Video: ಹಸು ಮಾರಾಟ ಮಾಡಿದ ನಂತರ ನಡು ರಸ್ತೆಯಲ್ಲಿ ಗೂಳಿಯ ರಂಪಾಟ! ಕೊನೆಗೆ ಎರಡನ್ನೂ ಒಂದು ಗೂಡಿಸಿದ ಡೆಪ್ಯುಟಿ CM ಮಗ!

ಈ ಪ್ರೇಮಕಥೆ ಒಂದು ಹಸು ಮತ್ತು ಗೂಳಿಯದಿದೆ. ಇವೆರಡು ಅನೇಕ ವರ್ಷಗಳಿಂದ ಕೂಡಿರುತ್ತಿದ್ದವು. ಒಂದು ದಿನ ಹಸುವಿಗೆ ಮಾರಾಟ ಮಾಡಲಾಯಿತು. ಹಸುವನ್ನು ಕೊಂಡ ಹೊಸ ಮಾಲೀಕ ಮಿನಿ ಟ್ರಕ್ ನಲ್ಲಿ ಜೊತೆಗೆ ತೆಗೆದುಕೊಂಡು ಹೋಗುವಾಗ ಯಾಕೋ ಗೂಳಿಗೆ ಇದು ಸಹನೆಯಾಗಲಿಲ್ಲ. ಅದು ವಾಹನದ ಹಿಂದೆ ಬೆನ್ನಟ್ಟಲಾರಂಭಿಸಿತು.

ಗೂಳಿಯ ಹೆಸರು ಮಂಜಮಲಿ ಇದ್ದು ಅದು ಮಧುರೈನ ಪಾಲಾಮೇದು ಮಂದಿರಕ್ಕೆ ಸೇರಿದ್ದಿದೆ. ಅದರ ಜೊತೆಗೆನೇ ಲಕ್ಷ್ಮಿ ಹೆಸರಿನ ಹಸು ಬೆಳೆದು ದೊಡ್ಡದಾಗಿದೆ. ಲಕ್ಷ್ಮಿ ಹಸುವಿನ ಮಾಲೀಕನಾದ ಮುನಿಯಾಂದಿ ಹಸುವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಮಾರಬೇಕಾಯಿತು ಹಸು

ಲಾಕ್ ಡೌನ್ ನಲ್ಲಿ ಮುನಿಯಾಂದಿ ಆರ್ಥಿಕ ಸಮಸ್ಯೆಗೆ ತುತ್ತಾದನು. ಆದ್ದರಿಂದ ತನ್ನ ಹಸುವನ್ನು 20,000 ₹ ಗಳಿಗೆ ಮಾರಿದನು. ಖರೀದಿ ಮಾಡಿದ ಹಸುವನ್ನು ಜೊತೆಗೆ ಕರೆದೊಯ್ಯಲು ಮಿನಿ ಟ್ರಕ್ ನಲ್ಲಿ ಏರಿಸಲಾಯಿತು. ಈ ದೃಶ್ಯವನ್ನು ನೋಡಿದ ಮಂಜಮಲಿ ಗೂಳಿ ಓಡಿ ಬಂದು ವಾಹನಕ್ಕೆ ಅಡ್ಡಲಾಗಿ ನಿಂತು ಬಿಟ್ಟಿತು. ಸುಮಾರು ಒಂದು ಗಂಟೆಯ ತನಕ ರೋಡ್ ಬ್ಲಾಕ್ ಮಾಡಿತು.

ಬೆನ್ನಟ್ಟಿತು ಗೂಳಿ ಹಸು ಏರಿದ ವಾಹನದ ಹಿಂದೆ.

ಸಾಕಷ್ಟು ಪ್ರಯತ್ನದ ನಂತರ ವಾಹನಕ್ಕೆ ಹೋಗಲು ದಾರಿ ಸಿಕ್ಕಾಗ, ಗೂಳಿಯೂ ಅದರ ಹಿಂದೆ ಸುಮಾರು ಒಂದು ಕಿಲೋ ಮೀಟರ್ ತನಕ ಹಿಂದೆ ಹಿಂದೆ ಬೆನ್ನಟ್ಟಿ ಹೋಯಿತು. ಕೊನೆಗೆ ದಣಿವಾಗಿ ಸೋತು ವಾಹನದ ಹಿಂದೆ ಓಡುವದನ್ನು ಬಿಟ್ಟಿತು.

ಸೋಶಿಯಲ್ ಮಿಡಿಯಾದಲ್ಲಿ ವೀಡಿಯೊ ವೈರಲ್…

ಒಬ್ಬ ವ್ಯಕ್ತಿಯು ಈ ಎಲ್ಲ ಘಟನೆಯ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾನೆ. ಭಾವನಿಕವಾದ ಈ ವೀಡಿಯೋ ನೋಡನೋಡುವಷ್ಟರಲ್ಲಿ ವೈರಲ್ ಆಗಿದೆ.

ಡೆಪ್ಯೂಟಿ CM ಅವರ ಮಗ ಈ ಹಸು ಮತ್ತು ಗೂಳಿಯನ್ನು ಕೂಡಿಸಿದರು.

ಈ ಘಟನೆಯ ಮಾಹಿತಿ ತಮಿಳುನಾಡಿನ ಉಪಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಅವರ ಮಗ ಓ.ಪಿ. ಜಯಪ್ರದೀಪ್ ಅವರಿಗೆ ಗೊತ್ತಾಯಿತು. ಜಯಪ್ರದೀಪ್ ಅವರು ಸಂಬಂಧಪಟ್ಟ ವ್ಯಕ್ತಿ, ಅಂದರೆ ಹಸುವನ್ನು ಖರೀದಿಸಿದ ವ್ಯಕ್ತಿಗೆ ಶೋಧಿಸಿ ಆತನಿಂದ ಮರಳಿ ಹಸುವನ್ನು ಖರೀದಿಸಿ ಆತನಿಗೆ ತಾವೇ ಸ್ವತಃ ಹಣವನ್ನು ಕೊಟ್ಟು ಅದರ ಮೊದಲಿನ ಮೂಲ ಸ್ಥಾನಕ್ಕೆ ಕರೆದೊಯ್ದು ಬಿಡಲು ವ್ಯವಸ್ಥೆ ಮಾಡಿಸಿದರು.