ಬಾಯಾರಿಕೆ ತಾಳಲಾಗದೆ ನೀರಿಗಾಗಿ ವ್ಯಕ್ತಿಯ ಮುಂದೆ ಕೈ ಚಾಚುತ್ತಿರುವ ಅಳಿಲು! ವಿಡಿಯೋ ವೈರಲ್!

ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಹೃದಯಕ್ಕೆ ನಾಟುವಂಥ ವೀಡಿಯೊ ಒಂದು ವೇಗದಲ್ಲಿ ವೈರಲ್ ಆಗುತ್ತಿದೆ. ಅದನ್ನು ನೋಡಿ ನಿಮ್ಮ ಮೊಗದಲ್ಲೂ ಹಾಸ್ಯ ತೇಲಾಡುವದು.

ನೀರಡಿಸಿದ ಅಳಿಲಿಗೆ ತಿರುಗಾಡುವಾಗ ವ್ಯಕ್ತಿಯೊಬ್ಬನ ಕೈಯಲ್ಲಿ ನೀರಿನ ಬಾಟಲ್ ಕಾಣಿಸಿದೆ. ಅದು ಆತನ ಹತ್ತಿರ ಹೋಗಿ ತನ್ನೆರಡು ಕೈಗಳನ್ನೆತ್ತಿ ನೀರು ಬೇಡಲು ಶುರು ಮಾಡಿತು. ವ್ಯಕ್ತಿ ಬಾಟಲ್ ಕೆಳಗೆ ಮಾಡಿದಾಗ ಅಳಿಲು ಬಾಟಲ್ ನಲ್ಲಿಯ ನೀರೆಲ್ಲ ಕುಡಿದು ಖಾಲಿ ಮಾಡಿ ಅಲ್ಲಿಂದ ಓಡಿ ಹೋಯಿತು.

ವೀಡಿಯೋದಲ್ಲಿ ಅಳಿಲು ವ್ಯಕ್ತಿಯ ಕಡೆಗೆ ಹೋಗಿ ತನ್ನ ಕೈಗಳಿಂದ ವ್ಯಕ್ತಿಗೆ ನೀರು ಕುಡಿಸಲು ಮನವಿ ಮಾಡುವ ದೃಶ್ಯ, ಅದರ ಭಾವನೆ ಸ್ಪಷ್ಟವಾಗಿ ಕಂಡು ಬರುತ್ತದೆ. ವ್ಯಕ್ತಿ ನೀರು ಕುಡಿಸವದಕ್ಕಾಗಿ ಬಾಗಿದ ನಂತರ ಅಳಿಲು ಎರಡು ಕಾಲುಗಳ ಮೇಲೆ ನಿಂತು ಬಾಟಲಿಗೆ ತನ್ನ ಬಾಯಿಯನ್ನು ತಾಗಿಸಿ ನಿಧಾನವಾಗಿ ನೀರು ಕುಡಿಯುತ್ತದೆ. ಈ ವಿಡಿಯೋವನ್ನು ಟ್ವೀಟರ್ ನಲ್ಲಿ IFS ಅಧಿಕಾರಿ ಸುಶಾಂತ್ ನಂದಾ ಅವರು ಶೇರ್ ಮಾಡಿದ್ದಾರೆ, ಮತ್ತು ತುಂಬಾ ವೈರಲ್ ಆಗುತ್ತಿದೆ. ಇದನ್ನು ಜುಲೈ 16 ರಂದು ರಾತ್ರಿ ಶೇರ್ ಮಾಡುತ್ತ ಅದಕ್ಕೆ ಒಂದು ಕ್ಯಾಪ್ಶನ್ ಬೇರೆ ಕೊಟ್ಟಿದ್ದಾರೆ. ‘ಅಳಿಲು ನೀರು ಬೇಡುತ್ತಿರುವಾಗ’..

ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು 3 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. 15 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು 3 ಸಾವಿರ ಮೇಲ್ಪಟ್ಟು ರೀಟ್ವೀಟ್ ಗಳು ಬಂದಿವೆ. ಟ್ವೀಟರ್ ನಲ್ಲಿ ಜನರು ನೀರು ಕುಡಿಸಿದ ವ್ಯಕ್ತಿಯನ್ನು ತುಂಬಾ ಹೊಗಳುತ್ತಿದ್ದಾರೆ.