3 ಕೋಟಿಯ ಮನೆ, ಹುಂಡೈ ಕ್ರೇಟಾ ಕಾರಿನ ಒಡತಿ, ಇಷ್ಟಿದ್ದರೂ ರಸ್ತೆ ಬದಿಗೆ ಸ್ಟಾಲ್; ಇದು ನೋಡಿ ಮಹತ್ವಾಕಾಂಕ್ಷಿ ಮಹಿಳೆಯ ಕಥೆ!
ಸಾಕಷ್ಟು ಹಣ ಗಳಿಸಬೇಕು, ಸುಖದ ಸುಪ್ಪತ್ತಿನಲ್ಲಿ ಜೀವನ ನಡೆಸಬೇಕು ಅನ್ನೋ ಕನಸು ಬಹಳ ಜನ ಹೊತ್ತಿರುತ್ತಾರೆ. ಅದಕ್ಕಾಗಿ ಎಷ್ಟೋ ಜನ ಹಗಲು ರಾತ್ರಿಯೆನ್ನದೆ ದುಡಿದೇ ದುಡಿಯುತ್ತಾರೆ. ಬಡತನದ ಪೆಟ್ಟುಗಳನ್ನು ತಿನ್ನುತ್ತ ಎಲ್ಲವನ್ನು ಸಹನೆ ಮಾಡುತ್ತ ಕೊನೆಗೆ ಅದರಲ್ಲಿ ಯಶಸ್ವಿಯಾಗಿ ಮೇಲೆ ಬಂದ ಅನೇಕರನ್ನು ನಾವು ನೋಡಿದ್ದೇವೆ.
ಆದರೆ ಒಂದು ಶ್ರೀಮಂತ ವ್ಯಕ್ತಿ ರಸ್ತೆಯ ಬದಿಗೆ ಫುಡ್ ಸ್ಟಾಲ್ ನಿಲ್ಲಿಸಿದ್ದನ್ನು ನೋಡಿದ್ದೀರಾ? ಇಲ್ಲವಲ್ಲ. ಹೌದು ಎಲ್ಲರಿಗೂ ಕೇಳಿ ಆಶ್ಚರ್ಯವಾಗಿರಬಹುದು. ಹೌದು ಇದು ನಿಜ.
ದಾರಿ ಬದಿಗೆ ಅಂಗಡಿಯನ್ನು ಓಪನ್ ಮಾಡಿದ ಈ ಮಹಿಳೆ ಮೂರು ಕೋಟಿ ರೂಪಾಯಿಗಳ ಮನೆಯಲ್ಲಿರುವ ಆಗರ್ಭ ಶ್ರೀಮಂತಳಿದ್ದಾಳೆ.
ಇಂದು ಇದೇ ಮಹಿಳೆಯ ಬಗ್ಗೆ ತಿಳಿದುಕೊಳ್ಳೋಣ. ಇವಳು ವಾಸಕ್ಕೆ ಇರುವ ಮನೆಯ ಬೆಲೆಯೇ ಸುಮಾರು ಮೂರು ಕೋಟಿಗಳಷ್ಟು, ಆದರೂ ದಾರಿ ಬದಿಗೆ ಒಂದು ಅಂಗಡಿಯನ್ನು ನಡೆಸುತ್ತಾಳೆ. ಇದು ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ ಸತ್ಯವಿದೆ.
ಊರ್ವಶಿ ಯಾದವ ಈ ಮಹಿಳೆಯ ಹೆಸರು ಇದ್ದು, ದೆಹಲಿ ಸಮೀಪದ ಗುರ್ಗಾಂವ್ ನಲ್ಲಿ ಈಕೆ ಮೂರು ಕೋಟಿ ₹ ಗಳ ಬೆಲೆಬಾಳುವ ಮನೆಯಲ್ಲಿ ವಾಸಿಸುವಳು. ಇವಳ ಹತ್ತಿರ SUV ವಾಹನ ಸಹಿತ ಇದೆ. ಇಷ್ಟೆಲ್ಲ ಇದ್ದು ಸಹ ಇವಳು ‘ಛೋಲೇ ಕುಲಚೇ’ (ಉತ್ತರ ಭಾರತದ ಆಹಾರ) ಗಾಡಿಯೊಂದನ್ನು ರಸ್ತೆ ಬದಿಗೆ ಹಚ್ಚಿದ್ದಾಳೆ. ಯಾಕೆ ಗೊತ್ತಾ?
