ಮೊದಲ ಬಾರಿಗೆ ಐಸ್ಕ್ರೀಂ ತಿಂದ ನಂತರ ಬೆಕ್ಕಿನ ಸಖತ್ ರಿಯಾಕ್ಷನ್ ಒಮ್ಮೆ ನೋಡಿ..!

ವೈರಲ್ ವೀಡಿಯೊ…ತುಂಟ ಕಾಮಿ ಬೆಕ್ಕು ಮೊದಲ ಬಾರಿಗೆ ಆಯಸ್ಕ್ರೀಮ್ ತಿಂದ ನಂತರದ ರಿಯಾಕ್ಷನ್ ಸ್ವಲ್ಪ್ ನೋಡಿ.

ಸೋಶಿಯಲ್ ಮಿಡಿಯಾದಲ್ಲಿ ಹೊಸ ಹೊಸ ಟ್ರೆಂಡ್ ಗಳು ಬರುತ್ತಲಿರುತ್ತವೆ. ಆಗ ಅವು ಸತತವಾಗಿ ವೈರಲ್ ಆಗುತ್ತಲೇ ಇರುತ್ತವೆ. ಹೀಗೆಯೇ ಒಂದು ವಿಡಿಯೋ ಸಖತ್ ವೈರಲ್ ಆಗಿದೆ. ಆಯಸ್ಕ್ರೀಮ್ ಯಾರಿಗೆ ಇಷ್ಟವಿಲ್ಲ ಹೇಳಿ? ನಾವೆಲ್ಲರೂ ಇಷ್ಟದಿಂದ ತಿಂತೀವಿ. ಆದರೆ ಇಲ್ಲಿ ನಮ್ಮಲ್ಲರ ಮನೆಯೊಳಗಿನ ಪ್ರೀತಿಯ ಪ್ರಾಣಿ ಬೆಕ್ಕು ಮೊದಲ ಬಾರಿಗೆ ಆಯಸ್ಕ್ರೀಮ್ ತಿಂದ ನಂತರದ ರಿಯಾಕ್ಷನ್ ಮಾತಿನಲ್ಲಿಯಂತೂ ಹೇಳಕ್ಕೆ ಆಗಲ್ಲ, ನೀವೇ ವೀಡಿಯೊ ನೋಡಿ.

ಒಬ್ಬ ಟ್ವೀಟರ್ ಯೂಜರ್ ಬೆಕ್ಕಿಗೆ ಮೊದಲ ಬಾರಿಗೆ ಆಯಸ್ಕ್ರೀಮ್ ತಿನ್ನಿಸುವ ದೃಶ್ಯ ವಿಡಿಯೋದಲ್ಲಿ ಶೇರ್ ಮಾಡಿದ್ದಾನೆ. ಈ ವೀಡಿಯೋದಲ್ಲಿ ಬೆಕ್ಕು ಒಂದು ಚೇರ್ ಮೇಲೆ ಕುಳಿತಿದೆ. ಅದರ ಮಾಲೀಕ ಅದಕ್ಕೆ ಸ್ಪೂನ್ ನಿಂದ ಆಯಸ್ಕ್ರೀಮ್ ತಿನ್ನಿಸುತ್ತಾನೆ. ಆಗ ಮೊದಲು ಅದೇನೆಂದು ನೋಡಿ ಆಮೇಲೆ ತಂಪಾದ ಆಯಸ್ಕ್ರೀಮ್ ಬಾಯಲ್ಲಿ ಹೊದ ನಂತರ ಅದು ಕೊಟ್ಟ ರಿಯಾಕ್ಷನ್ ಸುಪರ್ರೋ ಸುಪರ್ರು. ಅದನ್ನು ನೋಡಿ ನಿಮಗೂ ನಗು ಬರದೆ ಇರದು.

ಈ ವೀಡಿಯೊವನ್ನು ಇಲ್ಲಿಯವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ನೋಡಿದ್ದಾರೆ. ಜೊತೆಗೆ ಲೈಕ್ಸ್ ಗಳು ಸಾಕಷ್ಟು ಬಂದಿವೆ. ಅದರ ಜೊತೆಗೆ ವೀಡಿಯೊ ಬಗ್ಗೆ ಪ್ರತಿಕ್ರಿಯೆಗಳು ಸಹಿತ ಸಂಮ್ಮಿಶ್ರವಾಗಿ ಬಂದಿವೆ. ಕೆಲವರು ಪ್ರಾಣಿಗಳಿಗೆ ಕೊಡುವ ಈ ರೀತಿಯ ಹಿಂಸೆಗಳ ಬಗ್ಗೆ ಕೋಪ ವ್ಯಕ್ತ ಮಾಡಿದ್ದಾರೆ, ಇನ್ನು ಕೆಲವರು ತಮಾಷೆಯಾಗಿ ತೆಗೆದುಕೊಂಡಿದ್ದಾರೆ.