Note Ban ಮಾಡಿದ ನಾಲ್ಕು ವರ್ಷಗಳ ನಂತರ ಹಳೆಯ ನೋಟುಗಳನ್ನು ತೆಗೆದುಕೊಂಡು ಬ್ಯಾಂಕಿಗೆ ಹೋದ ವ್ಯಕ್ತಿ! ಬ್ಯಾಂಕಿನವರು…

ತಮಿಳುನಾಡಿನ ಇರೋಡ್ ಜಿಲ್ಲೆಯಲ್ಲಿ ಅಗರಬತ್ತಿ ಮಾರುವ ಅಂಧ ವ್ಯಕ್ತಿ ತಾನು ಜೀವನದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿದ 24,000 ರೂಪಾಯಿಗಳು ಸದ್ಯಕ್ಕೀಗ ಯಾವ ಬೆಲೆಯಿಲ್ಲದ ಕಾಗದದ ಚೂರುಗಳಾಗಿವೆ ಎಂಬುದನ್ನು ತಿಳಿದು ಏನು ಮಾಡಬೇಕೆಂದು ತಿಳಿಯದೆ ಗರಬಡಿದವಂತಾಗಿದ್ದಾನೆ. ಕಾರಣ ಆತ ಕಷ್ಟಪಟ್ಟು ಸಂಪಾದಿಸಿ ಉಳಿತಾಯ ಮಾಡಿಟ್ಟಿದ್ದ ನೋಟುಗಳೆಲ್ಲ ಹಳೆಯ 500 ರ ಮತ್ತು 1000 ದ ಬ್ಯಾನ್ ಮಾಡಿದ ನೋಟುಗಳಾಗಿವೆ.

ಸುದುರ್ ಪೋಠಿಯಾ ಮೊಪನೂರ್ ನಿವಾಸಿಯಾದ ಸೋಮು ಹಣವನ್ನು ಬ್ಯಾಂಕಿನಲ್ಲಿ ಜಮೆ ಮಾಡಲು ಹೋದಾಗ ಈ ವಿಷಯ ತಿಳಿದು ಆತನಿಗೆ ಶಾಕ್ ಆಗಿದೆ. ಆತ ಹೇಳುವ ಪ್ರಕಾರ ನವೆಂಬರ್ 2016 ರಲ್ಲಿ ಮಾಡಿದ ನೋಟ್ ಬಂದಿಯ ಬಗ್ಗೆ ಆತನಿಗೆ ಗೊತ್ತೇ ಆಗಿಲ್ಲವಂತೆ. ತನ್ನ ತಾಯಿ ಉಳಿತಾಯ ಮಾಡಿಟ್ಟಿದ್ದ ಹಣವನ್ನು ಸೋಮು ಕಳೆದ ಶುಕ್ರವಾರ ಬ್ಯಾಂಕಿನಲ್ಲಿ ಭರಿಸಲು ಹೋದಾಗ ಮೇಲಿನ ವಿಷಯ ತಿಳಿದು ಹತಾಶನಾಗಿದ್ದಾನೆ.

ಕೊರೊನ ಕಾರಣದಿಂದ ಕಳೆದ ನಾಲ್ಕು ತಿಂಗಳಿಂದ ಗಳಿಕೆಯಾಗಿಲ್ಲವಾದ್ದರಿಂದ ಮತ್ತು ಕೈಯಲ್ಲಿ ಹಣವಿಲ್ಲದ ಕಾರಣ ತನ್ನ ಅಮ್ಮನ ಹತ್ತಿರ ನಾಲ್ಕು ವರ್ಷಗಳ ಹಿಂದೆ ಉಳಿತಾಯ ಮಾಡಿಟ್ಟಿದ್ದ ಹಣವನ್ನು ಈಗ ಹೊರಗೆ ತೆಗೆದಿದ್ದೇನೆಂದು ಶನಿವಾರ ಆತ ಪತ್ರಕರ್ತರಿಗೆ ಹೇಳಿದನು.

ಅಮ್ಮನ ಹತ್ತಿರದ ಉಳಿತಾಯ ಮಾಡಿಟ್ಟಿದ್ದ ಹಣವನ್ನು ತೆಗೆದು ತನಗೆ ಬೇಕಾದಷ್ಟನ್ನು ಇಟ್ಟುಕೊಂಡು ಉಳಿದ ಹಣವನ್ನು ಬ್ಯಾಂಕಿಗೆ ಭರಿಸಬೇಕೆಂದು ಹೋದಾಗ ಅಲ್ಲಿಯ ಬ್ಯಾಂಕ್ ಅಧಿಕಾರಿಗಳು ಹೇಳಿದರು, ‘ಈ ನೋಟ್ ಗಳು ಸದ್ಯಕ್ಕೆ ಚಾಲ್ತಿಯಲ್ಲಿಲ್ಲ, ಇವು ನಾಲ್ಕು ವರ್ಷಗಳ ಹಿಂದೆಯೇ ಬಂದ್ ಮಾಡಲಾಗಿದೆ ಎಂದು.

