ಹುಲಿಯ ದಾರಿಗೆ ಅಡ್ಡ ಬಂದ ಹೆಬ್ಬಾವು! ಹುಲಿ ತೆಗೆದುಕೊಂಡ ನಿರ್ಣಯ ಮೆಚ್ಚಿದ ನೆಟ್ಟಿಗರು!

ಈ ಜಗತ್ತೇ ರಹಸ್ಯಮಯದಿಂದ ತುಂಬಿದೆ. ಸೌರಮಂಡಲದಲ್ಲಿ ಎಷ್ಟು ರಹಸ್ಯಗಳಿವೆಯೇ,ಅಷ್ಟೇ ರಹಸ್ಯಗಳು ಪೃಥ್ವಿಯ ಮೇಲಿರುವ ಕಾಡುಗಳಲ್ಲಿಯೂ ಸಹ ಇವೆ. ನಾವು ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ ಕಾಡಿನಲ್ಲಿ ಯಾವಾಗ, ಏನು ಮತ್ತು ಹೇಗೆ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ದಟ್ಟವಾದ ಕಾಡಿನಲ್ಲಿ ಹುಲಿಯ ರಾಜ್ಯ ನಡೆಯುತ್ತದೆ, ಆದರೆ ಹೆಬ್ಬಾವು ಕೂಡಾ ತುಂಬಾ ಭಯಾನಕವಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮಿಡಿಯಾದಲ್ಲಿ ಒಂದು ಹುಲಿ ಮತ್ತು ಹೆಬ್ಬಾವಿನ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ನೋಡಿ ಸೋಶಿಯಲ್ ಮಿಡಿಯಾದ ಯುಜರ್ಸ್ ತುಂಬಾ ಆಶ್ಚರ್ಯಗೊಂಡಿದ್ದಾರೆ.

ಈ ವಿಡಿಯೋವನ್ನು ಐಎಫ್ಎಸ್ ಅಫೀಸರ್ ಸುಶಾಂತ್ ನಂದಾ ಅವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡುತ್ತಾ ಕ್ಯಾಪ್ಶನ್ ನಲ್ಲಿ,’ ಟೈಗರ್ ಹೆಬ್ಬಾವನ್ನು ನೋಡಿ ತನ್ನ ದಾರಿಯನ್ನೇ ಬದಲಿಸಿತು”. ಈ ಕ್ಯಾಪ್ಶನ್ ದಂತೆಯೇ ಟೈಗರ್ ಹಾಗೂ ಹೆಬ್ಬಾವಿನ ಭ’ಯಾನಕ ವಿಡಿಯೋ ಇದಾಗಿದೆ. ಈ ವಿಡಿಯೋದ ಜನಪ್ರಿಯತೆ ತುಂಬಾ ಹೆಚ್ಚಾಗುತ್ತಿದೆ, ಶೇರ್ ಮಾಡಿದ ಕೇವಲ ಎರಡು ಗಂಟೆಗಳಲ್ಲಿ ಈ ವಿಡಿಯೋವನ್ನು 11 ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ನೀವೂ ನೋಡಿ ವಿಡಿಯೋ…….

ನೀವು ಈ ವಿಡಿಯೋ ನೋಡಿ ತುಂಬಾ ಆಶ್ಚರ್ಯ ಗೊಂಡಿರಬಹುದು, ನಿಖರವಾಗಿ ಇದೇ ತರಹ ಜನರು ಸಹ ಈ ವಿಡಿಯೋ ನೋಡಿ ಶಾ’ಕ್ ಆಗಿದ್ದಾರೆ. ಅಲ್ಲದೆ ಕೆಲವು ಜನರು ಕಾಮೆಂಟ್ ನಲ್ಲಿ, ‘ಟೈಗರ್ ತಗೆದುಕೊಂಡ ಈ ನಿರ್ಧಾರ ತುಂಬಾ ಒಳ್ಳೆಯದಾಗಿದೆ’ ಎಂದಿದ್ದಾರೆ. ನಾವು ಮನುಷ್ಯರು ಸಹ ಇದರಿಂದ ಏನಾದರೂ ಕಲಿಯಬೇಕು, ಎಂದೂ ಬರೆದಿದ್ದಾರೆ. ಟ್ವಿಟ್ಟರ್ ಯುಜರ್ ಗೀತಾ ದೇವಿಯವರು ಹೇಳುತ್ತಾರೆ, “ಮನುಷ್ಯನೂ ಸಹಿತ ಇದರಿಂದ ಏನಾದರೂ ಪಾಠ ಕಲಿಯಬೇಕಾಗಿದೆ”.