ಹಸಿದ ನಾಯಿ ಮರಿಗಳಿಗೆ ಹಾಲು ಕುಡಿಸಿದ ಹಸು! ಮನ ಮುಟ್ಟುವ ವಿಡಿಯೋ ವೈರಲ್!

ಜಗತ್ತಿನ ಅತ್ಯಂತ ಪವಿತ್ರವಾದ ಸಂಬಂಧವೆಂದರೆ, ತಾಯಿ ಮಗುವಿನ ವಾತ್ಸಲ್ಯದ ಸಂಬಂಧ. ಈ ಸಂಬಂಧ ಯಾವುದೇ ಸ್ವಾರ್ಥವಿರದ ನಿಸ್ವಾರ್ಥ ಪ್ರೀತಿ ಇದರಲ್ಲಿರುತ್ತದೆ. ಈ ಜಗತ್ತಿನಲ್ಲಿ ನಿಸ್ವಾರ್ಥದಿಂದ ವಾತ್ಸಲ್ಯವನ್ನು ಎರೆಯೋದು ಕೇವಲ ತಾಯಿ ಮಾತ್ರ. ತಾಯಿಯ ತ್ಯಾಗದ ಕುರಿತು ಅದೆಷ್ಟು ಹೊಗಳಿದರು ಸಾಲದು. ಮನುಜ ಕುಲದಲ್ಲಿ ಅಷ್ಟೇ ಅಲ್ಲ ಪ್ರಾಣಿಗಳೂ ಸಹ ತನ್ನ ಮರಿಗಳನ್ನು ಅದೆಷ್ಟೋ ಕಷ್ಟ ಬಂದರು ಸಾಕಿ ಸಲುಹುತ್ತವೆ.

ಕೆಲವು ಪ್ರಾಣಿಗಳು ತನ್ನ ಮರಿಗಳಲ್ಲದೆ ಇನ್ನಿತರ ಪ್ರಾಣಿಗಳ ಮರಿಗಳನ್ನು ಸಾಕಿ ಸಲುಹಿರುವ ಅದೆಷ್ಟೋ ಘಟನೆಗಳು ನಾವು ನೋಡಿದ್ದೇವೆ. ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅಂತಹದೇ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಒಂದು ಹಸು ಹಾಗೂ ಕೆಲವು ನಾಯಿ ಮರಿಗಳ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ಕೆಲವು ಹಸಿವಿನಿಂದ ಬಳಲುತ್ತಿರುವ ನಾಯಿ ಮರಿಗಳು ಹಾಗೂ ನಿಷ್ಕಲ್ಮಶ ಪ್ರೀತಿ ನೀಡುವ ಗೋಮಾತೆಯನ್ನು ನಾವು ಕಾಣಬಹುದು. ನಾಯಿ ಮರಿಗಳು ತನ್ನ ತಾಯಿಯನ್ನು ಕಳೆದುಕೊಂಡು ಹಸಿವಿನಿಂದ ಚೀರುತ್ತಿರುವಾಗ ಅಲ್ಲಿಂದಲೇ ಸಾಗುತ್ತಿದ್ದ ಗೋಮಾತೆ (ಹಸು) ಅದನ್ನು ಕೇಳಿಸಿಕೊಂಡು ಹಸಿವಿನಿಂದ ಬಳಲುತ್ತಿದ್ದ ಮರಿಗಳಿಗೆ ಅಲ್ಲಿಯೇ ಕುಳಿತುಕೊಂಡು ಅವುಗಳ ಹೊಟ್ಟೆ ತಣ್ಣಗಾಗುವವರೆಗೆ ಹಾಲು ಕುಡಿಸಿದೆ. ಈ ಹಾಲುಣಿಸುವ ದೃಶ್ಯ ತುಂಬಾ ಮನ ಮುಟ್ಟುವ ದೃಶ್ಯವಾಗಿದೆ. ಆದುದರಿಂದಲೇ ಹಸುವನ್ನು ದೇವರು ಎಂದು ಕರೆಯುತ್ತಾರೆ ಅಲ್ಲದೆ ಎಲ್ಲರೂ ಮಾತೆಯಂದು ಪೂಜೆಯನ್ನು ಸಹ ಮಾಡುತ್ತಾರೆ. ಪ್ರಸ್ತುತ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಲೇ ತುಂಬಾ ವೈರಲ್ ಆಗಿದೆ.

ವಿಡಿಯೋ ನೋಡಿ…..

ಪ್ರಸ್ತುತ ವಿಡಿಯೋ ಶೇರ್ ಮಾಡುತ್ತಾ ಸುಶಾಂತ್ ನಂದಾ ಒಂದು ಸುಂದರವಾದ ಹಾಗೂ ಭಾವುಕವಾದ ಕ್ಯಾಪ್ಶನ್ ಬರೆದಿದ್ದಾರೆ, ‘ತಾಯಂದಿರು ದೇವದೂತರಿದ್ದಂತೆ. ನಿಮ್ಮ ಮಕ್ಕಳ ನಡುವೆ ಮತ್ತು ದೇವರ ಮಕ್ಕಳ ನಡುವೆ ವ್ಯತ್ಯಾಸ ತೋರಿಸಬೇಡಿ’. ಪ್ರಸ್ತುತ ವಿಡಿಯೋ ವನ್ನು ಇದುವರೆಗೆ ಒಂಬತ್ತು ಸಾವಿರಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ, 1500 ಕ್ಕಿಂತ ಹೆಚ್ಚು ಲೈಕ್ಸ ಮತ್ತು 200 ಕ್ಕಿಂತ ಹೆಚ್ಚು ರಿಟ್ವಿಟ್ ಬಂದಿವೆ.

ಈ ವಿಡಿಯೋಗೆ ಹಲವಾರು ಕಾಮೆಂಟ್ಸ ಗಳು ಬಂದಿವೆ. ಅದರಲ್ಲಿ ಒಬ್ಬ ಯುಜರ್ಸ್,’ ಬಹಳಷ್ಟು ಮುದ್ದಾಗಿದ್ದಾಳೆ ನನ್ನ ತಾಯಿ, ನಾನು ನಿನ್ನನ್ನು ಪ್ರೀತಿಸುತ್ತೇನೆ’ ಅಂತ ಕಾಮೆಂಟ್ ಮಾಡಿದ್ದಾನೆ.

ಇನ್ನೊಬ್ಬ ಯುಜರ್ಸ್ ತನ್ನ ಕಾಮೆಂಟ್ ನಲ್ಲಿ “ತಾಯಿ ತಾಯಿನೇ, ತಾಯಿಗಿಂತ ದೊಡ್ಡವರು ಯಾರು ಇಲ್ಲ”, ಅಂತ ಬರೆದಿದ್ದಾರೆ.