ಸೋಮು ಮತ್ತು ಆತನ ಹೆಂಡತಿ ಕಳೆದ 10 ವರ್ಷಗಳಿಂದ ತಮ್ಮೂರಿನ ಸುತ್ತಮುತ್ತಲ ಊರುಗಳನ್ನು ಸುತ್ತಿ ಅಗರಬತ್ತಿ ಮತ್ತು ಕರ್ಪೂರವನ್ನು ಮಾರಿ ಕಷ್ಟಪಟ್ಟು ಸಂಪಾದಿಸಿ ಕೂಡಿಟ್ಟ ಹಣ ಇದಾಗಿತ್ತು. ಪ್ರತಿ ವಾರ ಅದರಲ್ಲಿಂದ ತಮ್ಮ ಜೊತೆಗೆ ಇರುವ ತಾಯಿಗೆ ಸ್ವಲ್ಪ ಹಣವನ್ನು ಕೊಡುತ್ತಿದ್ದ. ಆ ಹಣವನ್ನು ತಾಯಿ ತನ್ನ ಹತ್ತಿರ ಸುರಕ್ಷಿತವಾಗಿಟ್ಟುಕೊಳ್ಳುತ್ತಿದ್ದಳು.

ಸೋಮುನ ತಾಯಿ ನಿಯಮಿತವಾಗಿ ಆ ಹಣವನ್ನು 500 ರ ಅಥವಾ 1000 ರೂಪಾಯಿಯ ನೋಟಿನಲ್ಲಿ ಬದಲಾವಣೆ ಮಾಡುತ್ತಿದ್ದಳು. ಈ ಮೂವರಿಗೂ ಐದನೂರರ ಮತ್ತು ಸಾವಿರದ ನೋಟುಗಳು ಬಂದ್ ಆಗಿದ್ದು ಗೊತ್ತೇ ಇಲ್ಲ.

ಸದ್ಯಕ್ಕೆ ಸೋಮು ತಮಿಳುನಾಡಿನ ಮುಖ್ಯಮಂತ್ರಿಯವರಿಗೆ ಒಂದು ಸಂದೇಶವನ್ನು ಕಳುಹಿಸಿದ್ದಾನೆ ಹಾಗೂ ಅವರಿಂದ ಸಹಾಯ ಕೇಳಿದ್ದಾನೆ. ಪೊಲೀಸರು ಈ ವಿಷಯದಲ್ಲಿ ತನಿಖೆ ನಡೆಸುವ ಮಾತನ್ನು ಆಡಿದ್ದಾರೆ.

ಸೋಮು ಸ್ವತಃ ಅಂಧನಾಗಿದ್ದರೂ ಯಾರ ಹಂಗಿಗೆ ಬಿದ್ದು ಜೀವನ ನಡೆಸದೆ ಸ್ವಾವಲಂಬಿಯಾಗಿ ಅಗರಬತ್ತಿಗಳನ್ನು ಮತ್ತು ಕರ್ಪೂರವನ್ನು ಮಾರಿ ಬಂದ ಹಣದಲ್ಲಿ ತನ್ನ ಜೀವನ ನಡೆಸುತ್ತಾನೆ. ಮುಖ್ಯಮಂತ್ರಿಗಳು ಸೋಮುಗೆ ಸರಿಯಾಗಿ ಸ್ಪಂದಿಸಿ ಆತನಿಗೆ ಅನುಕೂಲಕರವಾದ ನಿರ್ಣಯ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ.

ಇದೇ ರೀತಿ ಕಳೆದ ವರ್ಷವೂ ಸಹಿತ ಇಂತಹುದೇ ಒಂದು ಪ್ರಕರಣ ತಿರುಪುರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿತ್ತು. ಅಲ್ಲಿ ಇಬ್ಬರೂ ಹಿರಿಯ ಸಹೋದರಿಯರಿಗೆ ನೋಟ್ ಬ್ಯಾನ್ ಮಾಡಿದ ಸುದ್ದಿ ಗೊತ್ತೇ ಆಗಿರಲಿಲ್ಲ. ಅವರ ಜೀವನ ಪೂರ್ತಿ ಗಳಿಸಿಟ್ಟ 46 ಸಾವಿರ ರೂಪಾಯಿಗಳ ಉಳಿತಾಯದ ಹಣದಲ್ಲಿ ಬರೀ 500 ರ ಮತ್ತು 1000 ದ ಬ್ಯಾನ್ ಆದ ನೋಟುಗಳೇ ಇದ್ದವು.