ಸ್ವಂತದ ಕುಟುಂಬದ ಸುರಕ್ಷಿತ ಭವಿಷ್ಯಕ್ಕಾಗಿ ಈಕೆ ಈ ನಿರ್ಣಯವನ್ನು ತೆಗೆದುಕೊಂಡಿದ್ದಾಳೆ. ಒಂದು ದು’ರ್ಘ’ಟನೆಯಲ್ಲಿ ಈಕೆಯ ಪತಿ ಗಂ’ಭೀರ ಗಾಯವಾಗಿ ಶಾರೀರಿಕ ಸಮಸ್ಯೆಗೆ ಒಳಗಾದನು. ಈ ಕಾರಣದಿಂದ ಕುಟುಂಬದ ಮೇಲೆ ದೊಡ್ಡ ಆಪತ್ತು ಎರಗಿತು. ಅದರಲ್ಲೇ ಡಾಕ್ಟರ್ ಆರು ತಿಂಗಳ ನಂತರ ಹಿಪ್ ರಿಪ್ಲೇಸ್ ಮೆಂಟ್ ಹೇಳಿದ್ದರಿಂದ ಅದರ ಸಲುವಾಗಿ ಸಾಕಷ್ಟು ಹಣದ ಅವಶ್ಯಕತೆ ಇತ್ತು. ಹೀಗಾಗಿ ಸ್ವಂತ ತಾನೇ ಏನಾದರೂ ಕೆಲಸ ಮಾಡಬೇಕು ಎಂದು ನಿಶ್ಚಯಿಸಿದಳು. ಕೆಲವು ದಿವಸಗಳವರೆಗೆ ನರ್ಸರಿಯಲ್ಲಿ ಮಕ್ಕಳಿಗೆ ಕಲಿಸುವ ಕೆಲಸ ಮಾಡಿದಳು. ಆದರೆ ದೊರೆಯುವ ಚಿಕ್ಕ ವೇತನದಿಂದ ಮನಸ್ಸು ಬೇರೆ ಕಡೆಗೆ ಹೊರಳಿತು. ಬೇರೆ ಎನಾದರೂ ಹೊಸದನ್ನು ಮಾಡುವ ನಿರ್ಣಯ ತೆಗೆದುಕೊಂಡಳು.
ಊರ್ವಶಿ ಹೇಳುವ ಪ್ರಕಾರ ಇಂದು ನಾವು ಆರ್ಥಿಕವಾಗಿ ಸಬಲರಾಗಿದ್ದೇವೆ, ಆದರೆ ಭವಿಷ್ಯವನ್ನು ಯಾರು ನೋಡಿದ್ದಾರೆ. ಭವಿಷ್ಯದಲ್ಲಿ ನನ್ನ ಕುಟುಂಬಕ್ಕೆ ಯಾವುದೇ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನಾನು ಈ ಹೆಜ್ಜೆಯನ್ನು ಇಟ್ಟಿದ್ದೇನೆ.

ಊರ್ವಶಿಗೆ ಅಡುಗೆ ಮಾಡುವದೆಂದರೆ ತುಂಬಾ ಹವ್ಯಾಸ. ಇದೇ ಹವ್ಯಾಸವನ್ನು ತನ್ನ ಬಿಜಿನೆಸ್ ಐಡಿಯಾದಲ್ಲಿ ಬಳಸುವ ವಿಚಾರ ಮಾಡಿದಳು.
