ಕೊರೊನಾ ಪ್ರಸಾರ ತಡೆಗಟ್ಟುವಲ್ಲಿ N-95 ಮಾಸ್ಕ್ ಫೇಲ್! ರಾಜ್ಯ ಮತ್ತು ಕೇಂದ್ರಶಾಸಿತ ಪ್ರದೇಶಗಳಿಗೆ ‘ಕೇಂದ್ರ’ದಿಂದ ಸೂಚನೆ!

ಕೊರೊನಾ ಪ್ರಸಾರ ತಡೆಗಟ್ಟುವಲ್ಲಿ N-95 ಮಾಸ್ಕ್ ಫೇಲ್! ರಾಜ್ಯ ಮತ್ತು ಕೇಂದ್ರಶಾಸಿತ ಪ್ರದೇಶಗಳಿಗೆ ‘ಕೇಂದ್ರ’ದಿಂದ ಸೂಚನೆ!

ದಿನಂಪ್ರತಿ ಹೆಚ್ಚುತ್ತಿರುವ ಕೊರೊನ ಮಹಾಮಾರಿಯನ್ನು ತಡೆಗಟ್ಟಲು ಸರಕಾರದ ಜೊತೆಗೆ ವಿವಿಧ ಸಂಘ ಸಂಸ್ಥೆಗಳು ಅನೇಕ ಮಾರ್ಗೋಪಾಯಗಳನ್ನು ಹುಡುಕುತ್ತಲೇ ಇವೆ. ಕೊರೊನದಿಂದ ಬಚಾವಾಗಲು N-95 ಮಾಸ್ಕ್ ಉಪಯೋಗಿಸುವದು ತುಂಬಾ ಆವಶ್ಯಕವೆನಿಸಿತ್ತು. ಹೀಗಾಗಿ N-95 ಮಾಸ್ಕ್ ಗಳು ಒಂದು ಸಮಯ ಜನರಿಗೆ ಸಿಗುವದೇ ಕಠಿಣವಾಗಿತ್ತು.

ಇಂಥದ್ದರಲ್ಲಿ ಭಾರತ ಸರಕಾರದ ಆರೋಗ್ಯ ಸೇವೆಯ ಮಹಾಸಂಚಾಲಕರಾದ ಡಾ.ರಾಜೀವ್ ಗರ್ಗ್ ಇವರು ರಾಜ್ಯ ಮತ್ತು ಕೇಂದ್ರ ಶಾಸಿತ ಪ್ರದೇಶಗಳಿಗೆ ಪತ್ರ ಬರೆದು ಸೂಚನೆಯೊಂದನ್ನು ಕೊಟ್ಟಿದ್ದಾರೆ. ಸರಕಾರದ ಹೊಸ ಮಾಹಿತಿಯ ಪ್ರಕಾರ N-95 ಮಾಸ್ಕ್ ಇದು ಕೋರೊನದ ಪ್ರಸಾರ ತಡೆಯುವಲ್ಲಿ ಅಯಶಸ್ವಿಯಾಗಿದೆ, ಕಾರಣ N-95 ಮಾಸ್ಕ್ ಬಾಯಿಯಿಂದ ಕೊರೊನ ವಿಷಾಣುವಿಗೆ ಹೊರಗೆ ಹಾಕುವದನ್ನು ತಡೆಯುವದಿಲ್ಲ.

ದೇಶದಲ್ಲಿ ಕೊರೊನ ಸಂಸರ್ಗ ವೇಗದಿಂದ ಹಬ್ಬುತ್ತಲೇ ಇದೆ. ಹೀಗಾಗಿ ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ರೋಗಿಗಳ ಸಂಖ್ಯೆ 12 ಲಕ್ಷದ ಸಮೀಪ ಬಂದಿದೆ, ಹಾಗೂ ಸಾವಿನ ಸಂಖ್ಯೆ 27 ಸಾವಿರಕ್ಕೆ ತಲುಪಿದೆ.

ಜಗತ್ತಿನಲ್ಲಿ ಸದ್ಯಕ್ಕೆ ಭಾರತ ಈಗ ಕೊರೊನ ಸಂಕ್ರಮಿತರ ಸಂಖ್ಯೆಯಲ್ಲಿ ಮೂರನೆಯ ಸ್ಥಾನದಲ್ಲಿದೆ. ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಅದರಲ್ಲಿ ಮಹಾರಾಷ್ಟ್ರ ದೇಶದಲ್ಲಿಯೇ ಅತೀ ಹೆಚ್ಚು ಸಂಕ್ರಮಿಕ ರಾಜ್ಯವಾಗಿದೆ. ಬರೀ ಮಹಾರಾಷ್ಟ್ರದಲ್ಲಿಯೇ ಈ ಸಂಖ್ಯೆ ಮೂರು ಲಕ್ಷದ ಗಡಿ ದಾಟಿದೆ. ಅದರ ನಂತರ ತಮಿಳುನಾಡು ಮತ್ತು ದೆಹಲಿಯಲ್ಲಿ ಹೆಚ್ಚು ಸಂಸರ್ಗವಾಗಿದೆ.