ಮಾಸ್ಕ್ ಧರಿಸದೆ ಇದ್ದರೆ..? ಕಿಮ್ ಜೊಂಗ್ ನಿಂದ ಬಂತು ಜನರಲ್ಲಿ ನಡುಕ ಹುಟ್ಟಿಸುವ ಹೊಸ ಆದೇಶ!
ಪ್ಯೊಂಗ್ ಯಾಂಗ್: ಅಮೆರಿಕೆಯ ನ್ಯೂಜ್ ಸೈಟ್ ರೇಡಿಯೋ ಫ್ರೀ ಏಷಿಯಾದ ರಿಪೋರ್ಟ್ ಪ್ರಕಾರ, ಉತ್ತರ ಕೊರಿಯಾದಲ್ಲಿ ಕೋರೊನದ ಪ್ರಸಾರವನ್ನು ತಡೆಗಟ್ಟಲು ತುಂಬಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ
ಹಾಗೆ ನೋಡಲಾಗಿ ಉತ್ತರ ಕೋರಿಯಾದಲ್ಲಿ ಕೊರೊನ ಸಂಕ್ರಮಣದ ಬಗ್ಗೆ ವಿಶೇಷ ಸುದ್ದಿಗಳು ಮಾಧ್ಯಮದಲ್ಲಿ ಇಲ್ಲಿಯವರೆಗೆ ಜಾಸ್ತಿ ಬಂದಿಲ್ಲ. ಆದರೆ ಚೀನಾಗೆ ಹತ್ತಿದ ಉತ್ತರ ಕೊರಿಯಾದ ಪ್ರದೇಶದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಸೋಂಕು ತಗುಲಿರುವದು ಖಾತರಿಯಾದ ನಂತರ ಕಿಮ್ ಸರಕಾರ ಒಮ್ಮೆಲೇ ಎಚ್ಚೆತ್ತುಕೊಂಡಿತು.
ಒಂದು ಸುದ್ದಿ ಮೂಲದ ಪ್ರಕಾರ ಜುಲೈ ಮೊದಲ ವಾರದಲ್ಲಿ ಕಿಮ್ ಜಾಂಗ್ ಮಹತ್ವದ ಮೀಟಿಂಗ್ ನಡೆಸಿದರು. ಇದರಲ್ಲಿ ಕೊರೊನವನ್ನು ಹತ್ತಿಕ್ಕಲು ತೆಗೆದುಕೊಳ್ಳುವ ಉಪಾಯಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಇದೇ ಸಮಯಕ್ಕೆ ಕೆಲವು ಅಧಿಕಾರಿಗಳ ಮೇಲೆಯೂ ಕಿಮ್ ಆಕ್ಷನ್ ತೆಗೆದುಕೊಂಡಿದ್ದಾರೆ. ಕಾರಣ ಕೊರೊನದ ಪ್ರಸಾರವನ್ನು ತಡೆಯಲು ಅವರು ಯೋಗ್ಯವಾದ ಕ್ರಮ ತೆಗೆದುಕೊಂಡಿಲ್ಲ. ಈ ಎಲ್ಲ ಕಾರಣಗಳಿಂದ ಕಿಮ್ ತನ್ನ ದೇಶದಲ್ಲಿ ತುಂಬಾ ಕಠಿಣ ಕ್ರಮವನ್ನು ತೆಗೆದುಕೊಳ್ಳುವ ಸೂಚನೆ ಕೊಟ್ಟಿದ್ದಾರೆ.
3 ತಿಂಗಳು ಕೂಲಿ ಕಾರ್ಮಿಕನಂತೆ ದುಡಿಯುವ ಶಿಕ್ಷೆ!
ಇನ್ನು ಮುಂದೆ ಉತ್ತರ ಕೋರಿಯಾದಲ್ಲಿ ಮಾಸ್ಕ್ ಧರಿಸದ ಯಾರೇ ಇದ್ದರೂ ಅವರಿಗೆ 3 ತಿಂಗಳುಗಳ ವರೆಗೆ ಕೂಲಿ ಕಾರ್ಮಿಕನಂತೆ ದುಡಿಯುವ ಕಠಿಣ ಶಿಕ್ಷೆ ಕೊಡಲಾಗುವುದು ಎಂದು ಕಿಮ್ ಜೊಂಗ್ ಆದೇಶ ಜಾರಿ ಮಾಡಿದ್ದಾರೆ. ಸರ್ವಾಧಿಕಾರಿ ಕಿಮ್ ಜಾಂಗ್ ನ ಈ ಆದೇಶದಿಂದ ಜನರಲ್ಲಿ ಆತಂಕ ಮೂಡಿದರೂ ಕಿಮ್ ವಿರುದ್ಧ ಯಾರೊಬ್ಬರೂ ಯಾಕೆ? ಎಂದು ಪ್ರಶ್ನೆ ಕೇಳುವ ಧೈರ್ಯ ಮಾಡುವದಿಲ್ಲ. ಅದರ ಪರಿಣಾಮ ಏನಾಗುತ್ತೆ ಎಂಬುದು ಎಲ್ಲರಿಗೂ ಗೊತ್ತು.
ಉತ್ತರ ಕೋರಿಯಾದಲ್ಲಿ ಸದ್ಯಕ್ಕೆ ಈ ಆದೇಶ ಜಾರಿಯಲ್ಲಿ ತರಲು ಪೊಲೀಸರ ಜೊತೆಗೆ ಕಾಲೇಜ್ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳ ತಂಡವನ್ನು ನೇಮಕ ಮಾಡಲಾಗಿದೆ. ಈ ತಂಡವು ಸುತ್ತಾಡುತ್ತ ಎಲ್ಲರ ಮೇಲೂ ದೃಷ್ಟಿ ಇಡಲಿದೆ. ಮಾಸ್ಕ್ ಧರಿಸದ ವ್ಯಕ್ತಿ ಏನಾದರೂ ಕಂಡು ಬಂದರೆ ಆ ವ್ಯಕ್ತಿಯ ಮೇಲೆ ಕ್ರಮ ಕೈಗೊಳ್ಳಲಾಗುವದು. ಕೊರೊನದ ಪ್ರಸಾರ ವೇಗದಲ್ಲಿ ಆಗುತ್ತಿರುವದರಿಂದ ಈ ನಿಯಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರಕಾರದ ವತಿಯಿಂದ ಹೇಳಲಾಗಿದೆ. ಈ ನಿಯಮದ ಉಲ್ಲಂಘನೆ ಮಾಡಿದವರಿಗೆ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವದು. ಅವರು ಯಾರೇ ಆಗಿರಲಿ ಅವರಿಗೆ ಶಿಕ್ಷೆ ಬಿಟ್ಟಿದ್ದಲ್ಲ.