎಲ್ಲ VIP ವ್ಯಕ್ತಿಗಳು ಮತ್ತು ನಟರು ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಇದಕ್ಕಾಗಿ ಅವರು ಉತ್ತಮ ಗುಣಮಟ್ಟದ ಆಹಾರವನ್ನೇ ಸೇವಿಸುತ್ತಾರೆ. ಅದಕ್ಕೆ ಬೆಲೆ ಎಷ್ಟು ಖರ್ಚಾದರೂ ಚಿಂತೆ ಇರುವದಿಲ್ಲ. ಆದರೆ ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಅವರಂತಹ ದಿಗ್ಗಜರು ತಮ್ಮ ಫಿಟ್‌ನೆಸ್‌ಗಾಗಿ ಯಾವ ಡೇರಿಯ ಹಾಲು ಕುಡಿಯುತ್ತಾರೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಗೊತ್ತಿಲ್ಲದಿದ್ದರೆ, ಈ ದಿಗ್ಗಜರು ಸಾಧಾರಣವಾದ ಹಾಲು ಕುಡಿಯದೇ ಉತ್ತಮ ಗುಣಮಟ್ಟದ ಹೈಟೆಕ್ ಹಾಲನ್ನು ಕುಡಿಯುತ್ತಾರೆ, ಈ ಡೇರಿಯಿಂದ ಬರುವ 1 ಲೀಟರ್ ಹಾಲಿನ ಬೆಲೆ ಸಾಮಾನ್ಯ ಹಾಲಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ.

ಮಹಾರಾಷ್ಟ್ರದ ಪುಣೆಯಲ್ಲಿ ಭಾಗ್ಯಲಕ್ಷ್ಮಿ ಎಂಬ ಡೇರಿ ಇದೆ. ಈ ಡೇರಿಯ ಗ್ರಾಹಕರ ಪಟ್ಟಿಯಲ್ಲಿ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಬಾಲಿವುಡ್ ಸುಪ್ರಸಿದ್ದ ನಟರ ಹೆಸರುಗಳೂ ಸಹ ಸೇರಿವೆ. ಭಾಗ್ಯಲಕ್ಷ್ಮಿ ಡೇರಿಯನ್ನು ದೇವೇಂದ್ರ ಷಾ ಎನ್ನುವವರು ಪ್ರಾರಂಭಿಸಿದರು. ಈ ಡೇರಿಯ ಆರಂಭಿಕ ದಿನಗಳಲ್ಲಿ, ಇದು ಕೇವಲ 175 ಗ್ರಾಹಕರನ್ನು ಹೊಂದಿತ್ತು. ತದನಂತರ ಈ ಸಂಖ್ಯೆ ಹೆಚ್ಚಾಗುತ್ತ ಸದ್ಯದಲ್ಲಿ 22000 ರ ವರೆಗೆ ತಲುಪಿದೆ. ಪ್ರಸ್ತುತ ಈ ಡೈರಿಯ 1 ಲೀಟರ್ ಹಾಲಿನ ಬೆಲೆ 152 ರೂ. ಇದೆ.

ದೇವೇಂದ್ರ ಶಾಹ್ ಅವರ ಡೇರಿಯಲ್ಲಿಯ ಹಾಲು ಮಹಾರಾಷ್ಟ್ರದ ಅನೇಕ ಭಾಗಗಳಿಗೆ ಸರಬರಾಜು ಮಾಡಲಾಗುತ್ತದೆ. ಪುಣೆಯಿಂದ ಮುಂಬೈ 163 ಕಿಲೋಮೀಟರ್ ಅಂತರವಿದೆ. ಪುಣೆಯಿಂದ ಮುಂಬೈ ತಲುಪಲು ಸುಮಾರು ಮೂರು ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಮುಂಬಯಿಯಲ್ಲಿ ಭಾಗ್ಯಲಕ್ಷ್ಮಿ ಡೇರಿ ಹಾಲಿನ ಪೂರೈಕೆದಾರರು ಅನೇಕರಿದ್ದಾರೆ, ಆದ್ದರಿಂದ ಈ ಹಾಲನ್ನು ಪ್ರತಿದಿನ ಪುಣೆಯಿಂದ ಮುಂಬೈಗೆ ಮಾರಾಟ ಮಾಡಲಾಗುತ್ತದೆ. ಈ ಡೇರಿ ಡೆಲಿವರಿ ವ್ಯಾನ್ ಪ್ರತಿದಿನ ಬೆಳಿಗ್ಗೆ 5:30 ರಿಂದ 7:30 ರವರೆಗೆ ಮುಂಬಯಿಯಲ್ಲಿಯ ಗ್ರಾಹಕರಿಗೆ ಹಾಲು ಪೂರೈಸುತ್ತದೆ. ಈ ಡೇರಿಯ ಗ್ರಾಹಕರಿಗೆ ‘ಪ್ರೈಡ್ ಆಫ್ ಕೌ’ ಗಾಗಿ ಲಾಗಿನ್ ಐಡಿ ನೀಡಲಾಗುತ್ತದೆ. ಅದರ ಮೂಲಕ ಗ್ರಾಹಕರು ತಮ್ಮ ಆರ್ಡರ್ ಗಳನ್ನು ಬದಲಾವಣೆ ಮಾಡಬಹುದು ಅಥವಾ ಆರ್ಡರ್ ರದ್ದು ಮಾಡುವದು ಮತ್ತು ಡೆಲಿವರಿಯ ಸ್ಥಳ ಬದಲಾವಣೆ ಮಾಡಬಹುದು.

