ಗಂಡನಿಗೆ ವಿಚ್ಚೇದನ ಕೊಟ್ಟು 20 ವರ್ಷದ ಮಲ ಮಗನೊಂದಿಗೆ ಮದುವೆಯಾದ ಸೋಶಿಯಲ್ ಮೀಡಿಯಾ ಸ್ಟಾರ್! ಅಭಿಮಾನಿಗಳು ಫುಲ್ ಗರಂ!
ಮಾಸ್ಕೊ- ರಶಿಯಾದ ಸೋಶಿಯಲ್ ಮಿಡಿಯಾ ಸ್ಟಾರ್ ತನ್ನ ಪತಿಯೊಂದಿಗೆ ವಿಚ್ಛೇದನ ಪಡೆದುಕೊಂಡು ತನ್ನದೇ 20 ವರ್ಷದ ಮಲಮಗನೊಂದಿಗೆ (ಸ್ಟೆಪ್ ಸನ್) ಮದುವೆ ಮಾಡಿಕೊಂಡಿದ್ದಾಳೆ. 35 ವರ್ಷದ ಮರಿನಾ ಬಲಮಶೆವಾ ಅವರು 10 ವರ್ಷಗಳ ಹಿಂದೆ ಎಲೆಕ್ಸಿ ಐರೆಯವರೊಂದಿಗೆ ವಿವಾಹ ವಾಗಿದ್ದಳು. ಹಾಗೂ ಆಕೆ ತನ್ನ ಪತಿ ಹಾಗೂ ಮಲ ಮಗನೊಂದಿಗೆ ವಾಸವಾಗಿದ್ದಳು. ಈಗ ಮರಿನಾಳು ತನ್ನ ಪತಿ ಐರೆಗೆ ಡೈವೋರ್ಸ್ ಕೊಟ್ಟು ತನ್ನದೇ ಮಲಮಗನಾದ ವ್ಲಾದಿಮೀರ ನೊಂದಿಗೆ ವಿವಾಹವಾಗಿದ್ದಾಳೆ. ಸದ್ಯಕ್ಕೆ ರಶಿಯಾದಲ್ಲಿ ಮರಿನಾ ಅವರ ಈ ಮದುವೆಯ ಕುರಿತು ತುಂಬಾ ಚರ್ಚೆ ನಡೆಯುತ್ತಿದೆ ಅಲ್ಲದೆ ಜನ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಮರಿನಾಳ ಹೇಳಿಕೆಯ ಪ್ರಕಾರ, ಡೈವೋರ್ಸ್ ನಂತರ 20 ವರ್ಷದ ಮಲಮಗನಾದ ವ್ಲಾದಿಮೀರನೊಂದಿಗೆ ಲವ್ ಆಯಿತು, ಮತ್ತು ನಾವಿಬ್ಬರು ಮದುವೆ ಮಾಡಿಕೊಳ್ಳುವ ನಿರ್ಣಯ ತಗೆದುಕೊಂಡಿದ್ದೇವೆ. ಅಷ್ಟೇ ಅಲ್ಲ ಸದ್ಯಕ್ಕೆ ಮರಿನಾಳು ಗರ್ಭವತಿಯಾಗಿದ್ದು ವ್ಲಾದಿಮೀರ ಅವರ ಮಗುವಿಗೆ ಜನ್ಮ ನೀಡಲು ಸಿದ್ದಾಳಾಗಿದ್ದೇನೆಂದು ಸ್ವತಃ ಮರಿನಾ ತಿಳಿಸಿದ್ದಾಳೆ. ಡೇಲಿ ಮೇಲ್ ನಲ್ಲಿ ಪ್ರಕಟಿಸಿದ ಒಂದು ವರದಿಯ ಪ್ರಕಾರ ಮರಿನಾಳು ಮೊದಲೇ ಮದುವೆ ಮಾಡಿಕೊಳ್ಳಬೇಕು ಎಂದಿದ್ದಳಂತೆ. ಆದರೆ ಕೋರೊನಾದಿಂದಾಗಿ ಅವರು ನಾಲ್ಕು ತಿಂಗಳ ಕಾಲ ಕಾಯಬೇಕಾಯಿತು. ಈ ಮದುವೆಯಲ್ಲಿ ವ್ಲಾದಿಮೀರ ಅವರ ತಂದೆ ಹಾಗೂ ಮರಿನಾ ಅವರ ಪೂರ್ವಪತಿ ಸಹ ಸೇರಿದ್ದರು.
