ನೀರು ಕುಡಿಯಲು ಬಂದ ಹೆಬ್ಬಾವು, ತಕ್ಷಣ Video ದಲ್ಲಿ ಕಂಡ ದೃಶ್ಯವನ್ನು ನೋಡಿದ ಜನ ತಬ್ಬಿಬ್ಬು!
ನವದೆಹಲಿ: ಸೋಶಿಯಲ್ ಮಿಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ನೀರು ಕುಡಿಯಲು ಬಂದ ಹೆಬ್ಬಾವಿನ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಅದನ್ನು ನೀವು ನೋಡಿದರೆ ನಿಮಗೂ ಆಶ್ಚರ್ಯವಾಗುವದು ಖಚಿತ. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಅಪ್ಲೋಡ್ ಮಾಡಿದ್ದಾರೆ.
ವಿಡಿಯೋದಲ್ಲಿ ನೀರು ಕುಡಿಯಲು ಬಂದ ಹೆಬ್ಬಾವು ಮೊದಲೇ ಯಾವುದೋ ಒಂದು ಪ್ರಾಣಿಯ ಬೇ ಟೆ ಆಡಿತ್ತು. ಅದರಿಂದ ಅದರ ಹೊಟ್ಟೆ ತುಂಬಾ ಉಬ್ಬಿದಂತೆ ಕಾಣುತ್ತಿತ್ತು. ವಿಡಿಯೋದಲ್ಲಿ ಅದರ ಹೊಟ್ಟೆಯನ್ನು ನೋಡಿ ಯೂಜರ್ಸ್ ಗಳು ಒಂದೇ ಪ್ರಶ್ನೆ ಮಾಡುತ್ತಿದ್ದಾರೆ. ಅದೇನೆಂದರೆ ‘ಅದರ ಹೊಟ್ಟೆಯಲ್ಲಿ ಏನಿದೆ? ಎಂದು.
A huge python after a meal to cool itself… pic.twitter.com/OwvmAmEyjk
— Susanta Nanda IFS (@susantananda3) July 14, 2020
ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋವನ್ನು ಇದುವರೆಗೆ 10 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಲೈಕ್ಸ್ ಕೂಡಾ ಸಾಕಷ್ಟು ಬಂದಿವೆ. ಆದರೆ ಈ ವಿಡಿಯೊ ಎಲ್ಲಿಯದು ಎಂಬುದು ಮಾತ್ರ ಗೊತ್ತಾಗಿಲ್ಲ.