ಊರ್ವಶಿಯ ಪತಿ ಒಂದು ಪ್ರಸಿದ್ಧ ಕಂಪನಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ. ಅವರ ಮಾವ ಭಾರತೀಯ ವಾಯು ಸೇನೆಯಲ್ಲಿಯ ಸೇವಾ ನಿವೃತ್ತ ವಿಂಗ್ ಕಮಾಂಡರ್ ಇದ್ದಾರೆ. 31 ಮೇ 2016 ರಲ್ಲಿ ಅಮಿತ್ ಯಾದವ್ (ಊರ್ವಶಿಯ ಪತಿ) ಒಂದು ದು’ರ್ಘ’ಟನೆಯಲ್ಲಿ ಬಿದ್ದು ಅಪಾಯಕ್ಕೀಡಾದರು. ಮುಂದೆ ಡಾಕ್ಟರ್ ಡಿಸೆಂಬರ್ ತಿಂಗಳವರೆಗೆ ಒಂದು ಸರ್ಜರಿ ಮಾಡಿಸಿಕೊಳ್ಳುವ ಬಗ್ಗೆ ಹೇಳಿದರು. ಈ ಘಟನೆಯ ನಂತರ ದಿನದಿಂದಲೇ ಏನಾದರೂ ಕೆಲಸ ಮಾಡಬೇಕೆನ್ನುವ ಹಂಬಲದಿಂದ ಮೊದಲು ಟೀಚರ್ ಆನಂತರ ಅಲ್ಲಿಯೇ ಒಂದು ಗಿಡದ ಕೆಳಗೆ ಫುಡ್ ಸ್ಟಾಲ್ ಓಪನ್ ಮಾಡಿ ಕೆಲಸ ಶುರು ಮಾಡಿದಳು.
ಭವಿಷ್ಯದಲ್ಲಿ ತನ್ನ ಮಕ್ಕಳಿಗೆ ಶಿಕ್ಷಣದಲ್ಲಿ ಯಾವುದೇ ಅಡತಡೆಗಳು ಬರಬಾರದು, ಕುಟುಂಬಕ್ಕೂ ಹಣದ ತೊಂದರೆಯಾಗಬಾರದು ಎನ್ನುವ ಉದ್ದೇಶವೂ ಊರ್ವಶಿ ಅಪಾರವಾದ ಕಷ್ಟಗಳನ್ನು ಎದುರಿಸುತ್ತಿದ್ದಾಳೆ.
ಮೊದಮೊದಲು ಊರ್ವಶಿಗೆ ಇದರಲ್ಲಿ ಯಶಸ್ಸು ಕಾಣಲು ತುಂಬಾ ಸಂಘರ್ಷ ಮಾಡಬೇಕಾಯಿತು. ಕಾರಣ ಈಕೆಯ ನಿರ್ಣಯಕ್ಕೆ ಮನೆಯಲ್ಲಿ ಎಲ್ಲರ ವಿರೋಧವಿತ್ತು. ಊರ್ವಶಿ ಉಚ್ಛ ಶಿಕ್ಷಿತ ಹಾಗೂ ಸುಸಂಸ್ಕೃತಳಾಗಿದ್ದ ಕಾರಣದಿಂದ ಕುಟುಂಬದಲ್ಲಿಯ ಸದಸ್ಯರು ತುಂಬಾ ಇರೋಧ ದರ್ಶಿಸಿದರು. ಕೊನೆಗೆ ಆಕೆಯ ಹವ್ಯಾಸ ಮತ್ತು ಸಂಸಾರದ ಮೇಲೆ ಬಂದ ಆಪತ್ತು ಇದೆಲ್ಲದರ ವಿಚಾರ ಮಾಡಿ ಸಮ್ಮತಿ ಸೂಚಿಸಿದರು.
ಊರ್ವಶಿಯ ಪ್ರವಾಸ AC ಗಾಡಿಯಲ್ಲಿರುತ್ತಿತ್ತು. ಮಹಿಂದ್ರಾ ಸ್ಕೊರ್ಪಿಯೋ ಹಾಗೂ ಹುಂಡೈ ಕ್ರೇಟಾ ಗಾಡಿಯ ಮಾಲೀಕಳಾಗಿದ್ದು ಈ ರೀತಿ ರಸ್ತೆ ಬದಿಗೆ ಸ್ಟಾಲ್ ಇಡುವದಕ್ಕೆ ವಿರೋಧವಾಗುವದು ಸಹಜವೇ ಸರಿ.