ಮರಿನಾ ಅವರು ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಪ್ರಸಿದ್ಧಳಾಗಿದ್ದಾಳೆ.
ಸೋಶಿಯಲ್ ಮೀಡಿಯಾ ಪ್ಲೇಟಫಾರ್ಮಗಳಲ್ಲಿ ಒಂದಾದ ಇನ್ಸ್ಟ್ರಾಗ್ರಾಮ್ ದಲ್ಲಿ ಮರಿನಾ ತುಂಬಾ ಪ್ರಸಿದ್ಧವಾಗಿದ್ದಾಳೆ. ಅವಳಿಗೆ 4.2 ಲಕ್ಷಕ್ಕಿಂತ ಹೆಚ್ಚು ಫಾಲೋರ್ಸ್ ಇದ್ದಾರೆ. ಆದರೆ ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಮರಿನಾಳ ವಿರುದ್ಧ ಆಂದೋಲನ ನಡೆದಿದೆ. ಸೋಶಿಯಲ್ ಮೀಡಿಯಾದಲ್ಲಿಯ ಜನರು ಈ ವಿಚಾರ ಮಾಡುತ್ತಿದ್ದಾರೆ ಅದೇನೆಂದರೆ, 10 ವರ್ಷಗಳ ವರೆಗೆ ತಾಯಿಯ ಹಾಗೆ ಜೊತೆಗಿದ್ದು ನಂತರ ಆತನ ಜೊತೆಗೆ ಮದುವೆ ಯಾಗುವದು ತುಂಬಾ ತಪ್ಪಾಗುತ್ತದೆ ಎಂದು ಜನರು ಆಲೋಚನೆ ಮಾಡುತ್ತಿದ್ದಾರೆ. ಮರಿನಾ ಅವರು ಐರೆಯವರೊಂದಿಗೆ 2007 ರಲ್ಲಿ ಮದುವೆ ಯಾಗಿದ್ದರು ಆ ಸಮಯದಲ್ಲಿ ವ್ಲಾದಿಮೀರ ಅವರು ಸುಮಾರು 10 ವರ್ಷದವನಾಗಿದ್ದ.
ಮರಿನಾಳು ಕಳೆದ ವಾರದಲ್ಲಿ ವ್ಲಾದಿಮೀರ ಅವರೊಂದಿಗೆ ಮದುವೆ ಯಾಗುವ ಕುರಿತು ಘೋಷಣೆ ಮಾಡಿದ್ದಳು, ಮತ್ತು ಇನ್ಸ್ಟಾ ಅಕೌಂಟ್ ನಲ್ಲಿ ಒಂದು ವೀಡಿಯೊ ಹಾಗೂ ಕೆಲವು ಫೋಟೋಗಳು ಶೇರ್ ಮಾಡಿದ್ದಳು. ಅದರ ಜೊತೆಗೆ ವ್ಲಾದಿಮೀರ ಹಾಗೂ ಮರಿನಾ ಅವರು ಆದಷ್ಟು ಬೇಗ ಒಂದು ಬೇಬಿಗೆ ತಂದೆ ತಾಯಿ ಯಾಗುವವರಿದ್ದೇವೆ ಎಂದು ತಿಳಿಸಿದ್ದಾರೆ. ಮರಿನಾ ಅವರು ತಮ್ಮ ತೂಕ ಕಡಿಮೆ ಮಾಡುವ ಒಂದು ಪ್ರವಾಸದ ವಿಡಿಯೋ ಶೇರ್ ಮಾಡುತ್ತಾ ಡಾಕ್ಯುಮೆಂಟರಿ ಯಲ್ಲಿ ಕೆಲಸ ಮಾಡಿದ್ದರು. ಅದರಿಂದ ಅವರು ತುಂಬಾ ಚರ್ಚೆಯಲ್ಲಿ ಬಂದಿದ್ದರು. ಇಬ್ಬರ ಸೋಶಿಯಲ್ ಮಿಡಿಯಾದ ಪೋಸ್ಟಗಳನ್ನು ಸಾಕಷ್ಟು ಶೇರ್ ಮಾಡಲಾಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಡಾಕ್ಯುಮೆಂಟ್ ಮೇಲೆ ಸಹಿ ಮಾಡುತ್ತಿದ್ದಾರೆ ಹಾಗೆ ಇಬ್ಬರು ಮದುವೆಯ ಸಂಭ್ರಮ ಆಚರಿಸುತ್ತಿರುವದನ್ನು ಕಾಣಬಹುದು.