ಮದುವೆಯಾದ 15 ದಿನಗಳಲ್ಲೇ ಗೊತ್ತಾಯಿತು 2 ತಿಂಗಳ ಗರ್ಭವತಿ ಎಂದು! ಅದರ ಹಿಂದಿನ ಸತ್ಯ ಗೊತ್ತಾದ ಮೇಲೆ ಗಂಡ….
ಪ್ರತಿಯೊಬ್ಬನ ಜೀವನದಲ್ಲಿ ಮಹತ್ವದ ಮತ್ತು ಶೃಂಗಾರಿಕ ಜೀವನದ ಕನಸುಗಳನ್ನು ನನಸು ಮಾಡಿ ಅವುಗಳನ್ನು ಅನುಭವಿಸುವ ಸುಂದರವಾದ ಘಟ್ಟವೆಂದರೆ ಮದುವೆ. ಅದನ್ನು ಪ್ರತಿಯೊಬ್ಬ ವ್ಯಕ್ತಿ ಕಾತುರದಿಂದ ಕಾಯ್ದಿರುತ್ತಾನೆ.
ಮದುವೆಯಾದ ಮೇಲೆ ವೈವಾಹಿಕ ಜೀವನ ನಡೆಸುತ್ತ ಮನೆಯಲ್ಲಿ ತನ್ನದೇ ಆದ ಒಂದು ಮಗು ಓಡಾಡಬೇಕು ಎಂದು ಮನಸು ನಿಧಾನವಾಗಿ, ಒಂದು ಜೀವಿ ತನ್ನ ಉದರದಿಂದ ಹುಟ್ಟಿ ಬರುವ ದಾರಿ ಕಾಯಲು ಶುರು ಮಾಡುತ್ತಾನೆ. ಈ ಶುಭ ಸುದ್ದಿ ಮನೆಯವರಿಗೆ 9 ತಿಂಗಳ ನಂತರ ಬಂದರೆ ಚೆನ್ನಾಗಿರುತ್ತದೆ, ಇಲ್ಲವಾದರೆ…..
ಉತ್ತರ ಪ್ರದೇಶದಲ್ಲಿಯ ಬುಲಂದಶಹರ್ ನಲ್ಲಿ ವಾಸಿಸುವ ಒಂದು ಕುಟುಂಬದಲ್ಲಿ ಮದುವೆಯಾಗಿ ಹದಿನೈದೇ ದಿನಗಳಲ್ಲಿ ಎರಡು ತಿಂಗಳ ಗರ್ಭವತಿ ಎಂಬುದು ಗೊತ್ತಾಯಿತು. ಮಹಿಳೆಯ ಪತಿಗೆ ಈ ವಿಷಯ ಗೊತ್ತಾದ ಮೇಲೆ ಆತ ನಿಜಕ್ಕೂ ಜರ್ಜರಿತನಾದನು. ಆ ನಂತರ ಆತ ಏನು ಮಾಡಿದ ನೋಡಿ.
ಇಬ್ಬರ ಮದುವೆ ಸಿಕಂದರಬಾದ್ ಹತ್ತಿರದ ಒಂದು ಹಳ್ಳಿಯಲ್ಲಿ ಸರಳವಾಗಿ ನಡೆದಿತ್ತು. ಮದುವೆ ಚೆನ್ನಾಗಿಯೂ ಆಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಹೊಟ್ಟೆನೋವು ಶುರುವಾಯಿತು.
ಈ ಪರಿಸ್ಥಿತಿಯಲ್ಲಿ ಗಂಡ ತನ್ನ ಪತ್ನಿಯನ್ನು ಡಾಕ್ಟರ್ ಕಡೆಗೆ ಒಯ್ದನು. ಅಲ್ಲಿ ಆಕೆಯ ರಿಪೋರ್ಟ್ ನೋಡಿ ಬೆಚ್ಚಿ ಬಿದ್ದಿದ್ದಾನೆ. ಡಾಕ್ಟರ್ ಯುವಕನಿಗೆ ಹೇಳಿದರು, ನಿಮ್ಮ ಹೆಂಡತಿ ಎರಡು ತಿಂಗಳ ಗರ್ಭವತಿ ಇದ್ದಾಳೆ ಎಂದು. ಇದನ್ನು ಕೇಳಿ ಆತನಿಗೆ ಮನಸ್ಸಿಗೆ ತುಂಬಾ ವೇದನೆಯಾಯಿತು. ಮತ್ತು ಆಕೆಯ ಗರ್ಭದ ಕಾರಣವನ್ನೂ ತಾನಾಗಿಯೇ ತಿಳಿದುಕೊಂಡನು.
ಪತಿ ಪತ್ನಿಗೆ ಕೇಳಿದ, 15 ದಿನಗಳಲ್ಲಿ ನೀನು ಎರಡು ತಿಂಗಳ ಗರ್ಭವತಿ ಹೇಗೆ ಎಂದಾಗ ಪತ್ನಿ ತನ್ನ ಹಳೆಯ ರಹಸ್ಯವನ್ನು ಬಿಚ್ಚಿಟ್ಟಳು. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ತನ್ನ ಹಳೆಯ ಪ್ರಿಯಕರನದ್ದಾಗಿದೆ ಎಂದು ತನ್ನ ಗಂಡನಿಗೆ ಹೇಳಿದಳು. ಮಹಿಳೆ ಹೇಳುವ ಪ್ರಕಾರ ಆಕೆಯ ಪ್ರಿಯಕರ ಮೂಲತಃ ಅಲೀಗಡ್ ದವನಾಗಿದ್ದು ಸದ್ಯಕ್ಕೆ ಆತ ತನ್ನ ತಂಗಿಯ ಹತ್ತಿರ ಸಿಕಂದರಾಬಾದ್ ನಲ್ಲಿರುತ್ತಾನೆ.
