ಕಾಡಿನಲ್ಲಿ ತಮ್ಮಷ್ಟಕ್ಕೆ ತಾವು ಹೋಗುತ್ತಿರುವ ಬೈಕ್ ಸವಾರರು, ಇದ್ದಕ್ಕಿದ್ದಂತೆ ತನ್ನ ಮರಿಗಳೊಂದಿಗೆ ಪ್ರತ್ಯಕ್ಷವಾದ ಸಿಂಹ! ನೋಡಿ ಈ ವೈರಲ್ ವಿಡಿಯೋ!
ಯಾವ ಸಮಯದಲ್ಲಿ ಏನು ಘಟಿಸುತ್ತೆ ಎಂಬುದು ಯಾರು ಹೇಳೊಕಾಗಲ್ಲ. ಕೆಲವು ಸಲ ನಾವು ನಮ್ಮದೇ ಗುಂಗಿನಲ್ಲಿ ಅಥವಾ ಇನ್ನಾವುದೋ ಲಹರಿಯಲ್ಲಿ ಹೋಗುತ್ತಿರುತ್ತೇವೆ, ಆಕಸ್ಮಿಕವಾಗಿ ನಮ್ಮ ಮುಂದೆ ಒಂದು ಚಿಕ್ಕ ಇಲಿ ಮರಿ ಬಂದರೂ ನಮ್ಮ ಜಂಘಾಬಲವೆ ಉಡುಗಿ ಹೋಗುತ್ತದೆ. ಈ ಅನುಭವ ಹೆಚ್ಚು ಕಡಿಮೆ ಎಲ್ಲರಿಗೂ ಆಗಿರುತ್ತೆ.
ಗುಜರಾತಿನ ಗೀರ್ ಅಭಯಾರಣ್ಯದಲ್ಲಿಯ ಒಂದು ವಿಡಿಯೋ ತುಂಬಾ ಸುದ್ದಿಯಲ್ಲಿದೆ. ಅಲ್ಲಿ ಇಬ್ಬರು ಬೈಕ್ ಮೇಲೆ ಕುಳಿತು ತಮ್ಮದೇ ಗುಂಗಿನಲ್ಲಿ ಮಾತಾಡುತ್ತಾ ಕಾಡಿನ ದಾರಿಯಿಂದ ಸಂಚರಿಸುತ್ತಿದ್ದಾರೆ. ಅವರಿಗೆ ಇನ್ನು ಮುಂದಿನ ಸಮಯದಲ್ಲಿ ಅಥವಾ ಕೆಲವೇ ಕ್ಷಣಗಳಲ್ಲಿ ಗೊತ್ತೇ ತಮ್ಮ ಭೆಟ್ಟಿ ತಾಯಿ ಹುಲಿಯ ಜೊತೆಗೆ ಆಗುವದಿವೆ ಎಂಬುದು ಪಾಪ ಗೊತ್ತೇ ಇಲ್ಲ. ಇದೊಂದು ಕಾಕತಾಳಿಯವೆಂದೇ ಹೇಳಬಹುದು. ಹುಲಿಯು ತನ್ನ ಮರಿಗಳೊಂದಿಗೆ ಕಾಡಿನ ರಸ್ಟೆಯಲ್ಲಿ ಸಂಚರಿಸುತ್ತಿರುವಾಗ ಯಾರೋ ಒಬ್ಬರು ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಹುಲಿಯ ಎದುರಿನಿಂದ ಇಬ್ಬರು ಬೈಕ್ ಸವಾರರು ಬರುತ್ತಾರೆ. ಅವರಿಬ್ಬರೂ ರಿಲ್ಯಾಕ್ಸ್ ನಲ್ಲಿ ಮಾತಾಡುತ್ತಾ ಬರುವಾಗ ಎದುರಿನ ಮರಿಗಳು ಮತ್ತು ತಾಯಿ ಹುಲಿಯನ್ನು ನೋಡಿ ಅವರ ಮಾತುಗಳೇ ಒಮ್ಮೆಲೇ ಬಂದ್ ಆಗಿ ಬಿಟ್ಟಿವೆ. ಇಲಿ ಕಾಲಲ್ಲಿ ಬಂದರೇನೆ ಒದ್ದಾಡುವ ನಾವುಗಳು ಇನ್ನು ಹುಲಿ ಮುಂದೆ ಬಂದಾಗ ಅವರಿಬ್ಬರ ಅವಸ್ಥೆ ಹೇಗಾಗಿರಬೇಡ, ನೀವೇ ಯೋಚಿಸಿ.

ಆದರೆ ದೇವರು ದೊಡ್ಡವನು, ಹುಲಿ ಅಥವಾ ಅದರ ಮರಿಗಳಿಗೆ ಬಹುಶಃ ಹಸಿವು ಆಗಿರಲಿಕ್ಕಿಲ್ಲ ಅಂತ ಅನಿಸುತ್ತೆ. ಹುಲಿಯು ಯಾವುದೇ ತೊಂದರೆ ಕೊಡದೆ ತನ್ನ ಮರಿಗಳನ್ನು ಜೊತೆಯಲ್ಲಿ ಕರೆದುಕೊಂಡು ತನ್ನ ದಾರಿ ಹಿಡಿದು ಕಾಡಿನಲ್ಲಿ ಹೋಯಿತು.
ವಿಡಿಯೋ ನೋಡಿ…
Lion with cubs leaves the way for motorcycle🙏
— Susanta Nanda IFS (@susantananda3) July 26, 2020
This is real co existence that has helped the lion to flourish in and around Gir. And the pride of the locals in these prides of Lions are awesome.. pic.twitter.com/oejiGtYyis
ಈ ಸುಂದರ ವೀಡಿಯೊವನ್ನು IFS ಅಧಿಕಾರಿ ಸುಸಾಂತ್ ನಂದಾ ಅವರು ತಮ್ಮ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.