ಊರ್ವಶಿಯ ಮಾವ ಒಂದು ಅಂಗಡಿಯನ್ನು ತೆಗೆದುಕೊಡಲು ತಯಾರಾದರು. ಅದಕ್ಕೆ ಊರ್ವಶಿಯು ಸ್ಪಷ್ಟವಾಗಿ ಬೇಡವೆಂದಳು. ಆಗ ಈ ‘ಛೋಲೆ ಕುಲಚೇ’ ಆಹಾರದ ಸ್ಟಾಲ್ ಒಂದೆರಡು ದಿನಗಳಲ್ಲಿ ಬಂದ್ ಆಗುವದು ಎಂದು ಮನೆಯವರಿಗೆ ವಿಶ್ವಾಸವಿತ್ತು. ಆದರೆ ಆದದ್ದೇ ಬೇರೆ. ಒಂದೆರಡು ತಿಂಗಳಲ್ಲಿ ಊರ್ವಶಿಯು ಮಟರ್ ಕುಲಚೇ ಫುಡ್ ಅಂಗಡಿಗೆ ಪ್ರಚಂಡವಾದ ಮನ್ನಣೆ ಸಿಕ್ಕಿತು. ಊರ್ವಶಿಯೂ ಆರ್ಟ್ ನಲ್ಲಿ ಪದವಿಧರೆಯಾಗಿದ್ದಾಳೆ. ಅರಳು ಹುರಿದಂತೆ ಫಟಾಫಟ್ ಇಂಗ್ಲಿಷ್ ಮಾತುಗಳಿಂದ ಗ್ರಾಹಕರ ಜೊತೆಗೆ ಸಂವಾದ ಸಾಧಿಸಿ ತನ್ನ ಶಿಕ್ಷಣದ ಆಧಾರದ ಮೇಲೆ ಅವರ ಹೃದಯದಲ್ಲಿಸ್ಥಾನ ಗಿಟ್ಟಿಸಿದಳು.

ಊರ್ವಶಿ ಇದರಲ್ಲಿ ಸಮಾಧಾನಕರವಾದ ಯಶಸ್ಸು ಪಡೆದ ನಂತರ ಒಂದು ರೆಸ್ಟಾರೆಂಟ್ ಓಪನ್ ಮಾಡುವ ಸೂಪ್ತ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾರೆ. ಈ ರೀತಿಯಾಗಿ ಇಷ್ಟವಾದ ಕೆಲಸದಿಂದ ಊರ್ವಶಿಗೆ ಆತ್ಮವಿಶ್ವಾಸ ನಿರ್ಮಾಣವಾಯಿತು.
ಪುರುಷರೇ ಆಗಲಿ ಮಹಿಳೆಯರೇ ಆಗಲಿ, ಕೆಲಸ ಯಾವುದೇ ಹೇಗೆ ಇರಲಿ, ಅದನ್ನು ಮನಸ್ಸಿನಿಂದ ಮಾಡಿದರೆ ಅದರಲ್ಲಿ ಯಶಸ್ಸು ಖಚಿತವೆಂದು ಊರ್ವಶಿ ಹೇಳಿಕೊಟ್ಟ ಪಾಠ ಎನ್ನಬಹುದು. ಅಷ್ಟೇ ಅಲ್ಲ ಮನೆಯ ಮೇಲೆ ಎಂಥ ಸಂಕಟ ಬಂದರೂ ಅದಕ್ಕೆ ಮುಖಾಮುಖಿಯಾಗುವ ಧೈರ್ಯ, ಸಾಮರ್ಥ್ಯ, ಛಲ ಮಹಿಳೆಯರಲ್ಲಿಯೂ ಇರುತ್ತದೆ ಎಂಬುದನ್ನು ತೋರಿಸಿಕೊಟ್ಟಳು.
ಒಂದು ಮಾತ್ರ ನಿಜ ತಮಗಿಷ್ಟವಾದ ಕೆಲಸಗಳು ಕೆಲಸವಾಗದೆ ಹವ್ಯಾಸಗಳಾಗುತ್ತವೆ. ಆಗ ಆ ಹವ್ಯಾಸಗಳನ್ನು ಪೂರೈಸುವಾಗ ಮಜಾ ದೊರೆಯುತ್ತದೆ ವಿನಃ ದಣಿವಾಗುವದಿಲ್ಲ… ಅಲ್ವಾ?