ರೋಗ ಪ್ರತಿಕಾರಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಸೂಚಿಸಿದ ಉಪಾಯಗಳು!

ಜಗತ್ತಿನಲ್ಲಿ ಕೊರೊನ ಎಂಟ್ರಿಯಾಗಿ ಆರು ತಿಂಗಳುಗಳ ಮೇಲ್ಪಟ್ಟು ಆಯಿತು. ಇನ್ನೂವರೆಗೆ ಅದರ ಮೇಲೆ ಹೇಳಿಕೊಳ್ಳುವಂಥಹ ಯಾವುದೇ ಲಸಿಕೆ ಉಪಲಬ್ಧವಾಗಿಲ್ಲ. ಹೀಗಾಗಿ ಈ ಮಹಾಮಾರಿಯಿಂದ ನಾವು ಉಳಿಯ ಬೇಕಾದರೆ, ಒಂದೇ ಒಂದು ಮಹತ್ವದ ಉಪಾಯ ನಾವು ಸುರಕ್ಷಿತವಾಗಿ ಇರಬೇಕು, ಅದು ಹೇಗೆಂದರೆ ನಮ್ಮ ರೋಗ ಪ್ರತಿಕಾರಕ ಶಕ್ತಿ ಸಮೃದ್ಧವಾಗಿರಬೇಕು. ಇದು ಸರಿಯಾಗಿ ಇದ್ದರೆ ಕೊರೊನ ಆದ್ದದ್ದು ಗೊತ್ತಾಗಲ್ಲ ಮತ್ತು ಅದು ಕಡಿಮೆ ಯಾವಾಗ ಆಯಿತು ಇದು ಸಹಿತ ನಮಗೆ ತಿಳಿಯುವದೂ ಇಲ್ಲ.

ಕೊರೊನ ಈ ಶ್ವಾಸಕ್ಕೆ ಸಂಬಂಧಿಸಿದ ರೋಗದ ಜೊತೆಗೆ ಹೇಗೆ ಹೋರಾಡಬೇಕೆಂದು, ಕೇಂದ್ರದ ಆಯುಷ್ ಇಲಾಖೆಯಿಂದ ಕೆಲವು ಮಹತ್ವಪೂರ್ಣ ಹಾಗೂ ಉಪಯುಕ್ತ ಮಾರ್ಗದರ್ಶಕ ಸೂಚನೆಗಳನ್ನು ಪಾಲಿಸಲು ಹೇಳಿದೆ. ಅವು ಯಾವವು ಎಂಬುದನ್ನು ನೋಡೋಣ.

1)ಶ್ವಸನ ಕ್ರಿಯೆಗೆ ಸಂಬಂಧಿಸಿದ ಕೊರೊನ ರೋಗ ಕಡಿಮೆಯಾಗಲು ದಿನಾಲು ಪ್ರಾಣಾಯಾಮ ಮತ್ತು ಧ್ಯಾನ ಮಾಡುವದು ಒಳ್ಳೆಯದು. ದಿನಂಪ್ರತಿ 30 ನಿಮಿಷ ಇದಕ್ಕಾಗಿ ಕಾಯ್ದಿಸಿದರೆ ನಿಶ್ಚಿತವಾಗಿ ಲಾಭದಾಯಕ ಪರಿಣಾಮ ದೊರೆಯುವದು.

2)ದಿನದ ಪ್ರಾರಂಭ ಒಂದು ಚಮಚ ಚ್ಯವನಪ್ರಾಶ ಸೇವಿಸಿ ಶುರು ಮಾಡಿ.

3)ಮಧುಮೇಹದ ತೊಂದರೆ ಇದ್ದವರೂ ಶುಗರ್ ಫ್ರೀ ಚ್ಯವನಪ್ರಾಶ ತೆಗೆದುಕೊಳ್ಳಬಹುದು.

4)ದಿನವಿಡೀ ಕುಡಿಯುವ ನೀರನ್ನು ಸ್ವಲ್ಪ ಬಿಸಿ ಮಾಡಿಕೊಂಡೇ ಸೇವಿಸಿ.

5) ಹಾಲಿನಲ್ಲಿ ಸ್ವಲ್ಪ ಅರಿಶಿಣ ಕೂಡಿಸಿ ಕುಡಿಯುತ್ತಿರಿ. ಹಾಲು ಪೌಷ್ಟಿಕಾಂಶಗಳಿಂದ ಸಮೃದ್ಧಿಯಾಗಿದೆ ಮತ್ತು ಅರಿಶಿಣ ಇದು ಜಂತುನಾಶಕದಂತೆ ಕೆಲಸ ಮಾಡುತ್ತದೆ.

6) ಆಹಾರದಲ್ಲಿ ಅರಿಶಿಣ, ಜೀರಿಗೆ, ಬೆಳ್ಳುಳ್ಳಿ, ಧನಿಯಾ ಪುಡಿ ಇವುಗಳನ್ನು ಅವಶ್ಯವಾಗಿ ಉಪಯೋಗಿಸಿ.

7) ಹರ್ಬಲ್ ಟೀ ಅಥವಾ ಕಷಾಯವನ್ನೇ ಸೇವಿಸಿ.

8) ಕಷಾಯದಲ್ಲಿ ಕರಿಮೆಣಸಿನಪುಡಿ, ತುಳಸಿ, ದಾಲ್ಚಿನ್ನಿ, ಶುಂಠಿ, ಒಣದ್ರಾಕ್ಷಿ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆನಂತರ ಸೋಸಿ ಕುಡಿಯಬೇಕು.

9) ಎಳ್ಳಿನ ಎಣ್ಣೆ, ಕೊಬ್ಬರಿ ಎಣ್ಣೆ ಅಥವಾ ತುಪ್ಪದ ಎರಡು ಹನಿಗಳನ್ನು ಮೂಗಿನ ಹೊರಳಿನಲ್ಲಿ ಹಾಕಿಕೊಳ್ಳಬೇಕು.

10) ಎಲ್ಲಕ್ಕೂ ಮಹತ್ವದ್ದಾದದ್ದು ಏನೆಂದರೆ, ಯಾವಾಗಲೂ ಸಂತೋಷದಲ್ಲಿ ಖುಷಿ ಖುಷಿಯಾಗಿರಿ.

ಪ್ರತಿಯೊಬ್ಬರು ಬದಲಾದ ಜೀವನಕ್ಕೆ ಹೊಂದ ಬೇಕಾದರೆ ಏನಾದರೂ ಮಾಡಲೇಬೇಕು. ಬದಲಾದ ವಾತಾವರಣಕ್ಕೆ ನಮ್ಮ ಜೀವಿನಶೈಲಿಯಲ್ಲಿಯೂ ಸ್ವಲ್ಪ ಬದಲಾವಣೆಯನ್ನು ತರಬೇಕಾಗುತ್ತದೆ. ಮಳೆ ಮತ್ತು ಈ ತಂಪಾದ ವಾತಾವರಣದಲ್ಲಿ ಈ ಮೇಲಿನ ಸಲಹೆಗಳು ನಿಶ್ಚಿತವಾಗಿ ಲಾಭದಾಯಕವಾಗಿವೆ.