ಯಾವಾಗ ತನ್ನ ಹೆಂಡತಿಯ ಹೊಟ್ಟೆಯಲ್ಲಿಯ ಮಗು ತನ್ನದಲ್ಲದೆ ಬೇರೆ ಯಾರದೋ ಅಂತ ತಿಳಿದಾಗ ನಿಜಕ್ಕೂ ಆತ ತುಂಬಾ ನೋವಿಗೆ ಒಳಗಾದನು. ಆತ ಆ ಮಹಿಳೆಯ ಜೊತೆಗೆ ಪೊಲೀಸ್ ಸ್ಟೇಶನ್ ಮೆಟ್ಟಲೇರಿದನು. ಗಂಡ ಆಕೆಗೆ ತನ್ನ ಹತ್ತಿರ ಇಟ್ಟುಕೊಳ್ಳಲು ತಯಾರಿರಲಿಲ್ಲ, ಮಹಿಳೆ ತನ್ನ ತವರಿಗೆ ಹೋಗಲು ತಯಾರಿಲ್ಲ. ಕಾರಣ ಆಕೆ ಹೇಳುವ ಪ್ರಕಾರ, ಈ ಅವಸ್ಥೆಯಲ್ಲಿ ತಾನು ತವರಿಗೆ ಹೋದರೆ ತನ್ನ ತಂದೆ ತನಗೆ ಮುಗಿಸಿಯೇ ಬಿಡುತ್ತಾರೆಂಬ ಭ ಯವಿತ್ತು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳೆ ಸದ್ಯಕ್ಕೆ ಜಿಲ್ಲಾ ಆಸ್ಪತ್ರೆಯ ಜ್ಯೋತಿ ಕೇಂದ್ರದಲ್ಲಿದ್ದಾಳೆ. ಇಲ್ಲಿ ಈ ಮಹಿಳೆಯ ರಕ್ಷಣೆ ಮಾಡುವ ಸಲುವಾಗಿ ಒಬ್ಬಳು ಮಹಿಳಾ ಪೊಲೀಸ್ ಪೇದೆ ಜೊತೆಗಿದ್ದಾಳೆ. ದೊರೆತ ಮಾಹಿತಿಯ ಆಧಾರದ ಮೇಲಿಂದ ಪೊಲೀಸರು ಆಕೆಯ ಪ್ರಿಯಕರನಿಗೆ ಫೋನ್ ಮಾಡಿ ಬರಲು ಹೇಳಿದ್ದರೂ ಸಹಿತ ಆತ ಇನ್ನೂ ಆಕೆಯನ್ನು ಭೆಟ್ಟಿಯಾಗಲು ಬಂದಿಲ್ಲ. ಮಹಿಳಾ ಪೊಲೀಸ್ ಇನ್ಚಾರ್ಜ್ ಲಕ್ಷ್ಮಿ ಸಿಂಹ ಮಹಿಳೆಯ ಹೇಳಿಕೆಯನ್ನು ನೋಂದಾಯಿಸಿ ಕೊಂಡಿದ್ದಾರೆ. ಈಕೆಯ ಗಂಡ ಮತ್ತು ಇವಳು ಇಬ್ಬರೂ ಪೊಲೀಸ್ ಠಾಣೆಯಲ್ಲಿದ್ದಾಗ ತುಂಬಾ ಜೋರಾಗಿ ವಾದಗಳು ಸಹಿತ ನಡೆದವು.
ನಿಜವಾಗಿಯೂ ಇಂಥ ಘಟನೆಗಳು ಯಾವುದೇ ವ್ಯಕ್ತಿಯ ಮನಸ್ಸು ಮುರಿದು ಬಿಡುತ್ತವೆ. ಮದುವೆಯ ಮೊದಲು ಗಂಡನ ಹತ್ತಿರ ಆಕೆಯ ಬಗ್ಗೆ ಇಂಥ ಈ ರೀತಿಯ ಯಾವುದೇ ಮಾಹಿತಿ ಇಲ್ಲದ ಕಾರಣ, ಆತ ಆಕೆಯನ್ನು ಒಪ್ಪಿಕೊಂಡು ಮದುವೆಯಾದ. ಈಗ ಆತನಿಗೆ ತನ್ನ ಹೆಂಡತಿಯ ಹೊಟ್ಟೆಯಲ್ಲಿ ಬೇರೊಬ್ಬನ ಮಗು ಇರುವದು, ಆತನಿಗೆ ಸಹನೆಯಾಗದ ಕಾರಣ ಈ ಮದುವೆಗೆ ಆತ ಮನ್ನಣೆ ಕೊಡುವದಿಲ್ಲ, ಮತ್ತು ತಕ್ಷಣ ನಮ್ಮಿಬ್ಬರ ಈ ಮದುವೆಯನ್ನು ಮುರಿಯಬೇಕು ಎಂದು ಪೊಲೀಸರಲ್ಲಿ ವಿನಂತಿಸಿದ್ದಾನೆ.