ಚಲಿಸುವ ವಾಹನಗಳ ಹಿಂದೆ ನಾಯಿಗಳು ಯಾಕೆ ಬೆನ್ನಟ್ಟುತ್ತವೆ..? ಇದರ ಹಿಂದಿವೆ ಅಚ್ಚರಿ ಪಡಿಸುವ ಕಾರಣಗಳು!
ಭೂಮಂಡಲದಲ್ಲಿ ವಾಸಿಸುವ ಎಲ್ಲ ಪ್ರಾಣಿಗಳಲ್ಲಿ ನಿಯತ್ತಿನಿಂದ ಬದುಕುವ ಪ್ರಾಣಿಯಂದರೆ ಶ್ವಾನ. ನಿಯತ್ತಿಗೆ ಇನ್ನೊಂದು ಹೆಸರೇ ಶ್ವಾನ ಅಥವಾ ನಾಯಿ. ಈ ನಾಯಿಗಳ ನಿಯತ್ತು, ನಿಷ್ಠೆ, ನಂಬಿಕೆಗೆ ಬೇರೆ ಯಾವುದೇ ಪ್ರಾಣಿಯನ್ನು ಹೋಲಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಮನೆಯಲ್ಲಿ ನಾಯಿ ಸಾಕುವದು ಸಾಮಾನ್ಯವಾಗಿದೆ. ನಾಯಿಗಳಲ್ಲಿ ಎಷ್ಟೋ ಪ್ರಕಾರಗಳಿವೆ. ನಾಯಿ ತಮ್ಮ ಕುಟುಂಬದ ಸದಸ್ಯರ ಸಂರಕ್ಷಣೆ ಮಾಡುವದರ ಜೊತೆಗೆ ರಾತ್ರಿಯ ಸಮಯದಲ್ಲಿ ಮನೆಯನ್ನು ಸಹ ಕಾವಲು ಮಾಡುತ್ತದೆ. ಸಾಮಾನ್ಯವಾಗಿ ಎಲ್ಲ ನಾಯಿಗಳಲ್ಲಿ ಒಂದು ವಿಶೇಷತೆ ಇರುತ್ತದೆ ಅದೇನೆಂದರೆ. ಒಮ್ಮೆ ಯಾರಾದರೂ ಅದಕ್ಕೆ ತಿನ್ನಲು ಆಹಾರ ನೀಡಿದರೆ ಸಾಕು, ಆ ವ್ಯಕ್ತಿ ಮರಳಿ ಎಂದಾದರೂ ಸಿಕ್ಕರೆ ಆತನ ಬಳಿಗೆ ಹೋಗಿ ತನ್ನ ಬಾಲ ಅಲುಗಾಡಿಸುತ್ತ ತನ್ನ ಪ್ರೀತಿಯನ್ನು ತೋರುವದು. ಅಷ್ಟೇ ಅಲ್ಲ ಪದೇ ಪದೇ ನಾಯಿಗೆ ಆಹಾರ ನೀಡಿದರೆ ಸಾಕು ಅದು ನಿಮ್ಮನ್ನು ಸದಾ ಸಂರಕ್ಷಣೆ ಮಾಡಲು ಸಿದ್ಧವಾಗಿರುತ್ತದೆ. ಆದುದರಿಂದ ಅದು ನಿಮ್ಮ ಮನೆಯ ಹತ್ತಿರ ಅಥವಾ ಆಫೀಸ್ ಹತ್ತಿರವೂ ಬಂದು ನಿಲ್ಲುತ್ತದೆ.
ನಾಯಿಗಳು ಗಾಡಿಗಳ ಹಿಂದೆ ಬೆನ್ನು ಹತ್ತಿ ಬೊಗಳುವದನ್ನು ನೀವೂ ನೋಡಿರಬಹುದು ಅಥವಾ ನಿಮಗೆ ಅನುಭವವಾಗಿರಬಹುದು. ಅಷ್ಟಕ್ಕೂ ನಾಯಿಗಳು ವೇಗವಾಗಿ ಓಡುತ್ತಾ ಗಾಡಿಗಳ ಹಿಂದೆ ಏಕೆ ಬೆನ್ನಟ್ಟುತ್ತವೆ? ಈ ಪ್ರಶ್ನೆಗೆ ನಿಮ್ಮ ಹತ್ತಿರ ಉತ್ತರವಿದೆಯಾ? ಕೆಲವೊಬ್ಬರಿಗೆ ಗೊತ್ತಿರಬಹುದು ಇನ್ನೂ ಕೆಲವರಿಗೆ ಗೊತ್ತಿಲ್ಲದಿರಬಹುದು. ಆದರೆ ನಾವು ಇದರ ಹಿಂದಿನ ಕಾರಣದ ಬಗ್ಗೆ ತಿಳಿಸುವವರಿದ್ದೇವೆ.
