Viral Video: ಕಾಡಿನಲ್ಲಿ ಹೈಕಿಂಗ್ ಮಾಡಲು ಹೋಗಿದ್ದ 3 ಜನ ಹುಡುಗಿಯರು, ಆಕಸ್ಮಿಕವಾಗಿ ಒಮ್ಮೆಲೇ ಹಿಂದಿನಿಂದ ಕರಡಿ ಬಂದು…

ಮೆಕ್ಸಿಕೋ ಸಿಟಿ:- ಮೆಕ್ಸಿಕೋದ ಸೈನ್ ಪೆದ್ರೋ ಗಾರ್ಜಾ ಗ್ರೇಸಿಯಾ ಪಟ್ಟಣದ ಏಕೋಲಾಜಿಕಲ್ ಪಾರ್ಕ್ ನಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ ಅದು ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಇಲ್ಲಿ ತಿರುಗಾಡುವ ಸಲುವಾಗಿ ಬಂದ ಮೂರು ಮಹಿಳೆಯರು ಕಾಡಿನಲ್ಲಿ ಹೈಕಿಂಗ್ ಮಾಡುತ್ತಿದ್ದರು. ಆಗ ಆಕಸ್ಮಿಕವಾಗಿ ಹಿಂದಿನಿಂದ ಒಂದು ಕಪ್ಪು ಬಣ್ಣದ ಕರಡಿ ಬಂದಿತು. ಯುವತಿಯರು ಮಾತುಕತೆಯಲ್ಲಿ ನಿರತರಾಗಿದ್ದರು ಆದರೆ ಕರಡಿ ತುಂಬಾ ಸಾವಕಾಶವಾಗಿ ಅವರ ಸಮೀಪ ಬಂದು ಅವರಲ್ಲಿಯ ಎಲ್ಲಕ್ಕಿಂತ ಹಿಂದಿದ್ದ ಮಹಿಳೆಯನ್ನು ತನ್ನ ಎರಡು ಕಾಲುಗಳ ಮೇಲೆ ನಿಂತು ಕೊಂಡು ವಾಸನೆ ತಗೆದುಕೊಳ್ಳಲು ಶುರು ಮಾಡಿತು.

ವಾಸನೆ ತಗೆದುಕೊಂಡು ಕರಡಿ ಮರಳಿ ಹೋಯಿತು.

ವಿಡಿಯೋದಲ್ಲಿ ನಾವು ಸಹಜವಾಗಿ ಕಾಣಬಹುದು, ಕರಡಿ ಮೊದಲು ಹುಡುಗಿಯ ವಾಸನೆ ನೋಡುತ್ತದೆ, ತದನಂತರ ಮತ್ತೆ ಅವಳ ಮುಂದೆ ಬಂದು ಸ್ವಲ್ಪ ವಾಸನೆ ತಗೆದುಕೊಳ್ಳುತ್ತದೆ. ಆದರೆ ಹುಡುಗಿ ತುಂಬಾ ಶಾಂತಚಿತ್ತವಾಗಿ ನಿಂತ ಜಾಗದಲ್ಲೇ ನಿಲ್ಲುತ್ತಾಳೆ. ಸ್ವಲ್ಪ ಸಮಯದ ನಂತರ ಕರಡಿ ಮರಳಿ ತನ್ನ ದಾರಿ ಹಿಡಿದು ಹೋಗುತ್ತದೆ. ಈ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಅನೇಕ ದಿಗ್ಗಜರು ಶೇರ್ ಮಾಡಿದ್ದಾರೆ ಮತ್ತು ಆ ಹುಡುಗಿಯ ಧೈರ್ಯಕ್ಕೆ ಮೆಚ್ಚುಗೆ ನೀಡುತ್ತಿದ್ದಾರೆ. ಬಾಸ್ಕೆಟ್ ಬಾಲ್ ಪ್ಲೇಯರ್ ರೆಕ್ಸ್ ಚೈಪಮೈನ್ ಅವರು ಬರೆದಿದ್ದಾರೆ, ‘ ಈ ಹುಡುಗಿಯು ತುಂಬಾ ಅದ್ಭುತವಾಗಿದ್ದಾಳೆ ಅವಳು ನನ್ನ ಟೀಮ್ ನಲ್ಲಿರಬೇಕಾಗಿತ್ತು”, ಎಂದು ಬರೆದಿದ್ದಾರೆ, ಕರಡಿ ಸಾಮಾನ್ಯವಾಗಿ ಇಷ್ಟು ಶಾಂತವಾಗಿರುವದಿಲ್ಲ. ಈ ಕರಡಿಗೆ ಹಸಿವು ಆಗಿರಲಿಲ್ಲ ಒಂದು ವೇಳೆ ಹಸಿದಿದ್ದರೆ ಕಥೆಯೇ ಬೇರೆ ಯಾಗುತ್ತಿತ್ತು, ಎಂದೂ ಸಹ ಬರೆದಿದ್ದಾರೆ.