ಭಾಗ್ಯಲಕ್ಷ್ಮಿ ಡೈರಿಯಲ್ಲಿಯ ಹಾಲು ಕೊಡುವ ಹಸುಗಳ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಇಲ್ಲಿ ಹಸುಗಳಿಗಾಗಿ ರಬ್ಬರ್ ಚಾಪೆ ಇದೆ. ಇವುಗಳನ್ನು ದಿನಕ್ಕೆ ಕನಿಷ್ಠ ಮೂರು ಬಾರಿ ಸ್ವಚ್ಛ ಗೊಳಿಸಲಾಗುತ್ತದೆ. ಜೊತೆಗೆ ಹಸುಗಳಿಗೆ ಕುಡಿಯುವ ನೀರು ಆರ್’ಓ ದ ಫಿಲ್ಟರ್ ವಾಟರ್ ನೀಡಲಾಗುತ್ತದೆ. ಅವುಗಳಿಗೆ ತಿನ್ನಲು ಸೋಯಾಬಿನ್, ಅಲ್ಫಾ ಹುಲ್ಲು, ಕಾಲೋಚಿತ ತರಕಾರಿಗಳು ಮತ್ತು ಜೋಳದ ಮೇವನ್ನು ನೀಡಲಾಗುತ್ತದೆ. ಈ ಡೇರಿಯ ಇನ್ನೊಂದು ವಿಶೇಷತೆ ಏನೆಂದರೆ ದಿನದ 24 ಗಂಟೆಗಳವರೆಗೆ ಸ್ಲೋ ಸೌಂಡ್ ಮ್ಯೂಜಿಕ್ ಚಾಲು ಇರುತ್ತದೆ.

ಭಾಗಲ್ಯಕ್ಷ್ಮಿ ಡೇರಿಯ ಪ್ರಮುಖ ಅಂಶವೆಂದರೆ 2000 ಡಚ್ ಹೋಲ್ಸ್ಟೈನ್ ತಳಿಗಳ ಹಸುಗಳಿವೆ. ಈ ಫಾರ್ಮ್ 26 ಎಕರೆಯಲ್ಲಿ ವಿಸ್ತಾರವಾಗಿದ್ದು ದಿನಕ್ಕೆ 25000 ಲೀಟರ್ ಹಾಲಿನ ಉತ್ಪಾದನೆ ಮಾಡಲಾಗುತ್ತದೆ. ಇಲ್ಲಿ ದಿನಾಲು ಮುಂಜಾನೆಯಲ್ಲಿ 2000 ಹಸುಗಳ ಹಾಲು ಹಿಂಡಲಾಗುತ್ತದೆ. ವಿಶೇಷ ವೆಂದರೆ ಇಲ್ಲಿಯ ಆಕಳಿನ ಹಾಲು ತಗೆಯುವದರಿಂದ ಹಿಡಿದು ಹಾಲಿನ ಪ್ಯಾಕಿಂಗ್ ವರೆಗಿನ ಎಲ್ಲ ಕಾರ್ಯಗಳು ಮಷಿನ್ ಗಳ ಮೂಲಕ ಮಾಡಲಾಗುತ್ತದೆ.

ಇನ್ವೆಸ್ಟರ್ ರಿಲೇಶನ್ಸ್ ಸೊಸೈಟಿ ಮೂಲಕ ದೊರೆತ ಮಾಹಿತಿಯ ಅನುಸಾರ, ಈ ಹಾಲಿನ ಹೆಚ್ಚಾಗುತ್ತಿರುವ ಜನಪ್ರಿಯತೆ ನೋಡಿದರೆ 2020 ರಲ್ಲಿ ಇದುವರೆಗೆ ಈ ಡೇರಿಯ ಮಾರ್ಕೆಟ್ ಹೆಚ್ಚಾಗಿ 140 ಮಿಲಿಯನ್ ಡಾಲರ್(9,08,670 ಕೋಟಿ ರೂಪಾಯಿ) ಆಗಬಹುದು. ಆದರೆ 2013 ರಲ್ಲಿ ಈ ಡೇರಿಯ ಮಾರ್ಕೆಟ್ ಸುಮಾರು 70 ಮಿಲಿಯನ್ ಡಾಲರ್(4,45,335 ಕೋಟಿ ರೂ) ನಷ್ಟಿತ್ತು.