ಮಳೆಯಲ್ಲಿ ರೆಕ್ಕೆಯಿಂದ ಕೋಳಿಗೆ ಆಸರೆ ಕೊಟ್ಟ ಹುಂಜ! ಜನರಂತಿದ್ದಾರೆ, ‘ನಿಜವಾದ ಪ್ರೀತಿ’ ಅಂದ್ರೆ ಇದು! ನೋಡಿ ಈ ಸಖತ್ ವಿಡಿಯೋ!

ಮನುಷ್ಯ ತಮಗೆ ಇಷ್ಟವಾದವರನ್ನು ಪ್ರೀತಿಯಿಂದ ಕಾಳಜಿಯಿಂದ ನೋಡಿಕೊಳ್ಳುವದು ಆತನ ಗುಣದಲ್ಲಿಯೇ ಬಂದಿದೆ. ಅಷ್ಟೇ ಅಲ್ಲ ತನಗಿಷ್ಟವಾದವರಿಗೆ ಯಾವುದೇ ಸಂಕಟ ಬಂದರೂ ತುಂಬಾ ಮುತುವರ್ಜಿ ವಹಿಸಿ, ಅವರ ಕಷ್ಟ ದೂರ ಮಾಡಲು ಹೆಣಗಾಡುವನು. ಈ ಗುಣ ಬರೀ ಮನುಷ್ಯರಲ್ಲೇ ಇದೆ ಎಂದರೆ ಶುದ್ಧ ತಪ್ಪಾಗುವದು. ಯಾಕೆಂದರೆ, ಪ್ರತಿಯೊಂದು ಜೀವರಾಶಿ ತನ್ನ ಸಂಗಾತಿ ಅಥವಾ ತನಗೆ ಇಷ್ಟವಾದ ಜೊತೆಗಾರನ ಬಗ್ಗೆ ಕಾಳಜಿ ವಹಿಸುವ ಅನೇಕ ವಿಡಿಯೋಗಳನ್ನು ನೀವು ಮೊದಲೇ ನೋಡಿರಬೇಕು. ಇದೇ ವಿಷಯಕ್ಕೆ ಸಂಬಂಧ ಪಟ್ಟ ವೀಡಿಯೊಂದನ್ನು ನಾವಿಲ್ಲಿ ನೋಡುವಾ.

ಇಂಡಿಯನ್ ಫಾರೆಸ್ಟ್ ಆಫೀಸರ್ ಸುಶಾಂತ್ ನಂದಾ ಅವರು ವನ್ಯಜೀವಿಗಳ ಜೀವನದ ವಿವಿಧ ಬಗೆಯ ವಿಡಿಯೋಗಳನ್ನು ಶೇರ್ ಮಾಡುವದರಲ್ಲಿ ಎತ್ತಿದ ಕೈ.

ಅವರು ಶೇರ್ ಮಾಡಿದ ಹುಂಜ ಮತ್ತು ಕೋಳಿಯ ಮಳೆಯಲ್ಲಿನ ವೀಡಿಯೊ ಮನುಷ್ಯನಿಗೆ ನೋಡಿದ ಕೂಡಲೇ ಹೃದಯಸ್ಪರ್ಶಿಯಾಗುವ ಸೆನ್ಸಿಟಿವ್ ವೀಡಿಯೋನೆ ಅಂತ ಹೇಳಬಹುದು.

ಮಳೆಯಲ್ಲಿ ಹುಂಜ ಮತ್ತು ಕೋಳಿ ಎರಡು ಸಂಗಾತಿಗಳು ತಿರುಗಾಡುವಾಗ ಹುಂಜ ತನ್ನ ಸಂಗಾತಿಗೆ ಮಳೆಯಿಂದ ರಕ್ಷಿಸಲು ತನ್ನ ರೆಕ್ಕೆಯೊಂದನ್ನು ಬಿಚ್ಚಿ ಕೋಳಿಗೆ ಆಸರೆಯಾಗಿ ಹೊದಿಕೆಯಂತೆ ಕವರ್ ಮಾಡುತ್ತದೆ. ನಿಜಕ್ಕೂ ತನ್ನ ಸಂಗಾತಿಯ ಬಗೆಗಿದ್ದ ಪ್ರೀತಿ, ಕಾಳಜಿ ಎತ್ತಿ ತೋರಿಸುವ ಸುಂದರ ವೀಡಿಯೊ ಅಮೋಘವಾದದ್ದೇ ಸರಿ.