ನಾಯಿಗಳು ಮನುಷ್ಯರಿಗೆ ಎಷ್ಟೋ ಸಹಾಯ ಮಾಡುವದು ನಾವೆಲ್ಲ ನೋಡಿದ್ದೇವೆ. ಮನೆಯಲ್ಲಿಯ ಚಿಕ್ಕ ಮಕ್ಕಳಿಂದ ವಯಸ್ಕರರವೆರೆಗೆ ಎಲ್ಲರಿಗೂ ನಾಯಿಯಂದರೆ ತುಂಬಾ ಪ್ರೀತಿ. ಅಷ್ಟೇ ಅಲ್ಲ ನಾಯಿಗೂ ಕೂಡಾ ಮನೆಯಲ್ಲಿಯ ಸದಸ್ಯರು ಕಂಡರೆ ತುಂಬಾ ಪ್ರೀತಿ. ಸಾಮಾನ್ಯವಾಗಿ ನಾಯಿಗಳು ಓಡುವ ಬೈಕ್ ಅಥವಾ ಕಾರನ್ನು ಬೆನ್ನಟ್ಟಿ ಬೊಗಳುತ್ತವೆ ಅಲ್ಲದೆ ಕೆಲವೊಮ್ಮೆ ಗಾಡಿ ನಡೆಸುವ ವ್ಯಕ್ತಿಯನ್ನು ಕಚ್ಚುತ್ತವೆ. ಈ ನಾಯಿಗಳ ತಮ್ಮದೇ ಆಗಿರತಕ್ಕಂಥ ಒಂದು ಏರಿಯಾ ಅಥವಾ ಕ್ಷೇತ್ರಗಳು ಹೊಂದಿರುತ್ತವೆ. ಆ ನಾಯಿ ವಾಸಿಸುವ ಕ್ಷೇತ್ರದಲ್ಲಿ ಬೇರೆ ಯಾರಾದರೂ ಹೊಸ ವ್ಯಕ್ತಿ ಬಂದರೆ ಸಾಕು, ಅವು ಜೋರಾಗಿ ಬೊಗಳುತ್ತವೆ ಅಲ್ಲದೆ ಆ ವ್ಯಕ್ತಿಯನ್ನು ಕಚ್ಚಲು ಸಹ ಪ್ರಯತ್ನ ಮಾಡುತ್ತವೆ. ತಮ್ಮ ಜಾಗದಿಂದ ಈ ವ್ಯಕ್ತಿಯನ್ನು ಓಡಿಸಬೇಕು ಎಂಬ ಉದ್ದೇಶದಿಂದ ನಾಯಿಗಳು ಈ ರೀತಿಯಾಗಿ ಮಾಡುತ್ತವೆ.

ಇನ್ನೊಂದು ಕಾರಣ ಸಾಮಾನ್ಯವಾಗಿ ನಾಯಿಗಳು ನಿಂತಿದ್ದ ಗಾಡಿಗಳ ಕೆಳಗಡೆ ಮಲಗಿ ಕೊಳ್ಳುತ್ತವೆ ಏಕೆಂದರೆ ಆ ಜಾಗ ತನ್ನದೇ ಇದೆ ಎಂದು ಬೀಗುತ್ತ ಅದರ ಕೆಳಗಡೆ ಆರಾಮಾಗಿ ಏನು ಯೋಚನೆ ಮಾಡದೆ ಮಲಗಿಕೊಳ್ಳುತ್ತವೆ. ಆದರೆ ಅವು ಮಲಗಿಕೊಂಡ ನಂತರ ಆ ಗಾಡಿಗಳು ಅಲ್ಲಿಂದ ಹೋಗುತ್ತವೆ ಆಗ ನಾಯಿಗಳು ತುಂಬಾ ನಿರಾಶೆಗೊಳ್ಳುತ್ತವೆ. ಕೆಲವೊಮ್ಮೆ ನಾಯಿಗಳು ಕೆಳಗಡೆ ಮಲಗಿಕೊಂಡ ಗಾಡಿ ಹೋಗುವಾಗ ಅವುಗಳಿಗೆ ಅಪಘಾತ ಸಹ ಆಗುತ್ತದೆ. ಆಗ ನಾಯಿ ಆ ಬಣ್ಣದ ಗಾಡಿಯನ್ನು ತನ್ನ ನೆನಪಿನಲ್ಲಿ ಇಟ್ಟಿಕೊಳ್ಳುತ್ತವೆ ಅಂತಹ ಯಾವುದೇ ಗಾಡಿಗಳನ್ನು ನೋಡಿದರೆ ಸಾಕು ನಾಯಿ ಸಿಟ್ಟಿನಿಂದ ಅದರ ಹಿಂದೆ ಓಡಿ ಕಚ್ಚಲು ಬೆನ್ನಟ್ಟುತ್ತವೆ. ಈ ಎರಡು ಕಾರಣಕ್ಕಾಗಿ ನಾಯಿಗಳು ತಮ್ಮ ಬದಿಯಿಂದ ವೇಗವಾಗಿ ಓಡುವ ಗಾಡಿಗಳಿಗೆ ಅಥವಾ ಬೈಕ್ ಗಳಿಗೆ ಬೊಗಳುತ್ತ ಬೆನ್ನಟ್ಟುತ್ತವೆ.
ಇನ್ನೊಂದು ಮಹತ್ವದ ಕಾರಣ ನಾಯಿಗಳ ಮುಂದಿನಿಂದ ಯಾರಾದರೂ ಅಥವಾ ಯಾವುದೇ ವಾಹನ ವೇಗವಾಗಿ ಹೋದರೆ ಸಾಧಾರಣವಾಗಿ ಇದು ನಾಯಿಗಳು ಸಹಿಸಿಕೊಳ್ಳುವದಿಲ್ಲ. ನನ್ನ ಮುಂದೆ ನನಗಿಂತಲೂ ವೇಗವಾಗಿ ಹೊಗುವವರೂ ಯಾರು? ಎಂದು ಒಂದು ರೀತಿಯಲ್ಲಿ ಅವುಗಳು ಇದನ್ನು ಚಾಲೆಂಜ್ ತರ ತೆಗೆದುಕೊಳ್ಳುತ್ತವೆ. ಈ ಕಾರಣದಿಂದಲೂ ಹೆಚ್ಚಾಗಿ ನಾಯಿಗಳು ವಾಹನಗಳಿಗೆ ಬೆನ್ನಟ್ಟುವದು ಸಹಜ.